ಉಪೇಂದ್ರ ಓದಿದ್ದ ಕನ್ನಡ ಶಾಲೆ ಮುಚ್ಚುವಂತೆ ಆದೇಶ!

Posted By:
Subscribe to Oneindia Kannada

ಬೆಂಗಳೂರು, ಜುಲೈ 17: ಈ ಕನ್ನಡ ಶಾಲೆಯಲ್ಲಿ 40 ವಿದ್ಯಾರ್ಥಿಗಳಿದ್ದಾರೆ ಆದ್ರೂ ಬಿಇಓ ಇದನ್ನು ಮುಚ್ಚೋಕೆ ಹೊರಟಿದ್ದಾರೆ.‌ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಲ್ಕನೇ ತರಗತಿ ತನಕ ಇಲ್ಲೇ ಓದಿದ್ದರು ಎಂಬ ಸುದ್ದಿಯಿದೆ.

ಇಂಥ ಶಾಲೆಯನ್ನು ಮುಚ್ಚಲು ಬೆಂಗಳೂರಿನ ಬಸವನಗುಡಿಯ ಶಂಕರಪುರಂನಲ್ಲಿರುವ ಅಶೋಕ ಶಿಶು ವಿಹಾರ ಶಾಲೆ ಮುಚ್ಚುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

BEO directs to close Ashoka Shishu Vihar School, Basavanagudi irks Kannadigas

ಈ ಕನ್ನಡ ಶಾಲೆಯಲ್ಲಿ 40 ವಿದ್ಯಾರ್ಥಿಗಳಿದ್ದಾರೆ ಆದ್ರೂ ಬಿಇಓ ಇದನ್ನು ಮುಚ್ಚೋಕೆ ಹೊರಟಿದ್ದಾರೆ.‌.

ಇದೆಲ್ಲೋ ಗಡಿಭಾಗದಲ್ಲಿ ನಡೆಯುತ್ತಿರುವ ವಿಷ್ಯವಲ್ಲ. ಈ ದುರಂತ ನಡೆಯುತ್ತಿರುವುದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂಭಾಗದಲ್ಲಿ, ಕನ್ನಡ ಪತ್ರಿಕೆ ವಿಜಯವಾಣಿ ಕಛೇರಿ ಪಕ್ಕದಲ್ಲಿ!!

ಅಶೋಕ_ಶಿಶುವಿಹಾರ ಎಂಬ ಬಡ ವಿದ್ಯಾರ್ಥಿಗಳೇ ತುಂಬಿರುವ ಈ ಶಾಲೆ ಮೇಲೆ ಅಲ್ಲಿನ ಬಿಇಓಗೆ ಅದ್ಯಾಕೆ ಈ ಪರಿ ಸಿಟ್ಟೋ ಗೊತ್ತಾಗುತ್ತಿಲ್ಲ. ಇವತ್ತು ಹತ್ತುಗಂಟೆಗೆ ಎಲ್ಲಾ ಮಕ್ಕಳಿಗೆ ಟಿಸಿ ಕೊಡಲು ಶಿಕ್ಷಕರಿಗೆ ಮೌಖಿಕ ಆದೇಶ ಕೊಟ್ಟಿದ್ದಾರಂತೆ. ಹಾಗೇನಾದರೂ ಆದರೆ ಖಂಡಿತ ಈ ಶಾಲೆ ಶಾಶ್ವತವಾಗಿ ಮುಚ್ಚಿಹೋಗಲಿದೆ. ಇದನ್ನು ತಡೆಯಬೇಕಿದೆ.

B S Yeddyurappa Role Will Played By Real Star Upendra

ಈ ಶಾಲೆಗೆ ಕಳೆದ ಕೆಲವು ವರುಷಗಳ ಹಿಂದೆ ಡಾ.ವಿಷ್ಣುವರ್ಧನ್ ಅವರು ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದರಂತೆ ಎನ್ನುವುದರ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಲ್ಕನೇ ತರಗತಿ ತನಕ ಇಲ್ಲೇ ಓದಿದ್ದರಂತೆ ಎಂಬುದನ್ನೂ ಸೇರಿಸಿ ಓದಿಕೊಳ್ಳಿ.
ಇಂತಹ ಶಾಲೆ ಶಾಶ್ವತವಾಗಿ ಮುಚ್ಚಿಹೋಗುತ್ತಿದೆ. ಬಿಇಓಗೆ ಕರೆ ಮಾಡಿದ್ರೆ ಸ್ವೀಕರಿಸ್ತಿಲ್ಲ. ನೀವೊಮ್ಮೆ ಕರೆ ಮಾಡಿ ಆ ಮಹಾನುಭಾವ ಬಿಇಓ_ವೆಂಕಟೇಶ್ ಅವರಿಗೆ 9480695025.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Education officer orders closure of Ashoka Shishu Vihar School, Basavanagudi irks Kannadigas
Please Wait while comments are loading...