ಸಿಗರೇಟ್ ನೆಪದಲ್ಲಿ ಯುವತಿಗೆ ಕಿರುಕುಳ, ಮೂವರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಮೇ 19 : ಕುಡಿದ ಮತ್ತಿನಲ್ಲಿ ಸ್ನೇಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೇ 15ರಂದು ಭೂತಾನ್ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು.

ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಮೆಹಬೂಬ್, ಖಾಲಿದ್ ಮತ್ತು ಬುಕ್ತಿಯಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸಂತ್ರಸ್ತ ಯುವತಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. [ಬೆಂಗಳೂರು: ಬೇಬಿ ಕೇರ್ ಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

sexual harassment

ಘಟನೆ ವಿವರ : 25 ವರ್ಷದ ಸಂತ್ರಸ್ತ ಯುವತಿ ಹೆಬ್ಬಗೋಡಿ ಸಮೀಪದಲ್ಲಿ ಗೆಳತಿ ಜೊತೆ ವಾಸವಾಗಿದ್ದಳು. ಆಕೆಗೆ ಬ್ಯೂಟಿ ಪಾರ್ಲರ್ ಸಮೀಪದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬುಕ್ತಿಯಾರ್ ಪರಿಚಯವಾಗಿತ್ತು. ಮೇ 15ರ ಭಾನುವಾರ ಯುವತಿಯ ಗೆಳತಿ ಹುಟ್ಟು ಹಬ್ಬವಿತ್ತು. [ಭೂತಾನ್ ನಿಂದ 20 ಲಕ್ಷ ಹಣ ತಂದು ಶೆಡ್ ನಲ್ಲಿ ವಾಸವಾಗಿದ್ದರು!]

ಯುವತಿ ಗೆಳತಿ ಜೊತೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದಳು. ಈ ಸಂದರ್ಭದಲ್ಲಿ ಬುಕ್ತಿಯಾರ್‌ನನ್ನು ಆಹ್ವಾನಿಸಿದ್ದಳು. ಮೆಹಬೂಬ್ ಮತ್ತು ಖಾಲಿದ್ ಜೊತೆ ಬುಕ್ತಿಯಾರ್ ಊಟಕ್ಕೆ ಬಂದಿದ್ದ. ರಾತ್ರಿ 12 ಗಂಟೆ ತನಕ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು. [ವಿಪ್ರೋ ವಿರುದ್ಧ ಲಿಂಗ ತಾರತಮ್ಯ ಕೇಸ್ ಗೆದ್ದ ಮಹಿಳೆ!]

ನಂತರ ಆಕೆ ಬುಕ್ತಿಯಾರ್ ಬಳಿ ಸಿಗರೇಟು ಕೇಳಿದ್ದಳು. ಮನೆಯಲ್ಲಿ ಹೊಸ ಬ್ರ್ಯಾಂಡ್ ಸಿಗರೇಟಿದೆ ಅದನ್ನು ಕೊಡುತ್ತೇವೆ ಎಂದು ಯುವತಿಯನ್ನು ಮೂವರು ಮನೆಗೆ ಕರೆದುಕೊಂಡು ಹೋಗಿದ್ದರು. ಹಿಂದೆಯೂ ಆಕೆ ಹಲವು ಬಾರಿ ಬುಕ್ತಿಯಾರ್ ಮನೆಗೆ ಭೇಟಿ ನೀಡಿದ್ದಳು. ಆದ್ದರಿಂದ, ಯಾವುದೇ ಭಯವಿಲ್ಲದೇ ಅಲ್ಲಿಗೆ ತೆರಳಿದ್ದಳು.

ಮನೆಯಲ್ಲಿ ಯುವತಿ ಮೇಲೆ ಮೂವರು ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಯುವತಿ ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲಿಸ್ ಠಾಣೆಗೆ ದೂರು ನೀಡಿದ್ದಳು. ದೂರಿನ ಅನ್ವಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Electronic city police arrested three accused who sexually harassed 25 year old women on May 15, 2016. The victim, a native of Bhutan, works as a beautician in Hebbagodi. She came to Bengaluru six months ago.
Please Wait while comments are loading...