ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೇರಿ ವೃತ್ತ-ನಾಗವಾರ ಮೆಟ್ರೋ ಮಾರ್ಗ ಸುರಂಗ ಕಾಮಗಾರಿ ವಿಳಂಬ?

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ನಮ್ಮ ಮೆಟ್ರೋ ಯೋಜನೆಯ 2 ನೇ ಹಂತದಲ್ಲಿ ಬರುವ ಏಕೈಕ ಸುರಂಗದ ಕಾಮಗಾರಿ ವಿಳಭವಾಗುವ ಸಾಧ್ಯತೆ ಇದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ಕಾಮಗಾರಿಗೆ ಊಹಿಸಿದ ವೆಚ್ಚಕ್ಕಿಂತ ಕಂಪನಿಗಳು ಸಲ್ಲಿಸಿದ ಕನಿಷ್ಠ ಬಿಡ್ ನ ಮೊತ್ತ ಹೆಚ್ಚು ಎನ್ನಲಾಗಿದ್ದು ನಿಗಮದ ನಿರ್ಧಾರದ ಮೇಲೆ ಯೋಜನೆ ನಿಂತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಗೊಟ್ಟಿಗೆರೆ- ನಾಗವಾರ ಪ್ರಾರಂಭಿಕ ಮಾರ್ಗವಾಗಿರಲಿದೆ. ಇದರಲ್ಲೇ ಡೇರಿ ವೃತ್ತ-ನಾಗವಾರ ನಡುವೆ 13 ಕಿ.ಮೀ ಸುರಂಗ ಮಾರ್ಗ ನಿರ್ಮಾಣವಾಗಿದೆ. ಈ ಸುರಂಗದ ಕಾಮಗಾರಿಗೆ 2017 ರ ಜು.1 ರಂದು ಬಿಎಂಆರ್ ಸಿ ಎಲ್ ಟೆಂಡರ್ ಆಹ್ವಾನಿಸಿತ್ತು.

3.3 ಕಿ.ಮೀ ಸುರಂಗ ಮಾರ್ಗಕ್ಕೆ 5,047ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಟೆಂಡರ್ ಗೆ ಎಲ್ ಆಂಡ್ ಟಿ. ಆಪ್ಕಾನ್, ಗ್ಲೂಯರ್ ಮ್ಯಾಕ್ ಮತ್ತು ಐಟಿಡಿ ಸೆಂ ಕಂಪನಿಗಳು ಮಾತ್ರ ಬಿಡ್ ಸಲ್ಲಿಸಿದ್ದವು.
ಕನಿಷ್ಠ ಬಿಡ್ ಸಲ್ಲಿಸಿದ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡುವುದು ವಾಸ್ತವ, ಕೆಲ ದಿನದ ಹಿಂದೆ ಕಂಪನಿಗಳು ಸಲ್ಲಿಸಿದ್ದ ಫೈನಾನ್ಸಿಯಲ್ ಬಿಡ್ ತೆರಯಲಾಗಿದ್ದು, 4 ಪ್ಯಾಕೇಜ್ ಗೆ ಒಟ್ಟು 8 ಸಾವಿರ ಕೋಟಿ ರೂ ಆಗಿದೆ. ಪ್ರತಿ ಪ್ಯಾಕೇಜ್ ಗೂ ಒಂದು ಕಂಪನಿ ಕನಿಷ್ಠ ಬಿಡ್ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Bidders quoting higher rate may hit tunnel work in Metro second phase

ಸುರಂಗ ಮಾರ್ಗ ಕಾಮಗಾರಿ ವಿವರ

ಪ್ಯಾಕೇಜ್ ಸಂಖ್ಯೆ ಎಲ್ಲಿಂದ-ಎಲ್ಲಿಗೆ ಕಿ.ಮೀ ವೆಚ್ಚ(ಕೋಟಿ ರೂ)
1 ಡೇರಿ ವೃತ್ತ-ಲ್ಯಾಂಗ್ ಫೋರ್ಡ್ 3.67 1,268
2 ವೆಲ್ಲಾರ ರಸ್ತೆ-ಕಂಟೋನ್ಮೆಂಟ್ 3.62 1,325
3 ಕಂಟೋನ್ಮೆಂಟ್-ವೆಂಕೇಶಪುರ 3.32 1,334
4 ವೆಂಕಟೇಶಪುರ-ನಾಗವಾರ 3.31 1,117
English summary
As many companies quoting higher rate of bidding in tunnel work tender, second phase of Metro work may go delay than prescribed time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X