ಶೋಭಾ ಕರಂದ್ಲಾಜೆಯವರಿಗೆ ಮತೀಯ ಸಂಘಟನೆಗಳಿಂದ ಜೀವಬೆದರಿಕೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 13: ಬಂಟ್ವಾಳದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಹಿಂದೂಪರ ಸಂಘಟನೆಗಳ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕಾರಣಕ್ಕಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೆಲ ಮತೀಯ ಸಂಘಟನೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

'ದಲಿತರನ್ನು ಶೋಭಾ ಮದುವೆಯಾಗಲಿ' - ದಿನೇಶ್‌ ಗುಂಡೂರಾವ್‌ ತಿರುಗೇಟು

ಬೆದರಿಕೆ ಕರೆಗಳು ಬಂದಿರುವ ಕಾರಣ ಸಾರ್ವಜನಿಕ ಜೀವನದಲ್ಲಿ, ಸಭೆ-ಸಮಾರಂಭದಲ್ಲಿ ಎಚ್ಚರಿಕೆಯಿಂದಿರುವಂತೆ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆಯವರಿಗೆ ಅವರ ಆಪ್ತ ಪೊಲೀಸ್ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.

BJP MP Shobha Karndlaje has threat to life: BJP sources said

ಜುಲೈ 4ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಚಿಕಿತ್ಸೆ ಫಲಿಸದೆ ನಿನ್ನೆ(ಜು.7) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಂಗಳೂರಿನ ಬಿ.ಸಿ ರೋಡಿನಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯ ನಂತರ ಪೂರ್ತಿ ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ದಿನೇ ದಿನೇ ಪ್ರತಿಭಟನೆ ನಡೆಸುತ್ತಿದ್ದವು.

ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್

ಸಂಸದ ನಳಿನ್ ಕುಮಾರ್ ಕಟಿಲ್ ಮತ್ತು ಶೋಭಾ ಕರಂದ್ಲಾಜೆ ಅವರು ಜು.7 ರಂದು ನಡೆದ ಬಂಟ್ವಾಳ ತಾಲೂಕು ಹಿಂದುಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ, ಅವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಎಫ್ ಐಆರ್ ಸಹ ದಾಖಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After RSS worker Sharat Madival's murder case in Bantwal, BJP member of parliament Shobha Karndlaje has threat to life, BJP sources said. A police officer who is very close to Karndlaje told her to be careful in public life.
Please Wait while comments are loading...