ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್‌ ಕ್ಲಬ್‌: 500 ಕೋಟಿ ಆಸ್ತಿ ಒಡೆಯನ ವಿಚಾರಣೆ

By Nayana
|
Google Oneindia Kannada News

ಬೆಂಗಳೂರು, ಜು.23: ಬೆಂಗಳೂರು ಬೌರಿಂಗ್‌ ಕ್ಲಬ್‌ನಲ್ಲಿ ಕೋಟ್ಯಂತರ ಹಣ, ಖಾಲಿ ಚೆಕ್‌ಗಳು ಹಾಗೂ ಆಸ್ತಿ ಪತ್ರಗಳು ದೊರೆಯ ಪ್ರಕರಣ ಸಂಬಂಧ ಉದ್ಯಮಿ ಅವಿನಾಶ್‌ ಅಗರ್‌ವಾಲ್‌ ಕುಕ್ರೇಜಾ ಅವರನ್ನು ಐಟಿ ಅಧಿಕಾರಿಗಳು ಇಂದು(ಜು.23) ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕ್ಲಬ್‌ನಲ್ಲಿ ಪತ್ತೆಯಾದ 500 ಕೋಟಿ ರೂ.ಗಳಿಗೂ ಮೀರಿದ ಆಸ್ತಿಗೆ ಸಂಬಂಧಿಸಿದಂತೆ ಸೋಮವಾರ ಖುದ್ದು ವಿಚಾರಣೆಗೆ ಹಾಜರಾಗುವಂತೆ ಅವನಾಶ್‌ ಅಗರ್‌ವಾಲ್‌ಗೆ ನೋಟಿಸ್‌ ಜಾರಿ ಮಾಡಿದ್ದು ವಿಚಾರಣೆಗಾಗಿ ಐಟಿ ಕಚೇರಿಗೆ ಆಗಮಿಸುವ ಸಾಧ್ಯತೆ ಇದೆ.

ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಭಾರಿ ಮೊತ್ತದ ಹಣ, ಚಿನ್ನದ ಬಿಸ್ಕತ್ತು ಪತ್ತೆ ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಭಾರಿ ಮೊತ್ತದ ಹಣ, ಚಿನ್ನದ ಬಿಸ್ಕತ್ತು ಪತ್ತೆ

ಲಾಕರ್‌ನಲ್ಲಿ ಪತ್ತೆಯಾದ ಹಣ, ವಜ್ರಾಭರಣ, ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳ ಮೌಲ್ಯಮಾಪನ ಹಾಗೂ ಪಂಚನಾಮೆ ಪ್ರಕ್ರಿಯೆಗಳನ್ನು ಐಟಿ ಅಧಿಕಾರಿಗಳು ಶನಿವಾರ ರಾತ್ರಿ ಪೂರ್ಣಗೊಳಿಸಿದ್ದಾರೆ. ಅವಿನಾಶ್‌ ಅವರ ನಿವಾಸ, ಬೆಂಗಳೂರು ಸೇರಿದಂತೆ ಇನ್ನಿತರೆ ಆತನ ಕಂಪನಿಗಳ ಕಚೇರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

Billionaire bowring club member will face enquiry today

ಅಲ್ಲದೆ ಆತ ಸದಸ್ಯತ್ವ ಹೊಂದಿದ್ದ ಇತರೆ ಕ್ಲಬ್‌ಗಳಲ್ಲೂ ಕಾರ್ಯಾಚರಣೆ ನಡೆಸಿ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಲಾಕರ್‌ನಲ್ಲಿ ಪತ್ತೆಯಾದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರಗಳು ಯಾರಿಗೆ ಸೇರಿದ್ದು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ.

English summary
Contriversial Billionare businessman Avinash agarwal will face IT enquiry today. Recently IT officials found more than 500 crore wealth in his locker
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X