ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ.

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 24 : ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಮೈಸೂರು ಮಾದರಿಯ "ಟ್ರಿಣ್ ಟ್ರಿಣ್' ಬಾಡಿಗೆ ಸೈಕಲ್ ಯೋಜನೆಯನ್ನು ಬಿಬಿಎಂಪಿ ಸಧ್ಯದಲ್ಲೇ ಜಾರಿಗೆ ತರಲು ಮುಂದಾಗಿದೆ.

ಬೆಂಗಳೂರಲ್ಲಿ ಟ್ರಿಣ್ ಟ್ರಿಣ್ ಯೋಜನೆ, 345 ನಿಲ್ದಾಣ ಗುರುತು

ನಗರ ಭೂ ಸಾರಿಗೆ ನಿರ್ದೇಶನಾಲಯ(ಡಲ್ಟ್) ಹಾಗೂ ಬಿಬಿಎಂಪಿ ಜಂಟಿಯಾಗಿ ಯೋಜನೆ ಜಾರಿಗೊಳಿಸುತ್ತಿದೆ. ಯೋಜನೆ ಜಾರಿ ಕುರಿತಂತೆ ಈಗಾಗಲೇ ಅಧ್ಯಯನ ನಡೆಸಿರುವ ಡಲ್ಟ್ ಅಧಿಕಾರಿಗಳು ಬಾಡಿಗೆ ಸೈಕಲ್ ನಿಲುಗಡೆ ತಾಣ ನಿರ್ಮಿಸಲು 345 ಜಾಗಗಳನ್ನು ಗುರುತಿಸಿದ್ದು, ಪಾಲಿಕೆಗೆ ವರದಿ ಸಲ್ಲಿಸಿದ್ದಾರೆ.

Bicycle on rent, Trin, Trin project in Bengaluru

ಬಿಬಿಎಂಪಿಯು ಯೋಜನೆಗಾಗಿ 6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸುತ್ತಿದೆ. ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250 ರಿಂದ 350 ಮೀಟರ್ ಅಂತರದಲ್ಲಿ ಒಂದು ಸೈಕಲ್ ನಿಲುಗಡೆ ತಾಣ ನಿರ್ಮಿಸಲಾಗುತ್ತದೆ. ಅದರಂತೆ ಸುಮಾರು 25ಕಿ.ಮೀ ವ್ಯಾಪ್ತಿಯಲ್ಲಿ345 ಸೈಕಲ್ ನಿಲುಗಡೆ ತಾಣಗಳು ನಿರ್ಮಾಣವಾಗಲಿದೆ.

ಸ್ಮಾರ್ಟ್ ಕಾರ್ಡ್: ನಮ್ಮ ಮೆಟ್ರೋದಲ್ಲಿರುವಂತೆಯೇ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊದಲ ಬಾರಿಗೆ ಸೈಕಲ್ ಬಾಡಿಗೆ ಪಡೆಯುವ ವೇಳೆ ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಸಲಲ್ಇಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ. ಪ್ರತಿ ಬಾರಿ ಸೈಕಲ್ ತೆಗೆದುಕೊಂಡು ಹೋಗುವ ಮುನ್ನ ನಿಲುಗಡೆ ತಾಣದಲ್ಲಿನ ಯಂತ್ರದಲ್ಲಿ ತಮ್ಮ ಕಾರ್ಡ್ ಸ್ವೈಪ್ ಮಾಡಿ ತೆಗೆದುಕೊಂಡು ಹೋಗಬೇಕು.

ಪ್ರತಿ ಗಂಟೆಗೆ 5ರೂ.: ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚಾರ ಮಾಡುವುದರಿಂದ ಸೈಕಲ್ ಕೊರತೆ ಉಂಟಾಗದಿರಲು6 ಸಾವಿರ ಸೈಕಲ್ ಖರೀದಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಪ್ರತಿ ನಿಲುಗಡೆ ತಾಣದಲ್ಲಿ 14-15 ಸೈಕಲ್ ಇರಲಿದ್ದು, ಹೆಚ್ಚುವರಿಯಾಗಿ ಒಂದು ಸಾವಿರ ಸೈಕಲ್ ಗಳನ್ನು ಖರೀಧಿಸಲಾಗುತ್ತದೆ ಜತೆಗೆ ಸೈಕಲ್ ಗಳ ಬಾಡಿಗೆಯನ್ನು ಪ್ರತಿ ಗಂಟಗೆ 5ರೂ. ನಿಗದಿ ಪಡಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To curb the heavy traffic jam in Bengaluru, BBMP planning to implement Bicycle on rent, Trin Trin project which was already implemented in palace city Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ