ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರನ್ನು ಮರೆಯಬೇಡಿ ಎಂದ ನೌಹೀರಾ ಶೇಖ್

|
Google Oneindia Kannada News

ಬೆಂಗಳೂರು, ಮಾರ್ಚ್ 27: ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಸುಖದೇವ್, ಭಗತ್ ಸಿಂಗ್ ಹಾಗೂ ಶಿವರಾಮ್ ರಾಜಗುರು ಅವರನ್ನು ನೆನಸಿಕೊಳ್ಳಲೇ ಬೇಕು ಎಂದು ಮಹಿಳಾ ಎಂಪವರ್ ಮೆಂಟ್ (ಎಂಇಪಿ )ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಚ್ 23ರಂದು ಈ ಮೂವರು ಹೋರಾಟಗಾರರು ಸ್ವಾತಂತ್ರ್ಯವನ್ನು ತಂದುಕೊಡಲು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ದಿನವಾಗಿದೆ. ಆ ಮೂರು ಸ್ವಾತಂತ್ರ್ಯ ಹೋರಾಟಗಾರಾರಿಗೆ ನಾನು ವಂದನೆ ಸಲ್ಲಿಸುತ್ತೇನೆ. ಬೇರೆಯವರಿಗೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಸುಖವನ್ನೆಲ್ಲಾ ದೇಶಕ್ಕೆ ಸಮರ್ಪಿಸಿ ಹೋರಾಟದಲ್ಲಿ ಹುತಾತ್ಮರಾದವರು ಅವರನ್ನು ಎಂದಿಗೂ ಮರೆಯಬಾರದು ಎಂದರು.

ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್ ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್

Bhagat Singh, Rajguru and Sukhdev our role model: Nowhera

ಭಾರತದ ಒಳಿತಿಗಾಗಿ ಈಗಲೂ ಕೂಡ ಹಗಲು ರಾತ್ರಿ ಹೋರಾಟ ಮಾಡುವವರೂ ಇದ್ದಾರೆ. ಅದರಲ್ಲಿ ನಮ್ಮ ಸೈನಿಕರು ಮೊದಲಿಗರು. ಹಗಲು ರಾತ್ರಿ ಎನ್ನದೆ ಹಿಮ ಪರ್ವತದಲ್ಲಿನ ಹಿಮಗಡ್ಡೆಗೂ ಅಂಜದೆ ನಮ್ಮನ್ನು ಕಾಪಾಡುತ್ತಿದ್ದಾರೆ.

ನಾವು ರಾತ್ರಿ ನೆಮ್ಮದಿಯಿಂದ ಮಲಗುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರೇ ಕಾರಣ, ಭಾರತದ ಒಳಿತಿಗಾಗಿ ಇಲ್ಲಿನ ಜನರನ್ನು ರಕ್ಷಣೆ ಮಾಡಲು, ತಮ್ಮ ಸಂಸಾರ, ಬಂಧುಗಳೆಲ್ಲರನ್ನು ದೂರಮಾಡಿಕೊಂಡು ಹೋರಾಟ ನಡೆಸುತ್ತಿದ್ದಾರೆ ಅವರೆಲ್ಲರಿಗೂ ಒಂದು ಸಲ್ಯೂಟ್ ಎಂದು ಹುತಾತ್ಮ ಸುಖದೇವ್, ಭಗತ್ ಸಿಂಗ್, ರಾಜಗುರು ಅವರಿಗೆ ನಮನ ಸಲ್ಲಿಸಿದರು.

English summary
Mahila empowerment party president Nowhera shaik has said countrymen should not said countrymen should not forget the sacrifice of freedom fighters like Bhagath singh, Rajguru and Sukhdev.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X