ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸೋನಲ್ ಅಗರ್ ವಾಲ್ ಸಾವಿನ ಪ್ರಕರಣಕ್ಕೆ ರೋಚಕ ತಿರುವು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾ. ಅವಿನಾಶ್ ಅಗರ್ ವಾಲ್ ಅವರ ಪತ್ನಿ ಸೋನಲ್ ಅಗರ್ ವಾಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಆಕೆಯ ಮೃತದೇಹವನ್ನು ತಪಾಸಣೆಗೆ ಒಳಪಡಿಸಿದಾಗ ಆಕೆಯ ಒಳ ಉಡುಪಿನಲ್ಲಿ ಆಭರಣಗಳಿದ್ದು ಅದು ಆಕೆಯ ಗೆಳತಿಯದ್ದೇ ಎನ್ನುವ ವಿಚಾರ ಬಹಿರಂಗಗೊಂಡಿದೆ.

ಆಕೆಯ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಲಾಗಿದೆ ಎಂದು ಅವಿನಾಶ್ ದೂರು ದಾಖಲಿಸಿದ್ದ. ಆದರೆ ಸೋನಲ್ ತಮ್ಮ ಫ್ಲ್ಯಾಟ್ ಗೆ ಬಂದು ಕಳ್ಳತನ ಮಾಡಿದ್ದರು ಎಂದು ಸೋನಲ್ ಸ್ನೇಹಿತೆಯ ಪತಿ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಕಿಮ್ಸ್ ವೈದ್ಯನ ಪತ್ನಿ ಸೋನಲ್ ಆತ್ಮಹತ್ಯೆ ನಿಗೂಢತೆಬೆಂಗಳೂರು: ಕಿಮ್ಸ್ ವೈದ್ಯನ ಪತ್ನಿ ಸೋನಲ್ ಆತ್ಮಹತ್ಯೆ ನಿಗೂಢತೆ

ಹಾಗಾದರೆ ಪ್ರಸಾದ್ ಹೇಳಿದ್ದೇನು ಸಂಪೂರ್ಣ ವಿವರ ಇಲ್ಲಿದೆ: ಸೋನಲ್ ಹಾಗೂ ನನ್ನ ಪತ್ನಿ ಸ್ನೇಹಿತೆಯರು, ಸೋನಲ್ ಆಗಾಗ ನಮ್ಮ ಮನೆಗೆ ಬರುತ್ತಿದ್ದರು, ನಾಲ್ಕು ದಿನಗಳ ಹಿಂದೆ ನಮ್ಮ ಮನೆಯ ಬೀರುವಿನ ಕೀ ನಾಪತ್ತೆಯಾಗಿತ್ತು, ಕಳೆದು ಹೋಗಿರಬೇಕು ಎಂದು ಸುಮ್ಮನಾಗಿದ್ದೆವು.

Big twist in Sonal Agarwal death case

ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ

ಆದರೆ ಸೋನಲ್ ಮೃತದೇಹದ ಬಳಿ ಸಿಕ್ಕಿದ್ದು ಅದೇ ಕೀಗಳು. ಭಾನುವಾರ ಘಟನೆ ನಡೆಯುವ ಮೊದಲು ನಾವೆಲ್ಲರೂ ಅಪಾರ್ಟ್ ಮೆಂಟ್ ನ ಟೆರೇಸ್ ನಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವಕ್ಕೆ ಹೋಗಿದ್ದೆವು.

ಈ ವೇಳೆ ಫ್ಲ್ಯಾಟ್ ನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದೆವು, ಕಾರ್ಯಕ್ರಮದ ಮಧ್ಯೆ ನನ್ನ ತಂದೆ ಫ್ಲ್ಯಾಟ್ ಗೆ ಹೋಗಿದ್ದರು. ಈ ವೇಳೆ ನಮ್ಮ ಮನೆಯೊಳಗೆ ಇದ್ದ ಸೋನಾಲ್ , ಫ್ಲ್ಯಾಟ್ ಕಿಟಕಿಯಿಂದ ಕೆಳಗೆ ಜಿಗಿದಿದ್ದಾರೆ ಎಂದು ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಡಾ. ಅವಿನಾಶ್ ಅಗರ್ ವಾಲ್ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಡಾ. ಅವಿನಾಶ್ ಕುಟುಂಬ ಮತ್ತು ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ಪ್ರಸಾದ್ ಕುಟುಂಬ ಉತ್ತರ ಹಳ್ಳಿಯ ಮಂತ್ರಿ ಅಲ್ಫೈನ್ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಲ್ಲಿ ನೆಲೆಸಿತ್ತು.

ಅವಿನಾಶ್ 505 ನಂಬರಿನ ಫ್ಲ್ಯಾಟ್ ನಲ್ಲಿ ನೆಲೆಸಿದ್ದರೆ ಪ್ರಸಾದ್ 501ರಲ್ಲಿ ನೆಲೆಸಿದ್ದರು, ಭಾನುವಾರ ರಾತ್ರಿ ಸೋನಲ್ ಅವರು ಪ್ರಸಾದ್ ಕುಟುಂಬ ನೆಲೆಸಿದ್ದ 501 ನಂಬರಿನ ಫ್ಲ್ಯಾಟ್ ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಅವರ ಮೃತದೇಹ ಬಿದ್ದಿದ್ದ ಜಾಗದಲ್ಲಿ ಪ್ರಸಾದ್ ಅವರ ಮನೆಯ ಬೀರುವಿನ ಕೀ ಮತ್ತು ಪ್ರಸಾದ್ ಪತ್ನಿಗೆ ಸೇರಿದ ಆಭರಣಗಳು ಪತ್ತೆಯಾಗಿದ್ದವು.

English summary
In a surprise revelation of Sonal Agarwal death case, ornaments were found in her inner wears which were belonged to her friend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X