ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂನಿಂದ ಮತ್ತೆ ಶಾಕ್, ಲೋಡ್ ಶೆಡ್ಡಿಂಗ್ ಅವಧಿ ಹೆಚ್ಚಳ

By Mahesh
|
Google Oneindia Kannada News

ಬೆಂಗಳೂರು, ಸೆ. 04: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) ತನ್ನ ಲೋಡ್ ಶೆಡ್ಡಿಂಗ್ ಅವಧಿಯನ್ನು ವಿಸ್ತರಣೆ ಮಾಡಿದೆ. ಪ್ರತಿದಿನ 2 ಗಂಟೆ ವಿದ್ಯುತ್ ಕಡಿತ ಮಾಡುವುದಾಗಿ ಹೇಳಿದ್ದ ಬೆಸ್ಕಾಂ ಈಗ 3 ತಾಸು ವಿದ್ಯುತ್ ಕಡಿತ ಜಾರಿಗೊಳಿಸಿದೆ.

ಲೋಡ್ ಶೆಡ್ಡಿಂಗ್ ವೇಳಾಪಟ್ಟಿ ಪರಿಷ್ಕೃತ ವೇಳಾ ಪಟ್ಟಿಯನ್ನು ಬೆಸ್ಕಾಂ(www.bescom.org) ತನ್ನ ಫೇಸ್ ಬುಕ್ ಪುಟದಲ್ಲಿ ಗುರುವಾರ ರಾತ್ರಿಯೇ ಪ್ರಕಟಿಸಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಗಂಟೆಗಳ ಕಾಲ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತ ಜಾರಿಯಾಗಿದೆ.[ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಬಹುಮಹಡಿ ಕಟ್ಟಡಗಳಲ್ಲಿ]

ಬೆಂಗಳೂರಿನ ಐದು ವಿಭಾಗಗಳಲ್ಲಿ ಪ್ರತಿ ದಿನ ಮೂರಿ ಹೊತ್ತು ಒಂದು ಗಂಟೆಗಳ ಕಾಲ ವಿದ್ಯುತ್ ಕಡಿತ ಜಾರಿಯಾಗಲಿದೆ. ಈ ಲೋಡ್ ಶೆಡ್ಡಿಂಗ್ ಮುಂದಿನ ವಾರದ ತನಕ ಜಾರಿಯಲ್ಲಿರುತ್ತದೆ. ನಂತರ ಬೇರೆ ವೇಳಾಪಟ್ಟಿ ನಿರೀಕ್ಷಿಸಬಹುದು. [ಮನೆಯಲ್ಲಿಯೇ ಬೆಸ್ಕಾಂ ಬಿಲ್ ಕಟ್ಟಿ, ರಶೀದಿ ಪಡೆಯಿರಿ]

BESCOM reschedules Load Shedding in Bengaluru

ವಿದ್ಯುತ್ ಕೊರತೆ: ಕೈಗಾರಿಕೆ, ಕುಡಿಯುವ ನೀರು ಹಾಗೂ ಅಗತ್ಯ ಸೇವೆಗಳ ಫೀಡರ್ ಗಳಿಗೆ ಮಾತ್ರ 24 ತಾಸುಗಳ ನಿರಂತರ ವಿದ್ಯುತ್ ಸರಬರಾಜು ಮುಂದುವರೆಯಲಿದೆ. ಕರ್ನಾಟಕ ರಾಜ್ಯ ಸುಮಾರು 1,820 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ಬೆಸ್ಕಾಂ ಪಾಲು ಇದರಲ್ಲಿ 900 ಮೆ .ವ್ಯಾ ನಷ್ಟಿದೆ ಹೀಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ.

ಲೋಡ್ ಶೆಡ್ಡಿಂಗ್ ಜಾರಿಯಲ್ಲಿರ ಬೆನ್ನಲ್ಲೇ ಶುಕ್ರವಾರದಂದು ದಕ್ಷಿಣ ಬೆಂಗಳೂರಿನಲ್ಲಿ ಬೆಳಗ್ಗಿನಿಂದ ಸಂಜೆ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ[ವಿವರ ಇಲ್ಲಿ ಓದಿ] ಹೆಚ್ಚಿನ ಮಾಹಿತಿಗೆ ಬೆಸ್ಕಾಂ ಫೇಸ್ ಬುಕ್ ಪುಟಕ್ಕೆ ಭೇಟಿ ಕೊಡಿ ಅಥವಾ 1912 ಗೆ ಕರೆ ಮಾಡಿ

Dear Consumer, LOAD SHEDDING SCHEDULE IN BANGALORE CITY

Posted by Bescom on3 September 2015

English summary
BESCOM reschedules Load Shedding in Bengaluru. Citizens can get latest time table on Bescom website (www.bescom.org) or visit Facebook page. Bengaluru city will not have electricity for three hours daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X