'ಬಿಎಸ್‌ವೈ ಬಿಬಿಎಂಪಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿಲ್ಲ'

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 01 : 'ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿಯಲ್ಲಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅಶೋಕ್ ಅವರು, 'ಅಧಿಕಾರಕ್ಕೆ ಬರುವುದಕ್ಕೆ ಯಾರೂ ಅಡ್ಡಿ ಪಡಿಸುವುದಿಲ್ಲ. ಹಿಂದೆ ನಡೆದ ತಪ್ಪು ಮರುಕಳಿಸಂತೆ ಎಚ್ಚರವಹಿಸಲಾಗುತ್ತದೆ. ಯಡಿಯೂರಪ್ಪ ಅವರ ಜೊತೆ ಮೈತ್ರಿ ಬಗ್ಗೆ ಒಮ್ಮೆ ಮಾತುಕತೆ ನಡೆಸಲಾಗಿದೆ' ಎಂದರು.[ಬಿಬಿಎಂಪಿ ಮೈತ್ರಿ : ಸೆ.3ಕ್ಕೆ ಜೆಡಿಎಸ್ ಮಹತ್ವದ ಸಭೆ]

BJP may join hands with JDS for BBMP Mayoral poll

'ಬೆಂಗಳೂರನ್ನು ಪ್ರತಿನಿಧಿಸುವ ನಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಬಿಬಿಎಂಪಿಯ ಸದಸ್ಯರ ಜೊತೆ ಮೈತ್ರಿ ಕುರಿತು ಮಾತುಕತೆ ನಡೆಸುತ್ತೇವೆ. ನಂತರ ನಿರ್ಧಾರವನ್ನು ಯಡಿಯೂರಪ್ಪ ಅವರಿಗೆ ತಿಳಿಸುತ್ತೇವೆ' ಎಂದು ಅಶೋಕ್ ಹೇಳಿದರು.[ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟ ಜೆಡಿಎಸ್!]

ಸದ್ಯ, ಮೇಯರ್ ಆಗಿರುವ ಬಿ.ಎನ್.ಮಂಜುನಾಥ್ ರೆಡ್ಡಿ (ಕಾಂಗ್ರೆಸ್) ಮತ್ತು ಉಪ ಮೇಯರ್ ಎಸ್.ಪಿ.ಹೇಮಲತಾ (ಜೆಡಿಎಸ್) ಅವರ ಅಧಿಕಾರಾವಧಿ ಸೆಪ್ಟೆಂಬರ್ 14ರಂದು ಕೊನೆಗೊಳ್ಳಲಿದೆ. ಸೆ.19ರಂದು ನೂತನ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.[ಬಿಬಿಎಂಪಿಯಲ್ಲಿ ಯಾರಿಗೆ ಬೆಂಬಲ?, ಜೆಡಿಎಸ್ ನಡೆ ನಿಗೂಢ]

ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವ ಕುರಿತು ಚರ್ಚೆ ನಡೆಸಲು ಸೆ.3ರಂದು ಜೆಡಿಎಸ್ ಬಿಬಿಎಂಪಿ ಸದಸ್ಯರ ಸಭೆ ಕರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister R.Ashok said, his party has decided to join hands with JDS in Bruhat Bengaluru Mahanagara Palike (BBMP) mayoral election scheduled on September 19, 2016. Will announce decision soon.
Please Wait while comments are loading...