ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಳ್ಳನ ಕಿರುಬೆರಳ ಸಮೇತ ಠಾಣೆಗೆ ಬಂದು ದೂರು ನೀಡಿದ ಮಹಿಳೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಕಳ್ಳನ ಕಿರುಬೆರಳನ್ನು ಠಾಣೆಗೆ ತೆಗೆದುಕೊಂಡು ಬಂದು ಮಹಿಳೆಯೊಬ್ಬರು ದೂರು ನೀಡಿದ ಘಟನೆ ನಗರದಲ್ಲಿ ನಡೆದಿದೆ.

ಎಚ್‌ಎಎಲ್‌ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರು ಅರ್ಧ ತುಂಡಾದ ಕೈಬೆರಳನ್ನು ತಂದಿದ್ದರು. ಇದನ್ನು ನೋಡಿದ ಪೊಲೀಸರೇ ಅವಾಕ್ಕಾದರು. ಮಹಿಳೆಯ ಧೈರ್ಯ ಕಂಡು ಆಕೆಗೆ ಶಹಬ್ಬಾಸ್ ಕೂಡ ನೀಡಿದರು.

ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ

ನಡೆದದ್ದು ಏನು?
ಎಇಸಿಎಸ್‌ ಬಡಾವಣೆ ನಿವಾಸಿ ನಾಗೇಶ್ವರಿ ಅವರು ಸೆಪ್ಟೆಂಬರ್ 13ರಂದು ಮನೆ ಎದುರು ಫೋನಿನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಸರಗಳ್ಳನೊಬ್ಬ ಬೈಕಿನಲ್ಲಿ ಬಂದು ನಾಗೇಶ್ವರಿ ಅವರ ಸರಕ್ಕೆ ಕೈ ಹಾಕಿದ್ದಾನೆ ಕೀಳಲು ಯತ್ನಿಸಿದ್ದಾನೆ.

Benglauru woman brought chopped finger of thief to police station

ನಾಗೇಶ್ವರಿ ಸಹ ಮಾಂಗಲ್ಯ ಸರವನ್ನು ಹಿಡಿದುಕೊಂಡು ತಮ್ಮತ್ತ ಎಳೆದುಕೊಂಡಿದ್ದಾರೆ. ನಾಗೇಶ್ವರಿ ಅವರ ಎಳೆದ ರಭಸಕ್ಕೆ ಕಳ್ಳನ ಬಲಗೈ ಕಿರುಬೆರಳು ತುಂಡಾಗಿ ಕೆಳಗೆ ಬಿದ್ದಿದೆ. ಆದರೆ ದುರಾದೃಷ್ಟವಶಾತ್ ಮಾಂಗಲ್ಯ ಸರ ಕಳ್ಳನ ಪಾಲಾಗಿದೆ.

ಕಾರಿನೊಳಗೆ ಕೂತಿದ್ದ ಶಿವಮೊಗ್ಗ ಮಾರ್ಕೆಟ್ ಗಿರಿಯನ್ನು ಕೊಂದ ಮುಸುಕುಧಾರಿಗಳುಕಾರಿನೊಳಗೆ ಕೂತಿದ್ದ ಶಿವಮೊಗ್ಗ ಮಾರ್ಕೆಟ್ ಗಿರಿಯನ್ನು ಕೊಂದ ಮುಸುಕುಧಾರಿಗಳು

ಅದೇ ಕಿರುಬೆರಳನ್ನು ಎಚ್‌ಎಎಲ್‌ ಪೊಲೀಸ್ ಠಾಣೆಗೆ ತಂದು ದಿಟ್ಟ ಮಹಿಳೆ ನಾಗೇಶ್ವರಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಲಗೈ ಬೆರಳು ಕಳೆದುಕೊಂಡಿರುವ ವ್ಯಕ್ತಿಯ ಹುಡುವುದು ಕಷ್ಟವಾಗಲಾರದು.

English summary
Bengaluru woman brought chopped finger of a thief to police station. the thief try to snatch her chain woman Nagalakshmi try harder to pull back the chain. Nagalakshmi pulled harder that thief's finger get cut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X