ನೂತನ ಉಪರಾಷ್ಟ್ರಪತಿ ನಾಯ್ಡು ಅವರಿಗೆ ಬಿಎಸ್ ವೈ ಶುಭಹಾರೈಕೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿಗಳಾಗಿ ಚುನಾಯಿತರಾಗಿರುವ ಎಂ. ವೆಂಕಯ್ಯ ನಾಯ್ಡು ಅವರನ್ನು ಸನ್ಮಾನಿಸಲಾಯಿತು.

ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಕ್ತಿಚಿತ್ರ

ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಮಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಶುಭಕೋರಿದರು.

BJP state president BSY wishes new vice president Venkaiah Naidu
Ram Nath Kovind, 14th Indian President :Few Interesting Facts Said In The Video | Oneindia Kannada

"ಮಣ್ಣಿನ ಮಗನಾದ ನಾಯ್ಡು ಅವರು ಸಾಧಾರಣ ರೈತ ಕುಟುಂಬದಿಂದ ಬಂದವರು. ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಬಲಿಷ್ಠ ಭಾರತದ 2ನೇ ಪರಮೋಚ್ಚ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಎಂ ವೆಂಕಯ್ಯ ನಾಯ್ಡು ರವರು ನಡೆದು ಬಂದ ದಾರಿ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ. ಕರ್ನಾಟಕದಿಂದ 3 ಬಾರಿ ರಾಜ್ಯಸಭೆಗೆ ಚುನಾಯಿತರಾಗಿ ಸೇವೆ ಸಲ್ಲಿಸಿರುವ ವೆಂಕಯ್ಯ ನಾಯ್ಡು ಅವರ ಮುಂದಿನ ಹಾದಿ ಸುಗಮವಾಗಿರಲಿ" ಎಂದು ಯಡಿಯೂರಪ್ಪ ಹಾರೈಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP state president and former chief minister of Karnataka B S Yeddyurappa has wished newly appointed vice president of India Venkaiah Naidu in a programme which had taken place in Palace ground Bengaluru on Aug 6th.
Please Wait while comments are loading...