ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಬಿಲ್ ಹೈಟೆಕ್, ಬಂತು ಫೋಟೋ ಬಿಲ್

|
Google Oneindia Kannada News

BESCOM
ಬೆಂಗಳೂರು, ಫೆ.6 : ಮೀಟರ್ ರೀಡರ್ ಗಳು ಮಾಡುವ ಯಡವಟ್ಟಿನಿಂದ ಗ್ರಾಹಕರಿಗೆ ಉಂಟಾಗುವ ಕಿರಿಕಿರಿ ತಪ್ಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸಜ್ಜಾಗಿದೆ. ಫೋಟೋ ಬಿಲ್ ವ್ಯವಸ್ಥೆಯನ್ನು ಜಾರಿಗೆ ತರಲು ಬೆಸ್ಕಾಂ ಮುಂದಾಗಿದೆ.

ಫೋಟೋ ಬಿಲ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದ ಬೆಸ್ಕಾಂ ಹಣಕಾಸು ನಿರ್ದೇಶಕ ಬಿ.ಎಲ್.ಗುರುಪ್ರಸಾದ್, ಫೋಟೋ ಬಿಲ್ ವ್ಯವಸ್ಥೆಯಿಂದ ಮೀಟರ್ ರೀಡರ್ ಅಂಕಿ ಅಂಶಗಳನ್ನು ಸಂಗ್ರಹಿಸುವಾಗ ನಿರ್ಲಕ್ಷ್ಯ ಮಾಡುವುದು ತಪ್ಪಲಿದೆ ಎಂದು ಹೇಳಿದರು. ಈ ವ್ಯವಸ್ಥೆಯಿಂದಾಗಿ ಗ್ರಾಹಕರಿಗೆ ಹೆಚ್ಚಿನ ಬಿಲ್ ಬರುವ ಕಿರಿಕಿರಿಯು ತಪ್ಪಲಿಗೆ ಎಂದರು.

ಬಿಲ್ ಮೊತ್ತದಲ್ಲಿ ಏರುಪೇರು, ಬಳಸಿದ ಯೂನಿಟ್ ಗಳಿಗಿಂತ ಹೆಚ್ಚು ಬರುವುದು ಮುಂತಾದ ಸಮಸ್ಯೆಗಳು ಬಗೆಹರಿಯಲಿವೆ. ಈಗಾಗಲೇ ಕೋಲಾರ ಜಿಲ್ಲೆಯ ಬಂಗಾರಪೇಟೆ ಉಪ ವಿಭಾಗದಲ್ಲಿ 2014ರ ಜನವರಿಯಿಂದ ಈ ಸೇವೆಯನ್ನು ಪರಿಕ್ಷಾರ್ಥವಾಗಿ ಆರಂಭಿಸಲಾಗಿದ್ದು, ಯಶಸ್ವಿಯಾಗಿದೆ ಎಂದು ಗುರುಪ್ರಸಾದ್ ತಿಳಿಸಿದರು.

ಹೇಗಿದೆ ವ್ಯವಸ್ಥೆ : ಫೋಟೋ ಬಿಲ್ ವ್ಯವಸ್ಥೆಗಾಗಿ ಮೀಟರ್ ರೀಡರ್ ಯಂತ್ರಗಳಿಗೆ 3 ಮೆಗಾ ಪಿಕ್ಸಲ್ ಕ್ಯಾಮರಾ ಅಳವಡಿಸಲಾಗುತ್ತದೆ. ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿ ಮೀಟರ್ ಸಂಖ್ಯೆಯನ್ನು ಕ್ಯಾಮರಾದಲ್ಲಿ ಮೊದಲು ಸೆರೆ ಹಿಡಿಯಬೇಕು.

ಹೀಗೆ ಸೆರೆ ಹಿಡಿದ ಚಿತ್ರ ಜಿಪಿಎಸ್ ಮೂಲಕ ಉಪ ವಿಭಾಗ ಕಚೇರಿಯಲ್ಲಿ ಅಳವಡಿಸಿರುವ ಡಾಟಾ ಬೇಸ್ ನಲ್ಲಿ ಸಂಗ್ರಹವಾಗುತ್ತದೆ. ಬಿಲ್ ಜಾರಿಯಾಗುವಾಗ ಮಿಟರ್ ರೀಡರ್ ಗಳು ಸಂಗ್ರಹಿಸಿದ ಮಾಹಿತಿ ಹಾಗೂ ಡಾಟಾ ಬೇಸ್ ನಲ್ಲಿರುವ ಮಾಹಿತಿ ಹೋಲಿಕೆ ಮಾಡಿ ಬಿಲ್ ಮುದ್ರಿಸಲಾಗುತ್ತದೆ.

ಈ ವ್ಯವಸ್ಥೆಯಿಂದಾಗಿ ಹೆಚ್ಚು ಬಿಲ್ ಬರುವುದು ತಪ್ಪಲಿಗೆ ಎಂದು ಗುರುಪ್ರಸಾದ್ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಬೆಂಳೂರಿನಲ್ಲಿ ಜಾರಿಗೆ ಬರಲಿದೆ. ನಂತರ ಗ್ರಾಹಕರು ಹೆಚ್ಚು ಬಿಲ್ ಬಂತು ಎಂದು ಬೆಸ್ಕಾಂಅನ್ನು ದೂರುವುದು ತಪ್ಪಲಿದೆ.

English summary
To reduce human error as well as the number of billing complaints, the Bangalore Electricity Supply Company (BESCOM) , will soon put in place a photo billing system, BESCOM said. The meter reader will take a photo of each reading with a three mega pixel camera. These images will be uploaded and geographically tagged in a database at the sub-division level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X