ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರುವ ಮೇ ತಿಂಗಳಿನಿಂದ ಬೆಸ್ಕಾಂ ಹೊಸ ಪದ್ದತಿ

|
Google Oneindia Kannada News

BESCOM meter reading from 15th to 15th every month
ಬೆಂಗಳೂರು, ಏ 27: ಮಾಸಿಕ ವಿದ್ಯುತ್ ಮೀಟರ್ ರೀಡಿಂಗ್ ಸಂಬಂಧ ಬೆಸ್ಮಾಂ (Bangalore Electrical Supply Company) ಹೊಸ ಪದ್ದತಿಯನ್ನು ಮೇ 2014 ತಿಂಗಳಿನಿಂದ ಆರಂಭಿಸುತ್ತಿದೆ.

ಮೇ ತಿಂಗಳಿನಿಂದ ಅನ್ವಯವಾಗುವಂತೆ ಮೀಟರ್ ರೀಡಿಂಗ್ ಪ್ರತೀ ತಿಂಗಳು ಹದಿನೈದನೇ ತಾರೀಕಿನೊಳಗೆ ನಡೆಯಲಿದೆ. (ವಿದ್ಯುತ್ ಬಿಲ್ ಹೈಟೆಕ್, ಬಂತು ಫೋಟೋ ಬಿಲ್)

15ನೇ ತಾರೀಕಿನ ಮೇಲೂ ನಡೆಯುತ್ತಿದ್ದ ಮೀಟರ್ ರೀಡಿಂಗ್ ವ್ಯವಸ್ಥೆಯನ್ನು ನಿಲ್ಲಿಸಲಾಗುತ್ತಿದ್ದು, ಆಯಾಯ ತಿಂಗಳಿನ ಬಿಲ್ಲನ್ನು ತಿಂಗಳಾಂತ್ಯದೊಳಗೆ ಪಾವತಿಸಲು ಬೆಸ್ಕಾಂ ಸೂಕ್ತ ವ್ಯವಸ್ಥೆ ಜಾರಿಗೆ ತಂದಿದೆ.

ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ RADPRP ವ್ಯವಸ್ಥೆಯಲ್ಲಿ ಸುಮಾರು ಅರವತ್ತು ಲಕ್ಷ ಗ್ರಾಹಕರಿದ್ದು, ಈ ಪೈಕಿ ಸುಮಾರು 16ಲಕ್ಷ ಗ್ರಾಹಕರ ಮಾಸಿಕ ಬಿಲ್ಲಿಂಗ್ ಅನ್ನು 15ನೇ ತಾರೀಕಿನ ನಂತರ ಮಾಡಲಾಗುತ್ತಿತ್ತು.

ಬೆಸ್ಕಾಂ ಸಂಸ್ಥೆಯ ಆದಾಯ ಹೆಚ್ಚಿಸುವ ಸಲುವಾಗಿ ಎಲ್ಲಾ ಗ್ರಾಹಕರ ಮೀಟರ್ ರೀಡಿಂಗ್ ಅನ್ನು ಇನ್ನು ಮುಂದೆ ಹದಿನೈದನೇ ತಾರೀಕಿನೊಳಗೆ ಮುಗಿಸಲು ಬೆಸ್ಕಾಂ ನಿರ್ಧರಿಸಿದೆ.

ಹಿಂದಿನ ಮೀಟರ್ ರೀಡಿಂಗ್ ದಿನಾಂಕದಿಂದ ಹೊಸ ಮೀಟರ್ ರೀಡಿಂಗ್ ದಿನಾಂಕದವರೆಗೆ ಬರುವ ಹೆಚ್ಚುವರಿ ದಿನಗಳ ಬಿಲ್ಲನ್ನು ಏಪ್ರಿಲ್ ತಿಂಗಳ ವಿದ್ಯುತ್ ಬಳಕೆಯ ಬಿಲ್ಲಿನಲ್ಲಿ (ಅಂದರೆ ಮೇ ತಿಂಗಳಲ್ಲಿ ಬರುವ ಬಿಲ್) ಸೇರಿಸಲಾಗುವುದು ಮತ್ತು ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ.

English summary
BESCOM (Bangalore Electrical Supply Company) meter reading cut off date will end from 15th of every month, effective from May 2014 onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X