ಭೀಮಾ ಡಯಾಗ್ನಾಸ್ಟಿಕ್ಸ್ ಕೇಂದ್ರಕ್ಕೆ ಸುದೀಪ್ ರಿಂದ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18: ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಆಭರಣಗಳಿಗೆ ಖ್ಯಾತನಾಮವಾಗಿರುವ ಭೀಮಾ ಗ್ರೂಪ್‍ನಿಂದ ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ. ಇದುವರೆಗೆ ತನ್ನ ಬ್ರಾಂಡೆಡ್ ಆಭರಣಗಳ ಮೂಲಕ ಮನೆ ಮಾತಾಗಿರುವ ಭೀಮಾ ಇದೀಗ ಆರೋಗ್ಯ ಕ್ಷೇತ್ರಕ್ಕೂ ಕಾಲಿರಿಸುತ್ತಿದೆ.

ಮಾರ್ಚ್ 19 ರ ಭಾನುವಾರ ಬೆಳಗ್ಗೆ 11 ಗಂಟೆಗೆ ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ದಕ್ಷಿಣ ಭಾರತದ ಹೆಸರಾಂತ ಸಿನಿಮಾ ನಟ ಕಿಚ್ಚ ಸುದೀಪ್ ಅವರು ಈ ಅತ್ಯಾಧುನಿಕವಾದ ಪ್ರೈಮಾ ಡಯಾಗ್ನಾಸ್ಟಿಕ್ಸ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಇನ್ನುಳಿದಂತೆ ಪದ್ಮಶ್ರೀ, ಡಾ.ಬಿ.ಸಿ.ರಾಯ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಹಿರಿಯ ಕ್ಯಾನ್ಸರ್ ರೋಗ ಸರ್ಜನ್ ಆದ ಡಾ.ಕೆ.ಎಸ್.ಗೋಪಿನಾಥ್(ಎಂ.ಎಸ್, ಎಫ್‍ಎಎಂಎಸ್, ಎಫ್‍ಆರ್‍ಸಿಎಸ್), ಭೀಮಾ ಜ್ಯುವೆಲರಿಯ ಅಧ್ಯಕ್ಷರು ಮತ್ತು ಭೀಮಾ ಲೈಫ್ ಸೈನ್ಸಸ್‍ನ ಮುಖ್ಯ ಪಾಲುದಾರರಾದ ಡಾ.ಬಿ.ಗೋವಿಂದನ್ ಮತ್ತು ಸ್ಯಾಂಡಲ್‍ವುಡ್‍ನ ಖ್ಯಾತ ಅಭಿನೇತ್ರಿ ಮಯೂರಿ ಅವರು ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

Bhima Group Launches Prime Diagnostic Centre Jayanagar, Bengaluru

ಸ್ಥಳ: ಪ್ರೈಮಾ ಡಯಾಗ್ನಾಸ್ಟಿಕ್ಸ್, ಕೇರಾಫ್ ಭೀಮಾ ಲೈಫ್‍ಸೈನ್ಸಸ್ ಎಲ್‍ಎಲ್‍ಪಿ, 4/16, 9 ನೇ ಮುಖ್ಯರಸ್ತೆ, ಜಯನಗರ 3 ನೇ ಬ್ಲಾಕ್, ಬೆಂಗಳೂರು-560011.(ಕ್ಲೌಡ್‍ನೈನ್ ಕಿಡ್ಸ್ ಹಾಸ್ಪಿಟಲ್ ಮುಂದೆ).

ಈ ಪ್ರೈಮಾ ಡಯಾಗ್ನಾಸ್ಟಿಕ್‍ನ ವಿಶೇಷ ಮತ್ತು ವೈಶಿಷ್ಟ್ಯತೆ ಎಂದರೆ, ಇತ್ತೀಚಿನ ಸೀಮೆನ್ಸ್ ಅಮಿರಾ 1.5 ಟಿ ಸೈಲೆಂಟ್ ಎಂಆರ್‍ಐ, 128 ಸ್ಲೈಸ್ ಜಿಇ ರೆವಲ್ಯೂಶನ್ ಇವೊ ಸಿಟಿ ಸ್ಕ್ಯಾನರ್ ಮತ್ತು ಅತ್ಯಾಧುನಿಕವಾದ ರೇಡಿಯೋಲಾಜಿ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೇ, ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಸುಸಜ್ಜಿತ ಉಪಕರಣಗಳನ್ನು ಹೊಂದುವ ಮೂಲಕ ರೋಗಿಗಳ ಅಗತ್ಯತೆಗಳನ್ನು ಪೂರೈಸಲಿದೆ.

ಡಾ.ವಿಶ್ವನಾಥ್ ಆರ್.ಎಸ್., ಡಾ.ಸಂದೀಪ್ ಜಿ.ಎಸ್.ಕೆ., ಡಾ.ಜನಾರ್ಧನ್ ಪಿ.ಎಸ್., ಡಾ.ಶಿಲ್ಪಾ ಟಿ. ಮತ್ತು ಡಾ.ಸೋನಾಲಿ ಸೇಥಿ ಅವರನ್ನೊಳಗೊಂಡ ನುರಿತ ರೇಡಿಯೋಲಾಜಿ ವೈದ್ಯರ ತಂಡ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿರುತ್ತದೆ.

ಅದೇ ರೀತಿ, ಡಾ.ನರೇಂದ್ರಕುಮಾರ್ ಸಿ., ಡಾ.ಪ್ರತಿಭಾ, ಡಾ.ಭಾವನಾ ಎಸ್.ನಾಥ್, ಡಾ.ದಿವ್ಯಾ ಸಿ ಅವರನ್ನು ಒಳಗೊಂಡ ಲ್ಯಾಬ್ ತಂಡ ಈ ವೈದ್ಯಕೀಯ ಸೇವೆಗಳಿಗೆ ನೆರವಾಗಲಿದೆ.

ಶ್ರೀಮತಿ ಜಯಾ, ಶ್ರೀಮತಿ ಆರತಿ, ಶ್ರೀಮತಿ ದೀಪಾ, ಡಾ. ಶೀಲಾ ಪ್ರವೀಣ್, ಡಾ.ಬಿ.ಗೋವಿಂದನ್, ಡಾ.ಎಚ್.ಟಿ.ಗುರುರಾಜ್‍ರಾವ್, ಸುಧೀರ್ ಕಪೂರ್ ಮತ್ತು ಡಾ.ಎಲ್.ಎಸ್. ಪ್ರವೀಣ್ ಅವರ ಅತ್ಯಮೂಲ್ಯ ಸಹಕಾರ, ಬೆಂಬಲ ಬೆಂಗಳೂರಿನ ಡಯಾಗ್ನಾಸ್ಟಿಕ್ ವಲಯದಲ್ಲಿ ಹೊಸ ಅಲೆ ಸೃಷ್ಟಿಸಲಿರುವ ಪ್ರೈಮಾ ಡಯಾಗ್ನಾಸ್ಟಿಕ್ಸ್ ಗೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bhima Jewellers, renowned jewellery retailers in South India is all set to launch a state-of-the-art Prime Diagnostic on March 19 at Jayanagar in Bengaluru
Please Wait while comments are loading...