ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂ ಆನ್‌ಲೈನ್ ಸೇವೆಗೆ 14 ಸಾವಿರ ಅರ್ಜಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಬೆಸ್ಕಾಂ ಆನ್‌ಲೈನ್ ಸೇವೆಯನ್ನು ಈಗಾಗಲೇ ಆರಂಭಿಸಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಎರಡೇ ತಿಂಗಳಲ್ಲಿ 14 ಸಾವಿರ ಗ್ರಾಹಕರು ಅರ್ಜಿ ಸಲ್ಲಿಸಿ ತ್ವರಿತ ಸೇವೆಗೆ ಕೋರಿಕೆ ಸಲ್ಲಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸರ್ಕಾರಿ ಸಂಸ್ಥೆಯ ಈ ಹೊಸ ಕ್ರಮದಿಂದಾಗಿ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ ಹಾಗೂ ದರ ಬದಲಾವಣೆ ಹಾಗೂ ದರ ಬದಲಾವಣೆಗಾಗಿ ಗ್ರಾಹಕರು ಕಚೇರಿಗೆ ಅಲೆದಾಡುವುದು ತಪ್ಪಿದೆ. ಸರ್ಕಾರಿ ಕಾರ್ಯವೈಖರಿಯ ಕಿರಿಕಿರಿ ಅನುಭವಿಸುವುದು ಕ್ರಮೇಣ ಮರೆಯಾಗುತ್ತಿದೆ.

ಬೆಸ್ಕಾಂ ಸವಿಕಿರಣ ಸೇವೆ :24 ತಾಸಿನಲ್ಲಿ ವಿದ್ಯುತ್ ಸಂಪರ್ಕಬೆಸ್ಕಾಂ ಸವಿಕಿರಣ ಸೇವೆ :24 ತಾಸಿನಲ್ಲಿ ವಿದ್ಯುತ್ ಸಂಪರ್ಕ

ಇದಕ್ಕೆಲ್ಲಾ ಬ್ರೇಕ್ ಹಾಕಿರುವ ಆನ್ ಲೈನ್ ಸೇವೆಗೆ ಇನ್ನಷ್ಟು ಗಮನ ನೀಡಲು ಬೆಸ್ಕಾಂ ನಿರ್ಧರಸಿದೆ. ಬೆಸ್ಕಾಂ ನಲ್ಲಿ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟ ಎಂಬ ಮಾತಿದೆ. ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ , ಅಧಿಕಾರಿ ವರ್ಗ ನಿಗಧಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡುವುದಿಲ್ಲ ಎಂಬ ಅಪವಾದವೂ ಇದೆ. ಆದರೀಗ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ 48ಗಂಟೆಗಳಲ್ಲಿ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಸಿಗಲಿದೆ.

BESCOM online service receives good response

ಹೊಸ ಸಂಪರ್ಕಕ್ಕಾಗಿ 2,425ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೆಸರು ಬದಲಾವಣೆ ಹಾಗೂ ದರ ಪಟ್ಟಿ ಬದಲಾವಣೆಗೆ ಕ್ರಮವಾಗಿ 10,274 ಹಾಗೂ 1,641 ಅರ್ಜಿಗಳು ಸಲ್ಲಿಕೆಯಾಗಿದೆ. ಈ ಪೈಕಿ ಶೇ.90 ರಷ್ಟು ಅರ್ಜಿಗಳು ಬೆಂಗಳೂರು ಮಹಾನಗರ ಭಾಗದಿಂದಲೇ ಸಲ್ಲಿಕೆಯಾಗಿದೆ.ಗ್ರಾಮೀಣ ಭಾಗದಲ್ಲಿ ಇನ್ನಷ್ಟೇ ಸೇವೆ ವೇಗ ಪಡೆಯಬೇಕಾಗಿದ್ದು, ಅಲ್ಲೆಲ್ಲಾ ಗ್ರಾಹಕ ಜಾಗೃತಿಗೆ ಬೆಸ್ಕಾಂ ಮುಂದಾಗಿದೆ.

ಬಳಕೆಯಲ್ಲಿ ನಗರದ ಗ್ರಾಹಕರು ಮುಂದು: ಹೊಸ ಸೇವೆ ಬಳಸಿಕೊಳ್ಳುವಲ್ಲಿ ರಾಜಧಾನಿಯ ಗ್ರಾಹಕರು ಮುಂದಿದ್ದಾರೆ. ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಮಹಾನಗರರ ಉಪ ಕೇಂದ್ರಗಳ ವ್ಯಾಪ್ತಿಯ ಗ್ರಾಹಕರು ಆನ್ ಲೈನ್ ಸೇವೆಗೆ ಸ್ಪಂದಿಸಿದ್ದಾರೆ. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಬೆನ್ನಿಗಾನಹಳ್ಳಿ, ಇಂದಿರಾನಗರ, ವಿಲ್ಸನ್ ಗಾರ್ಡನ್ ಉಪಕೇಂದ್ರಗಳು ಮುಂದಿವೆ.

English summary
New connection for electricity and related service have been sanctioning through online applications within 48hours of requisition and around 14thousand applications have been received after launching the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X