ವಿಮಾನ ಪ್ರಯಾಣಿಕರೇ ಗಮನಿಸಿ: ಸಂಚಾರ ವ್ಯವಸ್ಥೆ ಬದಲಾಗಿದೆ

Posted By:
Subscribe to Oneindia Kannada

ಬೆಂಗಳೂರು, ಸೆ. 28: ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಸಂಚಾರ ವ್ಯವಸ್ಥೆಗಳನ್ನು ಆರಂಭಿಸಲಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್) ಬುಧವಾರ ಪ್ರಕಟಿಸಿದೆ.

ವಿಮಾನ ನಿಲ್ದಾಣದ ಆಗಮನ ಹಾಗೂ ನಿರ್ಗಮನ ಗೇಟ್ ಗಳ ಬಳಿ ಉಂಟಾಗುತ್ತಿದ್ದ ವಾಹನಗಳ ಸಂಚಾರ ದಟ್ಟಣೆಯನ್ನು ಸುಗುಮಗೊಳಿಸಲಾಗಿದೆ. [ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ APP ಬಳಕೆ ಹೇಗೆ?]

BIAL : New Traffic Arrangements Kempegowda International Airport

ಸುಗಮ ಸಂಚಾರಕ್ಕಾಗಿ ಬಿಐಎಎಲ್ ಟರ್ಮಿನಲ್‌ಗಳಿಗೆ ವಿಮಾನಗಳ ನಿರ್ಗ ಮನ ಹಾಗೂ ಆಗಮನ ವಿಭಾಗಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಪಿಕಪ್ ಮಾಡುವ ಹಾಗೂ ಡ್ರಾಪ್ ಮಾಡಲು ಎರಡು ಪ್ರತ್ಯೇಕ ಮಾರ್ಗಗಳು ಬಳಕೆಗೆ ಮುಕ್ತವಾಗಿವೆ.[ವಿ.ನಿಲ್ದಾಣದಲ್ಲಿ 24X 7 ಆರೋಗ್ಯ ಸೇವೆ ಈಗ ಲಭ್ಯ]

ಹೀಗೆ ಎರಡು ಪ್ರತ್ಯೇಕ ಮಾರ್ಗಗಳನ್ನು ರೂಪಿಸುವುದರಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಹಾಗೂ ಸುತ್ತಾಮುತ್ತಾ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.


ನಿಗದಿಪಡಿಸಿದ ಮಾರ್ಗದಲ್ಲಿಯೇ ಪಿಕಪ್ ಹಾಗೂ ಡ್ರಾಪ್ ಮಾಡುವ ವಾಹನಗಳು ತೆರಳಬೇಕು. ಇದು ಕ್ಯಾಬ್‌ ಹಾಗೂ ಸ್ವಂತದ ಕಾರುಗಳಿಗೆ ಮಾತ್ರ ಸೀಮಿತ ವಾಗಿದೆ ಎಂದು ಬಿಐಎಎಲ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಹೀಗಾಗಿ ಇನ್ಮುಂದೆ ಟರ್ಮಿನಲ್ ಬಳಿಯ ಗೇಟ್ 11-13 ಅಗಮನ ಗೇಟ್ ಗೆ ತೆರಳಲು ನೇರವಾಗಿ ಚಲಿಸಿ, ಪಾರ್ಕಿಂಗ್ ಲಾಟ್ ಆದಮೇಲೆ ಎಡಗಡೆ ತಿರುಗಿ ಪಿಕ್ ಅಪ್ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Airport operator Bangalore International Airport Ltd. (BIAL) has introduced new traffic arrangements for those arriving and departing from the Kempegowda International Airport to streamline the traffic movement.
Please Wait while comments are loading...