ಮೇ10 ರಿಂದ ಭಾರತ್ ದರ್ಶನ್ ರೈಲು: ಬೇಸಿಗೆ ರಜಾ ಮಜಾ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ಭಾರತೀಯ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ ಲಿ. ವಿಶೇಷ ಪ್ರವಾಸಿ ರೈಲು ಪ್ರಾರಂಭಿಸಲಿದೆ. ಬೇಸಿಗೆ ರಜೆ ಪ್ರಯುಕ್ತ ಈ ವಿಶೇಷ ರೈಲನ್ನು ಆರಂಭಿಸಲಾಗುತ್ತದೆ.

ಮಧುರೈನಿಂದ ಗೋವಾ, ಮುಂಬೈ, ಔರಂಗಾಬಾದ್, ಅಜಂತಾ, ಎಲ್ಲೋರ, ಹೈದರಾಬಾದ್‌ನಿಂದ ಮತ್ತೆ ಮಧುರೈ ಗೆ ಹೆರಿಟೇಜ್ ಟೂರ್ ಆಯೋಜಿಸಲ್ಪಟ್ಟಿದೆ. ಮಧುರೈನಿಂದ ಬೆಂಗಳೂರು, ಹಾಸನ ಮತ್ತು ಮಂಗಳೂರು ಮೂಲಕವಾಗಿ ಈ ರೈಲು ಸಂಚರಿಸಲಿದೆ. ಮೇ 10ರಂದು ಹಾಸನ, ಬೆಂಗಳೂರು (ಯಶವಂತಪುರ ರೈಲು ನಿಲ್ದಾಣ) ಮತ್ತು ಮೇ 11ರಂದು ಮಂಗಳೂರಿನಿಂದಲೂ ಪ್ರವಾಸಿಗರು ವಿಶೇಷ ರೈಲು ಹತ್ತಬಹುದು.

ಬೇಸಿಗೆ ರಜೆ: ಪ್ರಯಾಣಿಕರ ಸಂದಣಿ ನೀಗಿಸಲು 62 ವಿಶೇಷ ರೈಲು

ಪ್ರವಾಸದ ಅವಧಿ 10 ದಿನಗಳಾಗಿದ್ದು ಪ್ರತಿ ವ್ಯಕ್ತಿಗೆ 9,250 ರೂ. ನಿಗದಿಪಡಿಸಲಾಗಿದೆ. ಸ್ಲೀಪರ್ ಕ್ಲಾಸ್ ರೈಲು ಟಿಕೆಟ್, ರಾತ್ರಿ ಉಳಿಯಲು ಹಾಲ್ ಸೌಕರ್ಯ, ಸ್ಥಳೀಯ ಸ್ಥಳಗಳ ವೀಕ್ಷಣೆ, ಬಸ್ ವ್ಯವಸ್ಥೆ, ಪ್ರವಾಸ ವಿಮೆ, ಭದ್ರತಾ ಸಿಬ್ಬಂದಿ ಮತ್ತು ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ಪ್ಯಾಕೇಜ್ ಒಳಗೊಂಡಿದೆ.

Bharat Darshan Special train from may 10

ಹೆಚ್ಚಿನ ಮಾಹಿತಿಗೆ ಮತ್ತು ಪ್ರವಾಸಕ್ಕಾಗಿ ಟಿಕೆಟ್ ಕಾಯ್ದಿರಿಸಲು ಐಆರ್ ಸಿಟಿಸಿ ಕೌಂಟ್ ಸಂಪರ್ಕಿಸಬಹುದು. ದೂ.080-43023088ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Irctc introduced special train for summer vocations. This Bharat Darshan Train will travel across the nation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ