ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪವರ್‌ ಕಟ್‌ ಕುರಿತು ಮೊಬೈಲ್‌ನಲ್ಲಿ ದೊರೆಯಲಿದೆ ಮಾಹಿತಿ

By Nayana
|
Google Oneindia Kannada News

ಬೆಂಗಳೂರು, ಜೂನ್‌ 29: ಇನ್ನುಮುಂದೆ ಅಯ್ಯೋ ಕರೆಂಟ್‌ ಹೋಯ್ತಲ್ಲ ಏನೋ ಕೆಲಸ ಮಾಡ್ತಿದ್ದೆ ಇವಾಗಲೇ ಹೋಗ್ಬೇಕಿತ್ತಾ ಎನ್ನುವ ಮಾತುಗಳು ಕೇಳುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ಬೆಸ್ಕಾಂ ಕಾಯಾವ ಕರೆಂಟ್‌ ಹೋಗುತ್ತದೆ ಇನ್ನಿತರೆ ಮಾಹಿತಿಗಳನ್ನು ಮುಂಚಿತವಾಗಿಯೇ ಜನರಿಹೆ ತಿಳಿಸಲು ಬೆಸ್ಕಾಂ ನಿರ್ಧರಿಸಿದೆ.

ಗ್ರಾಹಕರಿಗಾಗಿಯೇ ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಬೆಸ್ಕಾಂ ಮಿತ್ರ ಅಪ್ಲಿಕೇಷನ್‌ ಬಿಡುಗಡೆ ಮಾಡಿದೆ, ಈ ಅಪ್ಲಿಕೇಷನ್‌ ಮೂಲಕ ಜನರಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಯಾವಾಗ ವಿದ್ಯುತ್ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ಕರೆಂಟ್‌ ಬರುತ್ತದೆ ಎಂಬೆಲ್ಲಾ ಮಾಹಿತಿಗಳ ಕುರಿತು ಜನರಿಗೆ ಮಾಹಿತಿ ದೊರೆಯಲಿದೆ.

ಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರುಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರು

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಪ್ಲಿಕೇಷನ್‌ ವಿದ್ಯುತ್‌ ಸಂಪರ್ಕಗಳು ಎಲ್ಲೆಲ್ಲಿ ಕಡಿತಗೊಂಡಿವೆ ಎಂಬುದರ ಕುರಿತ ಮಾಹಿತಿಗಳನ್ನಷ್ಟೇ ನೀಡುತ್ತಿತ್ತು, ಆದರೆ ಈ ಅಪ್ಲಿಕೇಷನ್‌ ನಿಧಾನಗತಿಯಲ್ಲಿ ಮಾಹಿತಿ ನೀಡುತ್ತಿತ್ತು. ಪ್ರಸ್ತುತ ಉಧ್ದೇಶಿಸಲಾಗಿರುವ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದೇ ಆದರೆ, ಸಮಸ್ಯೆಗಳನ್ನು ಹೇಳಿಕೊಂಡು ಬೆಸ್ಕಾಂಗೆ ಕರೆ ಮಾಡುವ ಜನರ ಸಂಖ್ಯೆ ಕೂಡ ಕಡಿಮೆಯಾಗಲಿದೆ.

BESCOM now more dearer than ever for consumers with revised mobile App

ಬೆಸ್ಕಾಂ ಸಹಾಯವಾಣಿ 1912 ಕಾರ್ಯನಿರ್ವಹಿಸುತ್ತಿದ್ದು, ನೆಟ್'ವರ್ಕ್ ಜಾಮ್ ಆಗುವುದರಿಂದ ಎಷ್ಟೋ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹೀಗಾಗಿ ಆ್ಯಪ್ ಮೂಲಕ ಜನರಿಗೆ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ಬರುತ್ತದೆ ಎಂಬ ಮಾಹಿತಿಗಳನ್ನು ನೀಡಲಾಗುತ್ತದೆ.

ಇದರಿಂದ ಜನರು ಕರೆ ಮಾಡುವುದು, ದೂರು ನೀಡುವ ಅಗತ್ಯಗಳು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಸ್ಕಾಂ ಆ್ಯಪ್ ಬಿಡುಗಡೆಯಾಗಿ 6 ತಿಂಗಳುಗಳಾಗಿದ್ದು, ನಗರದಲ್ಲಿ 1.10 ಕೋಟಿ ಜನರು ಬೆಸ್ಕಾಂ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ದಕ್ಷಿಣ ಮತ್ತು ಪೂರ್ವ ಭಾಗದ ಜನರೇ ಹೆಚ್ಚಾಗಿದ್ದಾರೆ. ಬಹುತೇಕ ಜನರು ಬಿಲ್ ಪಾವತಿಸಲು ಹಾಗೂ ದೂರು ದಾಖಲಿಸುವ ಸಲುವಾಗಿ ಬಳಕೆ ಮಾಡುತ್ತಿದ್ದಾರೆಂದು ಬೆಸ್ಕಾಂ ವಕ್ತಾರರು ಹೇಳಿದ್ದಾರೆ.

English summary
To receive the grievances with easy manner, Bescom is revising its old mobile application with more efficient of software and its operational staff. Officials said that the company is conducting training for its staff to work with more effectiveness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X