ಪ್ರತಾಪ್ ಸಿಂಹ ಬಂಧನ : ಬೆಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಪ್ರತಿಭಟನೆ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04 : ಹುಣಸೂರಿನಲ್ಲಿ ಹನುಮ ಮಾಲಾ ಧಾರಿಗಳ ಮೇಲೆ ಲಾಠಿ ಝಳಪಿಸಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪೊಲೀಸ್ ಅತಿರೇಕದ ಕ್ರಮ ಖಂಡಿಸಿ ಬೆಂಗಳೂರು ಬಿಜೆಪಿ ಯುವ ಮೋರ್ಚಾ ಕಾರ್ಯರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಪ್ತಗಿರಿ ಗೌಡ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್

ಹುಣಸೂರಿನಲ್ಲಿ ನಿಷೇಧಾಜ್ಞೆ ಮಧ್ಯೆಯೂ ಹನುಮ ಜಯಂತಿ ಮೆರವಣಿಗೆಗೆ ಮುಂದಾದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಭಾನುವಾರ ತಡೆದಿದ್ದು, ಮೆರವಣಿಗೆಗೆ ಹೊರಡುವ ಮುನ್ನವೇ ಭಕ್ತರು ಹಾಗೂ ಸಂಸದಪ್ರತಾಪ್ ಸಿಂಹ ಅವರನ್ನು ಬಂಧಿಸಲಾಗಿತ್ತು.

BJP Yuva Morcha protest against MP arrest

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ, ಹನುಮ ಭಕ್ತರನ್ನು ವಶಕ್ಕೆ ಪಡೆದಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಹನುಮ ಜಯಂತಿಯ ಮೆರವಣಿಗೆಗೆ ಸಿದ್ಧವಾಗಿದ್ದ ಐವತ್ತಕ್ಕೂ ಅಧಿಕ ಭಕ್ತರನ್ನು ಕೂಡ ಬಂಧಿಸಲಾಗಿತ್ತು.

ಪ್ರತಾಪ್ ಸಿಂಹ ಬಿಡುಗಡೆ, ಡಿ 4.ರಂದು ಹುಣಸೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಇನ್ನು ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ಬಂಧಿಸಲು ಮುಂದಾದಾಗ ವೇಗವಾಗಿ ಕಾರು ಡ್ರೈವಿಂಗ್ ಮಾಡಿದ್ದರು.

BJP Yuva Morcha protest against MP arrest

ಪ್ರತಾಪ್ ಸಿಂಹ ಅತ್ಯಂತ ವೇಗದಿಂದ ಕಾರನ್ನು ಪೊಲೀಸರ ಬ್ಯಾರಿ ಕೇಡ್ ಮೇಲೆ ಹತ್ತಿಸಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದರು. ಈ ಘಟನೆ ಬಳಿಕ ಮೈಸೂರಿನಲ್ಲಿಯೇ ಹಮುಮ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಾಪ್ ಸಿಂಹ ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP Bengaluru sity Yuva morcha protest against Govt for illegally arresting sri Pratap simha and denying permission for Hanuma Jayanti in Mysuru at Mysuru bank circle this morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ