ಎಚ್ಚರ! ಬೆಂಗಳೂರಿಗೆ ಮತ್ತೆ ಬಂದಿದೆ ಹಕ್ಕಿ ಜ್ವರ

Posted By:
Subscribe to Oneindia Kannada

ಬೆಂಗಳೂರು, ಜನವರಿ 02: ನಗರದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ತಮಿಳುನಾಡಿನಿಂದ ನಗರಕ್ಕೆ ಆಮದಾಗಿದ್ದ ಕೆಲವು ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಪಶು ಆರೋಗ್ಯ ಇಲಾಖೆ ಕೋಳಿ ಮಾರಾಟಗಾರರಿಗೆ, ಬಿಬಿಎಂಪಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

ಹಕ್ಕಿ ಜ್ವರದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ

ಕಳೆದ ವಾರ ತಮಿಳುನಾಡಿನ ಕೋಳಿ ಮಾರಾಟಗಾರರಿಂದ ಕೆಲವು ಕೋಳಿಗಳನ್ನು ಹೆಬ್ಬಾಳ ಸಮೀಪದ ಕೆಜಿಎನ್ ಅಂಗಡಿ ಮಾಲೀಕರು ಖರೀದಿಸಿದ್ದರು, ಅವುಗಳಲ್ಲಿ ಕೆಲವು ಸತ್ತು ಹೋದವು, ಕೋಳಿಗಳು ಹಠಾತ್ ಆಗಿ ಸತ್ತದ್ದಕ್ಕೆ ಅನುಮಾನಗೊಂಡ ಅಂಗಡಿ ಮಾಲೀಕರು ಸತ್ತ ಕೋಳಿಯ ಸ್ಯಾಂಪಲ್‌ ಅನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆಗೆ ನೀಡಿದರು.

Bird flu spotted in Bengaluru's several parts

ಕೋಳಿಯ ಸ್ಯಾಂಪಲ್ ಪರೀಕ್ಷಿಸಿದ ಪಶು ಆರೋಗ್ಯ ಸಂಸ್ಥೆಯು ಹಕ್ಕಿ ಜ್ವರದಿಂದಾಗಿ ಕೋಳಿಗಳು ಸತ್ತಿರುವುದಾಗಿ ಧೃಡಪಡಿಸಿದೆ. ಹಕ್ಕಿ ಜ್ವರ ಇರುವ ಬಗ್ಗೆ ಧೃಡಪಟ್ಟ ಬಳಿಕ ಎಚ್ಚೆತ್ತ ಪಶು ಇಲಾಖೆ ಕೆಜಿಎನ್ ಅಂಗಡಿಗೆ ತೆರಳಿ ಸೂಕ್ತ ರೀತಿಯಲ್ಲಿ ಅಂಗಡಿಯನ್ನು ಶುಚಿಗೊಳಿಸಿದೆ.

ನಗರದ ಯಲಹಂಕ, ಬ್ಯಾಟರಾಯನಪುರ, ಥಣಿಸಂದ್ರ ಸೇರಿದಂತೆ ಕೆಲ ಕಡೆ ಕೋಳಿ ಅಂಗಡಿಗಳಲ್ಲಿ ಕೋಳಿಗಳು ಸತ್ತಿರುವ ವರದಿಯಾಗಿದ್ದು, ಇವು ಸಹ ಹಕ್ಕಿ ಜ್ವರದಿಂದಲೇ ಮೃತಪಟ್ಟಿವೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಸತ್ತ ಕೋಳಿಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅಲ್ಲಿಯವರೆಗೆ ಕೋಳಿ ಅಂಗಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಲು ಸೂಚಿಸಿದ್ದಾರೆ.

ಪಶು ಆರೋಗ್ಯ ಇಲಾಖೆಯು ಇಗಾಗಲೇ, ಬಿಬಿಎಂಪಿ ಗೆ ಹಕ್ಕಿ ಜ್ವರದ ಬಗ್ಗೆ ಎಚ್ಚರಿಕೆ ನೀಡಿದ್ದು, ನಗರದ ಕೋಳಿ ಅಂಗಡಿಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One case of Bird Flu spotted in Hebbal and in Yelahanka, Thanisandra, Byatarayanapura some Chicken has been died, BBMP doubted of bird flu. animal health department issued warning about bird flu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ