ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಉಪಮೇಯರ್ ಪಟ್ಟಕ್ಕೆ ಭದ್ರೇಗೌಡ ಹೆಸರು ಬಹುತೇಕ ಅಂತಿಮ

|
Google Oneindia Kannada News

Recommended Video

ಬೆಂಗಳೂರಿನ ಉಪಮೇಯರ್ ಪಟ್ಟಕ್ಕೆ ಹೆಸರು ಬಹುತೇಕ ಅಂತಿಮ | Oneindia Kannada

ಬೆಂಗಳೂರು, ಡಿಸೆಂಬರ್ 3: ಬಿಬಿಎಂಪಿ ಉಪಮೇಯರ್ ರಮೀಳಾ ಶಂಕರ್ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪ ಮೇಯರ್ ಹುದ್ದೆಗೆ ಜೆಡಿಎಸ್‌ನ ಭದ್ರೇಗೌಡ ಹಾಗೂ ಇಮ್ರಾನ್ ಪಾಷಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ವರಿಷ್ಠರು ನಾಗಪುರ ವಾರ್ಡ್‌ನ ಭದ್ರೇಗೌಡ ಅವರಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಡಿಸೆಂಬರ್ 5 ರಂದು ಮಧ್ಯಾಹ್ನ 1 ಗಂಟೆಗೆ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ನಡುವೆ ಮೇಯರ್ ಹಾಗೂ ಉಪಮೇಯರ್ ಪಟ್ಟ ಹಂಚಿಕೆಯಾಗಿರುವುದರಿಂದ ಉಪ ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ.

 ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು! ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!

ಹೀಗಾಗಿ ಕಳೆದ ಸೆಪ್ಟೆಂಬರ್ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜು ಹಾಗೂ ಉಪ ಮೇಯರ್ ಆಗಿ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದರು. ಆದರೆ ಉಪ ಮೇಯರ್ ಆಗಿ ಆಯ್ಕೆಯಾದ ಆರೇ ದಿನಗಳಲ್ಲಿ ರಮೀಳಾ ನಿಧನ ಹೊಂದಿದ್ದರು. ಹೀಗಾಗಿ ಉಪಮೇಯರ್ ಸ್ಥಾನ ತೆರವಾಗಿದ್ದು, ಬುಧವಾರ ಹೊಸ ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಶನಿವಾರ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿದ್ದು, ಇಮ್ರಾನ್ ಪಾಷಾ ಹಾಗೂ ಭದ್ರೇಗೌಡ ಇಬ್ಬರು ಆಕಾಂಕ್ಷಿಗಳಾಗಿದ್ದಾರೆ.

Bhadregowda likely to be Deputy Mayor of Bengaluru

ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಭದ್ರೇಗೌಡ ಅವರನ್ನು ಉಪ ಮೇಯರ್ ಆಗಿ ನಿಯೋಜಿಸಲು ಒಲವು ತೋರಿದ್ದು ಮಂಗಳವಾರ ಸಂಜೆ ಅಂತಿಮವಾಗಿ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?

ಈ ನಡುವೆ ಉಪಮೇಯರ್ ಹುದ್ದೆಗೆ ಆಕಾಂಕ್ಷಿಯಾಗಿರುವ ಇಮ್ರಾನ್ ಪಾ‍ಷಾ ಬುಧವಾರ ಬೆಳಗ್ಗೆ ತಮ್ಮ ಬೆಂಬಲಿಗರ ಸಭೆ ಕರೆದಿದ್ದು ವರಿಷ್ಠರ ನಿರ್ಧಾರ ಕುರಿತಂತೆ ತಮ್ಮ ಬೆಂಬಲಿಗರಿಗೆ ಮಾಹಿತಿ ನೀಡಲಿದ್ದಾರೆ.

ಪಕ್ಷದ ವರಿಷ್ಠರು ಈಗಾಗಲೇ ಭದ್ರೇಗೌಡ ಅವರ ಪರ ಒಲವು ತೋರಿರುವುದರಿಂದ ಇಮ್ರಾನ್ ಪಾಷಾ ಅವರ ಮುಂದಿನ ನಡೆ ಏನು ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ಉಪ ಮೇಯರ್ ಆಯ್ಕೆ ವಿಚಾರದಲ್ಲಿ ಭಿನ್ನಮತ ಭುಗಿಲೆದ್ದರೆ ಚುನಾವಣೆಯಲ್ಲಿ ಆಗಬಹುದಾದ ಹಿನ್ನಡೆಯನ್ನು ತಪ್ಪಿಸಿಕೊಳ್ಳಲು ಜೆಡಿಎಸ್ ಸಂಧಾನ ತಂತ್ರ ಅನುಸರಿಸುತ್ತಿದ್ದು, ಭದ್ರೇಗೌಡ ಅವರ ಹೆಸರನ್ನು ಪ್ರಕಟಿಸದೆ ಗೌಪ್ಯವಾಗಿಡುವ ಸಾಧ್ಯತೆ ಇದೆ.

English summary
Nagapura ward corporator Bhadregowda will become deputy mayor of Bengaluru which was vacant after demise of Ramila Umashankar recently. The polling will be held on December 5
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X