ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಕ್ಕು- ನಾಯಿಯೇ ಮಧಾಹ್ನದ ಊಟ, ವಿಜಯನಗರದಲ್ಲಿ ಇಂಥವರೂ ಇದ್ದಾರೆ!

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜುಲೈ 20: ಈ ಸುದ್ದಿ ಖಂಡಿತಾ ವಿಚಿತ್ರ ಹಾಗೂ ವಿಲಕ್ಷಣವಾಗಿದೆ. ಓದುವ ಮುನ್ನ ಒಂದಿಷ್ಟು ಸಮಯ ಈ ಜಗತ್ತಿನಲ್ಲಿ ನೀವಿಲ್ಲ ಅಂದುಕೊಂಡರೂ ಉತ್ತಮ. ಏಕೆಂದರೆ, ಈಗ ಹೇಳಹೊರಟಿರುವುದು ಅಂಥ ಜನರ ಬಗ್ಗೆ. ಇವರು ಎಂಥವರು ಅಂದರೆ, ನಾಯಿ- ಬೆಕ್ಕುಗಳನ್ನು ಸುಟ್ಟು ಹಾಕಿ ತಿನ್ನುವ ವಿಚಿತ್ರ ಜನರು.

ಸಿಲಿಕಾನ್ ಸಿಟಿ ಬೆಂಗಳೂರಿನ ಆದಿಚುಂಚನಗಿರಿ ಮಠದ ಬಳಿ ಪತ್ತೆಯಾಗಿದ್ದಾರೆ.‌ ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ಮಠದ ಎದುರಿನ ಸರ್ವೀಸ್​ ರಸ್ತೆಯಲ್ಲಿ ಬೀಡುಬಿಟ್ಟಿರುವ, ತಮಿಳುನಾಡಿನಿಂದ ಬಂದಿರುವ ಈ ಜನರು ತಮ್ಮ ಆಹಾರಕ್ಕಾಗಿ ಬೆಕ್ಕುಗಳನ್ನು ಕೊಂದು, ವಿಚಿತ್ರ ರೀತಿಯ ಆಹಾರವನ್ನು ಸೇವಿಸುತ್ತಿದ್ದಾರೆ.

Bizarre news: Cat and dog their mid day meals in Bengaluru

ಸುಮಾರು 1 ತಿಂಗಳಿನಿಂದ ವಿಜಯನಗರದಲ್ಲೇ ಬೀಡು ಬಿಟ್ಟಿರುವ ಇವರ ಆಹಾರ ಪದ್ಧತಿಗೆ ಸ್ಥಳೀಯರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಚೆಗೆ ಮಧ್ಯಾಹ್ನದ ವೇಳೆ ಬೀದಿ ನಾಯಿಯನ್ನು ಕೊಂದಿದ್ದ ಈ ಜನರು ಅದನ್ನೇ ಊಟಕ್ಕೆ ಸೇರಿಸಿದ್ದಾರೆ. ಈ ವಿಚಿತ್ರ ಜನರ ಗುಂಪಿನಲ್ಲಿ ಮಹಿಳೆಯರು- ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲರೂ ಕಲ್ಲು ಒಡೆಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

English summary
People who are residing in Bengaluru Vijayanagar are now center of attraction for bizarre reasons. They kill dog, cat and becoming their mid day meals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X