ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ನಾಯಕತ್ವವನ್ನು ದೇಶ ಮತ್ತೊಮ್ಮೆ ನೆನಪಿಸಿಕೊಳ್ಳಲಿದೆ: ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಇಂದಿರಾ ನಾಯಕತ್ವವನ್ನು ದೇಶವು ಮತ್ತೊಮ್ಮೆ ನೆನಪಿಸಿಕೊಳ್ಳಲಿದೆ, ಕಾಂಗ್ರೆಸೇತರ ಪಕ್ಷಗಳೂ ಕೂಡ ಇಂದಿರಾಗಾಂಧಿಯನ್ನು ನೆನೆಯುವ ದಿನ ಬರಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಇಂದಿರಾಗಾಂಧಿ ಪುಣ್ಯತಿಥಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿ, ಇಂದು ಬಿಜೆಪಿ ಪಕ್ಷ ಗುಜರಾತ್ ನಲ್ಲಿ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸಿದೆ. ಇದನ್ನು ನಾವು ಬಿಜೆಪಿಯವರು ಮಾಡಿದರು ಎಂದು ತಪ್ಪಾಗಿ ಭಾವಿಸದೇ, ಈ ರೀತಿ ಕಾಂಗ್ರೆಸೇತರರು ಪಟೇಲರ ಸಾಧನೆಯನ್ನು ಗುರುತಿಸಿದ್ದಕ್ಕೆ ಹೆಮ್ಮೆ ಪಡುವ ಕಾರ್ಯ ಮಾಡಬೇಕು ಎಂದರು.

ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿ ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯ ಸ್ಮರಣೆ ಮಾತ್ರವಲ್ಲದೇ ಸರ್ದಾರ್ ವಲ್ಲಭಾಬಾಯಿ ಪಟೇಲರ ಜನ್ಮದಿನ ಆಚರಣೆ ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರ್ ಹಾಗೂ ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಗಾಂಧೀಜಿಯವರನ್ನು ರಾಜಕೀಯ ಎದುರಾಳಿಗಳೇ ಒಪ್ಪಿಕೊಂಡಿದ್ದರು

ಗಾಂಧೀಜಿಯವರನ್ನು ರಾಜಕೀಯ ಎದುರಾಳಿಗಳೇ ಒಪ್ಪಿಕೊಂಡಿದ್ದರು

ಗಾಂಧೀಜಿಯವರನ್ನೇ ರಾಜಕೀಯ ಎದುರಾಳಿಗಳೇ ಮೆಚ್ಚಿ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರ ಲಾಲ್ ನೆಹರು ಅವರನ್ನೂ ಒಪ್ಪುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ವಿಭಜನೆ ಸಂದರ್ಭದಲ್ಲಿ, ಪಂಜಾಬ್ ಕ್ರಾಂತಿ ವೇಳೆ ಕೂಡ ಇಂದಿರಾಗಾಂಧಿ ಶ್ರಮಿಸಿದ್ದರು. ದೇಶ ವಿಭಜನೆ ತಡೆದಿದ್ದರು. ಇವರ ಕೊಡುಗೆಯನ್ನು ಇಂದಿನ ರಾಜಕಾರಣಿಗಳು ನೆನೆಯಬೇಕಿದೆ.

ಸರ್ದಾರ್ ಪಟೇಲ್, ನೆಹರು ಇಬ್ಬರೂ ಅಪ್ರತಿಮ ಹೋರಾಟಗಾರರು

ಸರ್ದಾರ್ ಪಟೇಲ್, ನೆಹರು ಇಬ್ಬರೂ ಅಪ್ರತಿಮ ಹೋರಾಟಗಾರರು

ವಲ್ಲಭಭಾಯಿ ಪಟೇಲ್ ಹಾಗೂ ನೆಹರು ಇಬ್ಬರೂ ದೇಶ ಕಂಡ ಅಪ್ರತಿಮ ಹೋರಾಟಗಾರರು. ಮುಂದೊಂದು ದಿನ ಇಂದಿರಾಗಾಂಧಿ ಕೊಡುಗೆಯನ್ನು ಕಾಂಗ್ರೆಸೇತರ ಪಕ್ಷಗಳು ಕೊಂಡಾಡುವ ದಿನ ಬರಲಿದೆ ಎಂದು ಆಶಿಸಿದರು.

ಇಂದಿರಾ ವಿಷಯದಲ್ಲಿ ಪವಾಡ ಮಾಡಿದ್ದ ಮಹಾಕಾಳೇಶ್ವರನ ನೆಲೆಗೆ ರಾಹುಲ್! ಇಂದಿರಾ ವಿಷಯದಲ್ಲಿ ಪವಾಡ ಮಾಡಿದ್ದ ಮಹಾಕಾಳೇಶ್ವರನ ನೆಲೆಗೆ ರಾಹುಲ್!

ಸ್ವಾತಂತ್ರ್ಯ ಚಳವಳಿಯಲ್ಲಿ ಇಂದಿರಾ ಭಾಗಿ

ಸ್ವಾತಂತ್ರ್ಯ ಚಳವಳಿಯಲ್ಲಿ ಇಂದಿರಾ ಭಾಗಿ

ಸ್ವಾತಂತ್ರ್ಯ ಚಳವಳಿಯಲ್ಲಿ ಇಂದಿರಾ ಗಾಂಧಿ ತೊಡಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಸ್ವಾತಂತ್ರ್ಯ ಬಂದ ನಂತರ ಇಡೀ ರಾಜಕಾರಣದ ದಿಕ್ಕನ್ನೇ ಬದಲಿಸಿದರು. ಸಾಮಾನ್ಯರು ಕೂಡ ರಾಜಕೀಯ ದಲ್ಲಿ ಮೆರೆಯಬಹುದು ಎನ್ನುವುದನ್ನು ತೋರಿಸಿ, ರಾಜಕೀಯ ವಿಕೇಂದ್ರೀಕರಣ ಮಾಡಿದರು. ಜಾತಿ, ಹಣ ಬಲ ಇಲ್ಲದೇ ಅಧಿಕಾರ ಹೊಂದಬಹುದು ಎಂಬುದನ್ನು ತೋರಿಸಿದರು. ಹುತಾತ್ಮರಾದ ದಿನ ನೆನೆಯುವ ಸಂದರ್ಭ ಅವರ ಸಾಧನೆಯನ್ನು ಅರಿಯಬೇಕು. ನಮ್ಮ ಸಾಧನೆ ಹೇಳಿಕೊಳ್ಳದಿರುವುದು, ಯಾರಾದರೂ ಅವಮಾನಿಸಿದಾಗ ಹೌದೆಂಬಂತೆ ಮೌನವಹಿಸುವುದು ನಮ್ಮ ದೌರ್ಬಲ್ಯ ಎಂದರು.

ಇಂದಿರಾ ಬಗ್ಗೆ ಎರಡೂ ವಿಧದ ಟೀಕೆ ಇತ್ತು

ಇಂದಿರಾ ಬಗ್ಗೆ ಎರಡೂ ವಿಧದ ಟೀಕೆ ಇತ್ತು

ಇಂದಿರಾ ಬಗ್ಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ವಿಧದ ಟೀಕೆಗಳಿಗೆ. ಸಾಧನೆ, ಲೋಪ ಒಂದೊಂದು ತಕ್ಕಡಿಯಲ್ಲಿ ಹಾಕಿದಾಗ‌ ಲೋಪ ಕಡಿಮೆ ಇದೆ. ಸಾಧನೆ ದೊಡ್ಡದು. ಪಾಕಿಸ್ತಾನ, ಬಾಂಗ್ಲಾ ದೇಶ ವಿಭಜನೆ ಸಂದರ್ಭ ಇವರು ಕೈಗೊಂಡ ನಿಲುವು ಎಲ್ಲರೂ ಮೆಚ್ಚುವಂತದ್ದು. ಪ್ರತಿಪಕ್ಷಗಳೇ ಮೆಚ್ಚಿ ಹೊಗಳಿದ್ದವು. ಪ್ರಶಂಸೆ ಪಡೆಯುವ ಗುಣ ಇಂದಿರಾಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಇದೆ. ಅಂದು ವಿಷಯಾಧಾರಿತ ರಾಜಕಾರಣ ಇತ್ತು.

ಇಂದು ವ್ಯಕ್ತಿ ಆಧಾರಿತ, ನಿಂದನೆ ಆಧಾರಿತ ರಾಜಕಾರಣ ಇದೆ. ಪಕ್ಷ, ಸಿದ್ಧಾಂತ, ಸಾಧನೆಗೆ ಬೆಲೆ ಸಿಗಬೇಕು. ರಾಜಕೀಯದಲ್ಲಿ ಜಾತಿ, ಪ್ರಭಾವ, ಹಣ, ಮತ ಸೆಳೆಯುವ ಶಕ್ತಿ ಕೆಲಸ ಮಾಡಬಾರದು. ಇಂತವರಿಗೆ ಅವಕಾಶ ಸಿಕ್ಕಾಗ ನಿಷ್ಠರು ಮೂಲೆಗುಂಪಾಗುತ್ತಾರೆ. ಇಂದು ಕಾಂಗ್ರೆಸ್ ಇಂತಹ ಸಮಸ್ಯೆ ಎದುರಿಸುತ್ತಿದೆ. ಇಂದಿರಾಗಾಂಧಿ ಇದನ್ನು ತಡೆದಿದ್ದರು. ಅಂತಹ ಅವಕಾಶ ಮತ್ತೆ ಬಂದು ಅವರ ಆತ್ಮಕ್ಕೆ ಗೌರವ ಸಲ್ಲಿಸುವ ಕಾರ್ಯ ಆಗಬೇಕೆಂದರು.

ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ

English summary
Senior Congress leader B.L.Shankar has opined that nation will remember daring ness and commitment towards poor of Indira Gandhi once again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X