ಮುನಿಸಿಕೊಂಡವರ ಜತೆ ಯಡಿಯೂರಪ್ಪ ಮಾತುಕತೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 16: ಬಿಜೆಪಿಯಲ್ಲಿರುವ ಬಿಕ್ಕಟ್ಟು ಉಲ್ಬಣವಾಗುವ ಮುಂಚೆ ಎಚ್ಚೆತ್ತುಕೊಳ್ಳುವಂತೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಯಡಿಯೂರಪ್ಪ ಅವರು ಅತೃಪ್ತರೆನಿಸಿದ ಭಾನುಪ್ರಕಾಶ್ ಸೇರಿದಂತೆ ಕೆಲವರ ಜೊತೆ ಮಾತುಕತೆ ನಡೆಸಲು ಜನವರಿ 19 ರಂದು ಚರ್ಚೆಗೆ ಆಹ್ವಾನಿಸಿದ್ದಾರೆ.

ಇದಕ್ಕೂ ಮುನ್ನ ಜನವರಿ 17 ರಂದು ಕೇಶವಕೃಪಾದಲ್ಲಿ ಕೆಲ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಪಕ್ಷದ ಮುಖಂಡರು,ಆರೆಸ್ಸೆಸ್ ನಾಯಕರು ಸಭೆ ಕರೆದಿದ್ದಾರೆ. ನಂತರ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಸಮಾಧಾನದ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

BJP Crisis : Yeddyurappa to meet dissidents on Jan 19

ಅದರ ಬಗ್ಗೆ ಚರ್ಚಿಸಲು ಹೋಗುತ್ತಿರುವುದಾಗಿ ಹೇಳಿದ ಅವರು, ಯಾವುದೇ ಅತೃಪ್ತರು ಬರೆದಿರುವ ಪತ್ರ ನನಗೆ ತಲುಪಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು. ವಿಶೇಷ ಸಂದರ್ಭದಲ್ಲಿ ನಾವು ಸೇರುವುದು ಸಾಮಾನ್ಯ. ಅದೇ ರೀತಿ ನಾವು ಸೇರಿ ಚರ್ಚಿಸುತ್ತೇವೆ ಎಂದರು. ಜನವರಿ 21 ಮತ್ತು 22 ರಂದು ರಾಜ್ಯ ಕಾರ್ಯಕಾರಿಣಿ ಕಲಬುರಗಿಯಲ್ಲಿ ನಡೆಯಲಿದ್ದು, ಈಶ್ವರಪ್ಪ ಈ ವೇಳೆ ಬರದ ವಿಷಯದ ಕುರಿತು ವಿಶೇಷ ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಸುರೇಶ್ ಕುಮಾರ್ : ಪ್ರಮುಖ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟವನ್ನು ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ, ಇದರಿಂದ ಕಾರ್ಯಕರ್ತರಿಗೆ ಮುಜುಗರವಾಗಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP State president B.S. Yeddyurappa has agreed to convene a meeting of long-time associates of the party who had written to him expressing dissatisfaction over his style of functioning.
Please Wait while comments are loading...