ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭೇಟಿ ಬಚಾವೋ ಭೇಟಿ ಪಡಾವೋ' ವಂಚಕರ ಬಗ್ಗೆ ಎಚ್ಚರವಿರಲಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಆಗಸ್ಟ್ 7: 'ಭೇಟಿ ಬಚಾವೋ ಭೇಟಿ ಪಡಾವೋ' ಯೋಜನೆಯಡಿ 2 ಲಕ್ಷ ರುಪಾಯಿ ನಗದು ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಹೆಣ್ಣುಮಕ್ಕಳ ವೈಯಕ್ತಿಕ ಮಾಹಿತಿಯನ್ನು ಪಡೆದು ವಂಚಿಸುತ್ತಿರುವುದು ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವಾಲಯದ ಗಮನಕ್ಕೆ ಬಂದಿದೆ.

ಪತಂಜಲಿ ಹೆಸರಲ್ಲಿ ಉಡುಪಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆಪತಂಜಲಿ ಹೆಸರಲ್ಲಿ ಉಡುಪಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಈ ಕುರಿತು ಇಲಾಖೆಯು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದ್ದು, ಮುಗ್ಥ ಹೆಣ್ಣುಮಕ್ಕಳಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುವುದು ಕಾನೂನು ಬಾಹಿರ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ನಗದು ನೀಡುವ ಕಾರ್ಯಕ್ರಮ ಇಲ್ಲ. ವಂಚಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

Beware of cheating in the scheme name of Beti Bachao Beti Padhao

ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ- ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ್, ಬ್ಯಾಂಕ್ ವಿವರಗಳು, ದೂರವಾಣಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐ.ಡಿ ಅಥವಾ ಇತರೆ ಯಾವುದೇ ಮಾಹಿತಿ ಬಹಿರಂಗಪಡಿಸಬಾರದು ಎಂದು ತಿಳಿಸಲಾಗಿದೆ.

ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ!ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ!

ಇಂತಹ ವಂಚನೆಗಳನ್ನು ಮಾಡುವವರ ಬಗ್ಗೆ ವ್ಯಕ್ತಿಗಳ, ಸಂಸ್ಥೆಗಳ ಹೆಸರನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು.

ಸ್ನೇಹಿತರು, ಸಂಬಂಧಿಕರು ಹಾಗೂ ನಿಮ್ಮನ್ನು ಸಂಪರ್ಕಿಸುವ ಎಲ್ಲರಿಗೂ ಇಂತಹ ವಂಚಕರ ವಿರುದ್ಧ ಜಾಗರೂಕರಾಗಿರುವಂತೆ ತಿಳಿಸಬೇಕು ಎಂದು ಇಲಾಖೆಯು ಪ್ರಕಟಣೆ ತಿಳಿಸಿದೆ.

English summary
Beware of cheating in the scheme name of Bheti Bachavo Bheti Padavo. Cheaters telling that, 2 lakh rupees given in the scheme. But there is no such grant under the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X