ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಶೀಘ್ರವೇ ಒಪ್ಪಿಗೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಪುನಃ ಬೈಕ್ ಟ್ಯಾಕ್ಸಿ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಟ್ಯಾಕ್ಸಿ ಸೇವೆಗೆ ಅನುಮತಿ ಕೊಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಟ್ಯಾಕ್ಸಿ ಸೇವೆ ನೀಡುವವರಿಗೆ ಕೆಲವ ಷರತ್ತುಗಳನ್ನು ವಿಧಿಸಲಾಗುತ್ತದೆ.

ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಅನುಮತಿ ಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ದಿನಗಳಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.

taxi

ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಬಗ್ಗೆ ಜನರಿಂದ ಸಾರಿಗೆ ಇಲಾಖೆ ಮಾಹಿತಿ ಸಂಗ್ರಹಣೆ ಮಾಡಿದೆ. ಕಾರು ಟ್ಯಾಕ್ಸಿಗಿಂತ ಬೈಕ್ ಟ್ಯಾಕ್ಸಿ ಸೇವೆ ಉತ್ತಮ ಎಂದು ಜನರು ಅಭಿಪ್ರಾಯಪಟ್ಟಿರುವ ಹಿನ್ನಲೆಯಲ್ಲಿ, ಸಾರಿಗೆ ಇಲಾಖೆ ಸೇವೆ ಆರಂಭಿಸಲು ಒಪ್ಪಿಗೆ ನೀಡಲು ನಿರ್ಧರಿಸಿದೆ. [ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ?]

ಷರತ್ತುಗಳು : ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವವರಿಗೆ ಕೆಲವು ಷರತ್ತುಗಳನ್ನು ಸಾರಿಗೆ ಇಲಾಖೆ ಹಾಕಲಿದೆ. ಪ್ರಮುಖವಾಗಿ ಬೈಕ್‌ನಲ್ಲಿ ಸಂಚರಿಸುವ ಹಿಂಬಂದಿ ಸವಾರರಿಗೆ ಕಂಪನಿಗಳು ಹೆಲ್ಮೆಟ್ ಒದಗಿಸಬೇಕಾಗಿದೆ. ಗ್ರಾಹಕರನ್ನು ಕರೆದುಕೊಂಡು ಹೋಗಲು ಬರುವ ಟ್ಯಾಕ್ಸಿ ಚಾಲಕ ತನ್ನ ಜೊತೆ ಹೆಲ್ಮೆಟ್ ತರಬೇಕಿದೆ. [ವೀನು ಪಾಲಿವಾಲ್, ಜನಪ್ರಿಯ ಮಹಿಳಾ ಬೈಕರ್ ಇನ್ನಿಲ್ಲ]

ಹೆಚ್ಚಿನ ಲಗೇಜ್ ಸಾಗಣೆ ಮಾಡುವಂತಿಲ್ಲ, ಟ್ಯಾಕ್ಸಿಗೆ ಬಳಸುವ ಬೈಕ್‌ಗಳ ನಂಬರ್‌ ಪ್ಲೇಟ್‌ ಅನ್ನು ಹಳದಿ ಬಣ್ಣದಲ್ಲಿ ಬರೆಸಬೇಕು ಎಂಬುದು ಉಳಿದ ಷರತ್ತುಗಳಾಗಿವೆ. [ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ]

ಅಂದಹಾಗೆ ಮಾರ್ಚ್‌ನಲ್ಲಿ ಓಲಾ ಮತ್ತು ಊಬರ್ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದವು. ಆದರೆ, ಅದು ಕಾನೂನು ಬಾಹಿರ ಎಂದು ಹೇಳಿದ್ದ ಸಾರಿಗೆ ಇಲಾಖೆ ಬೈಕ್‌ಗಳನ್ನು ವಶಕ್ಕೆಪಡೆದುಕೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka transport department has taken a decision to legalized bike taxis service. Department seized 74 bike taxis in Bengaluru city on March 2016.
Please Wait while comments are loading...