ಕಾಂಗ್ರೆಸ್ನವರದ್ದು ಗಳಿಗೆಗೊಂದು ಮಾತು: ಲಿಂಬಾವಳಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಕಾಂಗ್ರೆಸ್‌ ಮುಂಡರ ಮಾತುಗಳು ಹಿಟ್ ಆಂಡ್ ರನ್ ರೀತಿ, ಮೊದಲು ಹೇಳಿಬಿಡುತ್ತಾರೆ ಆಮೇಲೆ ನಾನು ಹಾಗಂದಿಲ್ಲ ಎಂದು ಸಮಜಾಯಿಶಿ ಕೊಡುತ್ತಾರೆ, ಅವರದ್ದು ಗಳಿಗೊಂದು ಮಾತು ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಸಲು ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಮೊದಲು ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಉಗ್ರ ಎಂದರು, ಈಗ ನಾನು ಹಾಗೆ ಹೇಳಿಲ್ಲ ಹೀಗೆ ಹೇಳಿದ್ದೆ ಎಂದು ಮಾತು ತಿರುಗಿಸುತ್ತಿದ್ದಾರೆ, ಕಾಂಗ್ರೆಸ್ ಮುಖಂಡರದ್ದೆಲ್ಲಾ ಇದೇ ಕತೆ ಎಂದು ಜರಿದರು.

ಮಲ್ಲೇಶ್ವರಂನಲ್ಲಿ ವಿವೇಕ ಜಯಂತಿ, ಕಲಾಂ ಸ್ಮರಣೆ

ದಿನೇಶ್ ಗುಂಡೂರಾವ್ ಅವರು ತಮ್ಮ ಮಾತಿನ ಮೇಲೆ ಹಿಡಿತ ಹೊಂದಬೇಕು, ಬಿಡುಬೀಸು ಮಾತು ರಾಜಕಾರಣಿಗಳಿಗೆ ಒಳ್ಳೆಯದಲ್ಲ ಎಂದು ಬುದ್ಧಿವಾದ ಹೇಳಿದ ಅವರು, ಬಿಜೆಪಿಯಂತಹಾ ಇತಿಹಾಸವಿರುವ ಪಕ್ಷವನ್ನು ಉಗ್ರ ಸಂಘಟನೆಗೆ ಹೋಲಿಸಿರುವುದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದಿದ್ದಾರೆ.

BJP MLA Aravinda Limbavali lambasted on CM and Dinesh Gundurao

ಬಿಜೆಪಿ, ಆರ್‌ಎಸ್‌ಎಸ್ ಅನ್ನು ಉಗ್ರ ಸಂಘಟನೆಗಳಿಗೆ ಹೋಲಿಸಿರುವ ಮುಖ್ಯಮಂತ್ರಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೂಡಲೇ ಕ್ಷಮಾಪಣೆ ಕೇಳಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಗುಡುಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MLA Aravinda Limbavali said congress leaders just must watch their words before talking about BJP and RSS. He demand apology from CM and Dinesh Gundurao for them statements about BJP and RSS.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ