ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಕ್ ಸ್ಕಿಡ್ ಆಗಿ ಬಿದ್ದವನಿಗೆ ಕ್ಯಾರೆ ಅನ್ನದ ವೈದ್ಯರು

|
Google Oneindia Kannada News

Recommended Video

ನವೆಂಬರ್ 3 ಖಾಸಗಿ ವೈದ್ಯರ ಮುಷ್ಕರ | ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲ್ಲ ಅಂದ್ರು ಡಾಕ್ಟರ್ಸ್

ಬೆಂಗಳೂರು, ನವೆಂಬರ್ 03 : ರಾಜ್ಯಾದ್ಯಂತ ನಡೆಯುತ್ತಿರುವ ಖಾಸಗಿ ವೈದ್ಯರ ಒಂದು ದಿನದ ಮುಷ್ಕರದ ಬಿಸಿ ಅನುಭವಿಸಿದವರಿಗೇ ಗೊತ್ತು. ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ಒದ್ದಾಡುತ್ತಿರುವುದು ಬಡವರೇ.

In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 ಅನ್ನು ವಿರುದ್ಧ ಪ್ರತಿಭಟನೆಗಿಳಿದಿರುವ ಖಾಸಗಿ ವೈದ್ಯರು ಹೊರರೋಗಿಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ರೋಗಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ದೂರವಿದ್ದರೂ ಸರಕಾರಿ ಆಸ್ಪತ್ರೆಗೆ ಹೋಗುವಂತಾಗಿದೆ.

Bike rider falls, denied treatment in private hospital in Bengaluru

ಎಚ್ಎಸ್ಆರ್ ಬಡಾವಣೆಯ ನಿವಾಸಿಯೊಬ್ಬರು ಸಿಲ್ಕ್ ಬೋರ್ಡ್ ಬಳಿ ಸ್ಕಿಡ್ ಆಗಿ ಬೈಕ್ ಮೇಲಿಂದ ಬಿದ್ದಿದ್ದಾರೆ. ಅವರನ್ನು ಕೂಡಲೆ ಎಚ್ಎಸ್ಆರ್ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಕದ ಹಾಕಿರುವುದರಿಂದ ಅವರಿಗೆ ತುರ್ತು ಚಿಕಿತ್ಸೆ ದೊರೆತಿಲ್ಲ.

LIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕುLIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು

ಆದ್ದರಿಂದ ಅನಿರ್ವಾಯವಾಗಿ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ ಎಂದು ಗಾಯಾಳುವಿನ ಸಂಬಂಧಿಕರು ಹೇಳಿದರು. ಅಲ್ಲಿ ಅವರಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Bike rider falls but was denied treatment in private hospital in HSR Layout in Bengaluru, as private doctors are protesting against Karnataka Private Medical Establishments (amendment) bill 2017. He was treated in government hospital in Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X