ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರಿಗೆ ಸಂಕಷ್ಟ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10 : ಇಂದು (ಶುಕ್ರವಾರ) ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡು ಟಿಪ್ಪುನನ್ನು ಗುಣಗಾನ ಮಾಡಿದ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಜ್ಯ ಬಿಜೆಪಿ ಮುಂದಾಗಿದೆ.

In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

ಶಾಸಕ ಆನಂದ್ ಸಿಂಗ್, ಸತೀಶ್ ರೆಡ್ಡಿ ಸೇರಿದಂತೆ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

BJP will take action against those who our leaders took part in Tipu Jayanti celebration says Jagadish Shettar

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, "ಟಿಪ್ಪು ಜಯಂತಿಯನ್ನು ಕೇವಲ ಓಟ್ ಬ್ಯಾಂಕ್‌ ಗಾಗಿ ಮಾಡಲಾಗುತ್ತಿದೆ. ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ. ಟಿಪ್ಪು ಜಯಂತಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಹಾಗಾಗಿ ನಾವು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದೇವೆ "ಎಂದರು.

ಟಿಪ್ಪು ಜಯಂತಿ ವಿರೋಧಿಸಬೇಕು ಎನ್ನುವುದು ಪಕ್ಷದ ಸ್ಪಷ್ಟ ತೀರ್ಮಾನವಾಗಿದೆ.ನಮ್ಮ ಕೆಲವು ನಾಯಕರು ಇವತ್ತಿನ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ಧ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದೇನಿದು? ಬಿಜೆಪಿ ನಾಯಕರಿಂದಲೇ ಟಿಪ್ಪು ಜಯಂತಿಗೆ ಜೈಕಾರ..ಧಿಕ್ಕಾರ..!

ಹೊಸಪೇಟೆಯ ವಿಜಯನಗರ ಶಾಸಕ ಆನಂದ್ ಸಿಂಗ್, ಶಹಾಪುರ ಶಾಸಕ ಗುರು ಪಾಟೀಲ ಶಿರವಾಳ, ರೆಡ್ಡಿ ಬ್ರದರ್ಸ್ ಗ್ರೂಪ್ ನ ಆಪ್ತ ಹಾಗೂ ಕಾರ್ಪೋರೆಟರ್ ಗೋವಿಂದ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ.

ಇನ್ನು ಬೆಂಗಳೂರಿನ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಫೋಟೋವನ್ನು ಟಿಪ್ಪು ಜಯಂತಿಯ ಶುಭಾಶಯಗಳು ಎನ್ನುವ ಪ್ಲೆಕ್ಸ್ ನಲ್ಲಿ ಹಾಕಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP will take action against those who took part in Tipu Jayanti celebration says Opposition leader Jagadish Shettar in Vidhan Soudha, Bengaluru on November 10th .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ