ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಟ್ರಿಣ್ ಟ್ರಿಣ್ ಯೋಜನೆ, 345 ನಿಲ್ದಾಣ ಗುರುತು

|
Google Oneindia Kannada News

ಬೆಂಗಳೂರು, ನವೆಂಬರ್ 22 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಡಿಯುಎಲ್‌ಟಿ ನಗರದಲ್ಲಿ 345 ಸೈಕಲ್ ನಿಲುಗಡ ಸ್ಥಳಗಳನ್ನು ಗುರುತಿಸಿದೆ.

ಬೆಂಗಳೂರಿಗೂ ಬರಲಿದೆ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆಬೆಂಗಳೂರಿಗೂ ಬರಲಿದೆ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆ

ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ನಗರದಲ್ಲಿ 345 ನಿಲ್ದಾಣಗಳನ್ನು (Docking stations) ಗುರುತಿಸಿದೆ. ಈ ಕುರಿತು ವಿವರವಾದ ವರದಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಿದೆ.

Bicycle sharing project : Dult identifies 345 docking stations

ಮೊದಲ ಹಂತದ ಯೋಜನೆ ಯಡಿ ಎಂ.ಜಿ.ರಸ್ತೆ, ವಿಧಾನಸೌಧ, ಇಂದಿರಾನಗರ, ಬಾಣಸವಾಡಿ, ಎಚ್‌ಆರ್‌ಬಿಆರ್ ಲೇಔಟ್, ಎಚ್‌ಬಿಆರ್ ಲೇಔಟ್, ಕಾಚರಕನಹಳ್ಳಿಯಲ್ಲಿ ಸೈಕಲ್ ನಿಲ್ದಾಣಗಳು ನಿರ್ಮಾಣವಾಗಲಿವೆ.

ಪ್ರತಿ ನಿಲ್ದಾಣಗಳಲ್ಲಿ 12 ರಿಂದ 48 ಸೈಕಲ್‌ಗಳನ್ನು ಇಡಲಾಗುತ್ತದೆ. 80.18 ಕೋಟಿ ರೂ. ವೆಚ್ಚದಲ್ಲಿ ಬೈಸಿಕಲ್ ಬಾಡಿಗೆಗೆ ನೀಡುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಡಿಯುಎಲ್‌ಟಿ ಯೋಜನೆಯನ್ನು ಜಾರಿಗೆ ತರಲಿದೆ.

'ಬಿಬಿಎಂಪಿಗೆ ಮಾರ್ಗದರ್ಶಿ ಸೂತ್ರಗಳನ್ನು ರಚನೆ ಮಾಡಲು ವರದಿಯನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಯೋಜನೆಗೆ ಟೆಂಡರ್ ಕರೆಯುತ್ತೇವೆ. ಸೆಪ್ಟೆಂಬರ್ ಅಥವ ಅಕ್ಟೋಬರ್‌ನಲ್ಲಿ ಯೋಜನೆ ಜಾರಿಗೆ ಬರಲಿದೆ' ಎಂದು ಡಿಯುಎಲ್‌ಟಿ ಅಧಿಕಾರಿಗಳು ಹೇಳಿದ್ದಾರೆ.

English summary
Bicycle sharing project will come up in Bengaluru city soon. The Department of Urban Land Transport (DULT) is identified 345 docking stations and submitted a report to Bruhat Bengaluru Mahanagara Palike (BBMP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X