ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿಯವರಿಗೆ ಶೃಂಗೇರಿ ಶಾರದೆಯ ಆಶೀರ್ವಾದ ಬೇಡಿದ ಬಿಜೆಪಿ!

|
Google Oneindia Kannada News

Recommended Video

ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಹೋಗಿರುವ ಎಚ್ ಡಿ ಕುಮಾರಸ್ವಾಮಿಗೆ ಬಿಜೆಪಿಯಿಂದ ವ್ಯಂಗ್ಯವಾದ ಟ್ವೀಟ್

ಬೆಂಗಳೂರು, ಸೆಪ್ಟೆಂಬರ್ 22: ಶೃಂಗೇರಿ ಶಾರದಾಂಬೆಯ ದರ್ಶನಕ್ಕೆಂದು ತೆರಳಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ದೇವಿಯು ಅನುಗ್ರಹ ನೀಡಲಿ ಎಂದು ಕರ್ನಾಟಕ ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

ಎಚ್‌ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರುಎಚ್‌ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

"ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ ಎಚ್ ಡಿ ಕುಮಾರಸ್ವಾಮಿಯವರೇ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, ಕುಮಾರಸ್ವಾಮಿಯವರ ಟೆಂಪಲ್ ರನ್ ಅನ್ನು ಟೀಕಿಸಿದೆ.

'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!

"100 ದಿನದ ತಮ್ಮ ಅಧಿಕಾರಾವಧಿಯಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳಿಗೆ ಮುಖ್ಯಮಂತ್ರಿಗಳು ತೆರಳಿದ್ದಾರೆ. ಆದರೂ ತಮ್ಮ ಗೂಂಡಾಗಳನ್ನು ದಂಗೆಗೆ ಕರೆಯವ ಅವರ ಮನಸ್ಥಿತಿ ಬದಲಾಗಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಗುಣಗಳು ಹೋಗದೆ ಇದ್ದರೆ ನೀವು ಎಷ್ಟು ದೇವಾಲಯಕ್ಕೆ ತೆರಳಿದರೂ ಪ್ರಯೋಜನವಿಲ್ಲ" ಎಂದು ಶಾಸಕ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

BJP Karnataka prays Sringeri Sharadamba to bless HD Kumaraswamy with good charity!

ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, 'ಬಿಎಸ್ ಯಡಿಯೂರಪ್ಪ ಅವರು ಪದೇ ಪದೇ ಸಮ್ಮಿಶ್ರ ಸರ್ಕಾರದ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದರೆ, ಬಿಜೆಪಿ ವಿರುದ್ಧ ದಂಗೆ ಏಳಲು ಜನರಿಗೆ ನಾನೇ ಕರೆ ನೀಡುತ್ತೇನೆ' ಎಂಬ ಹೇಳಿಕೆ ನೀಡಿದ್ದರು. ರಾಜ್ಯದ ಮುಖ್ಯಮಂತ್ರಿಯೇ ಹೀಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂಥ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು.

English summary
BJP Karnataka on it's twitter handle prays Sringeri Goddess Sharadamba's blessings to CM HD Kumaraswamy. Prays Goddess to bless him with good charity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X