ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಜೈ ಭುವನೇಶ್ವರಿ ಎಂದ ಕಿರಣ್ ಮಜುಂದಾರ್ ಶಾ

|
Google Oneindia Kannada News

ಬೆಂಗಳೂರು, ಜುಲೈ 11: "ನನ್ನ ನಡೆಯಿಂದ ಯಾರಿಗಾದರೂ ತಿಳಿಯದೆ ನೋವಾಗಿದ್ದರೆ ನಾನು ಈ ಮೂಲಕ ಕ್ಷಮೆ ಕೇಳುತ್ತಿದ್ದೇನೆ" ಎನ್ನುವ ಮೂಲಕ ಬಯೋಕಾನ್ ನ ಕಿರಣ ಮಜುಂದಾರ್ ಶಾ 'ಜೈ ಭುವನೇಶ್ವರಿ' ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಪಡೆದಿದ್ದಾರೆ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕಿರಣ್‌ ಮಜುಂದಾರ್‌ ಟ್ವೀಟ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶಕಿರಣ್‌ ಮಜುಂದಾರ್‌ ಟ್ವೀಟ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ನನಗೆ ಅಪಾರ ಗೌರವ ಇದ್ದು, ನಿಮ್ಮ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ. ನನ್ನ ಸಾಮಾಜಿಕ ಜವಾಬ್ದಾರಿಯೊಂದಿಗೆ ಕನ್ನಡದ ಮೇಲಿನ ಗೌರವ ಹಾಗೂ ಪ್ರೀತಿಯನ್ನು ಹಂಚಿಕೊಂಡಿದ್ದೇನೆಯೇ ಹೊರತು ತೆರಿಗೆ ವಿನಾಯಿತಿಗಾಗಿ ಅಲ್ಲ ಎಂದು ಕೂಡ ಹೇಳಿದ್ದಾರೆ.

Kiran Mazumdar Shaw

ಇನು ತಮ್ಮ ಟ್ವೀಟ್ ಬಗ್ಗೆ ಕೂಡ ಸ್ಪಷ್ಟನೆ ನೀಡಿರುವ ಅವರು, ಕನ್ನಡ ಭಾಷೆಯ ಹೆಮ್ಮೆ ಬಗ್ಗೆಯೂ ಕೆಲವು ಸಾಲುಗಳನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ಕಿರಣ್ ಮಜುಂದಾರ್ ಶಾ ಅವಮಾನಕಾರವಾಗಿ ಟ್ವೀಟ್ ಮಾಡಿದ್ದರು ಎಂಬ ಆಕ್ಷೇಪಕ್ಕೆ ತೆರೆ ಎಳೆಯುವ ಪ್ರಾಮಾಣಿಕ ಪ್ರಯತ್ನ ಕಾಣುತ್ತದೆ.

English summary
Biocon Kiran Mazumdar Shaw asks sorry to Kannada Development Authority president S.G.Siddaramaiah. In her recent twitter controversy erupted. Because of that, she asks sorry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X