ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ 'ಮೆಟ್ರೋ ಬೈಕ್' ಸೇವೆ!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 1 : ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಫೀಡರ್ ಬಸ್ ಸೇವೆ ಸಮರ್ಪಕವಾಗಿಲ್ಲದ ಕಾರಣ, ಎರಡನೇ ಬಾರಿ ಮೆಟ್ರೋ ಬೈಕ್ ಸೇವೆಯನ್ನು ಒದಗಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.

ಪ್ರತಿನಿತ್ಯ ನಾಲ್ಕರಿಂದ 5 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆದರೆ ಮೆಟ್ರೋ ನಿಲ್ದಾಣಗಳಿಂದ ನಮ್ಮ ಮನೆಗಳಿಗೆ ತಲುಪಲು ಬಾಡಿಗೆ ಕಾಡುಗಳು ಅಥವಾ ಆಟೋಗಳನ್ನು ಅವಲಂಬಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೇವೆಗಾಗಿಯೇ ಬಿಎಂಟಿಸಿ ಫೀಡರ್ ಬಸ್ ಗಳನ್ನು ನಿಯೋಜಿಸಲಾಗಿತ್ತು.

Bike on rent service for metro commuters

ಆದರೆ ನಿರೀಕ್ಷಿತ ಆದಾಯ ದೊರೆಯದ ಹಿನ್ನೆಲೆಯಲ್ಲಿ 15 ಬಸ್ ಸೇವೆಯನ್ನು ವಾಪಾಸ್ ಪಡೆದಿದ್ದಾರೆ. ಜತೆಗೆ ಉಳಿದ ಬಸ್ ಗಳು ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಪ್ರಯಾಣಿಕರಿಂದ ಕೇಳಿಬಂದಿದ್ದವು.

ಒಟ್ಟು 33 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಬೈಕ್ ಸೇವೆ ಒದಗಿಸಲಿದೆ. 2016 ರಲ್ಲೇ ಮೆಟ್ರೋ ಬೈಕ್ ಸೇವೆ ಪ್ರಾರಂಭಿಸಲಾಗಿತ್ತು. ಪ್ರಯಾಣಿಕರು ಸ್ವಿಚಕ್ರ ವಾಹನಗಳನ್ನು ಬಳಸಲು ಹಿಂಜರಿಯುತ್ತಿದ್ದರು. ಜತೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿತ್ತು. ಹಾಗಾಗಿ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಹೊರತುಪಡಿಸಿ ಉಳಿದೆಲ್ಲಾ ನಿಲ್ದಾಣಗಳಲ್ಲಿ ಮೆಟ್ರೋ ಬೈಕ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಕಡಿಮೆ ದೂರ ಪ್ರಯಾಣಿಸುವವರು ಆಟೋ, ಕಾರುಗಳಲ್ಲಿ ತೆರಳುವ ಬದಲು ಮೆಟ್ರೋ ಬೈಕ್ ಗಳನ್ನು ಬಳಸಿ ಎಂದು ಸಲಹೆ ನೀಡಲಾಗುತ್ತಿದೆ. ಮೆಟ್ರೋ ಬೈಕ್ ಪ್ರತಿ ಕಿ.ಮೀಗೆ 5 ರೂ ನೀಡಬೇಕಾಗುತ್ತದೆ. ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bike on rent service introduced in Namma Metro stations for commuters to reach their last mile. Commuters can use scooters by paying Rs.5 per km and 50 paisa per minute rent bases.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ