ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಕಾಂಗ್ರೆಸ್ ಸದಸ್ಯೆ ಬಂಧನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು , ಮಾರ್ಚ್ 16: ಮಾರ್ಚ್ 14 ರಂದು ಬೆಳಗ್ಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಆರ್ ಎಸ್ ಎಸ್, ಬಿಜೆಪಿ ಕಾರ್ಯಕರ್ತ, ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬೊಮ್ಮಸಂದ್ರ ಪುರಸಭೆಯ ಕಾಂಗ್ರೆಸ್ ಸದಸ್ಯೆ ಸರೋಜಮ್ಮ ಎಂಬುವವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.[ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ]

ಶ್ರೀನಿವಾಸ್ ಮತ್ತು ಸರೋಜಮ್ಮ ನಡುವೆ ಹಲವು ದಿನಗಳಿಂದ ರಾಜಕೀಯ ದ್ವೇಷ ಇತ್ತು ಎನ್ನಲಾಗುತ್ತಿದೆ. ಈ ಹತ್ಯೆಯಲ್ಲಿ ಸರೋಜಮ್ಮ ಅವರ ಪುತ್ರ ಮಂಜು ಕೈವಾಡವಿದೆ ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಮಧು, ನಾರಾಯಣಸ್ವಾಮಿ, ಮಂಜುನಾಥ್ ಮತ್ತು ಮುರಳೀ ಎಂಬುವವರು ತಾವು ಸರೋಜಮ್ಮನ ಮಗ ಮಂಜುನ ಸ್ನೇಹಿತರು, ಹಣದಾಸೆಗಾಗಿ ಈ ಕೆಲಸ ಮಾಡಿದ್ದೇವೆಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಬಿಜೆಪಿ ಮುಖಂಡನ ಹತ್ಯೆ: ತನಿಖೆಗೆ ತಂಡ ರಚನೆ]

BJP workes' murder: Police arrest Congress member

ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸರೋಜಮ್ಮಗೆ ಶ್ರೀನಿವಾಸ್ ಪ್ರಸಾದ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಅದೂ ಅಲ್ಲದೆ ಇಬ್ಬರ ನಡುವೆ ನಡೆದಿದ್ದ ಕಾನೂನು ಹೋರಾಟವೊಂದರಲ್ಲೂ ಶ್ರೀನಿವಾಸ್ ಪ್ರಸಾದ್ ಗೆದ್ದಿದ್ದರು. ಕೊಲೆಗೆ ಈ ಎಲ್ಲವೂ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರಾದರೂ ಮತ್ತಷ್ಟು ತನಿಖೆ ನಡೆದ ನಂತರವಷ್ಟೇ ಸತ್ಯ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru police arrested Bommasandra muncipal counsil member Sarojamma in the connection to the murder of BJP and RSS activist Shrinivas Prasad.
Please Wait while comments are loading...