ರಸ್ತೆ ನಿಯಮ ಉಲ್ಲಂಘಿಸಿದವನ ಫೋಟೋ ತೆಗೆದಿದ್ದು ತಪ್ಪಾ?

Written By:
Subscribe to Oneindia Kannada

ಬೆಂಗಳೂರು, ಮೇ.31: ಬೆಂಗಳೂರನಲ್ಲಿ ಟ್ರಾಫಿಕ್ ನಿಯಮಗಳನ್ನು ಮುರಿಯುವುದು ಹೊಸದೇನೂ ಅಲ್ಲ. ಸಿಗ್ನಲ್ ಜಂಪ್ ಮಾಡುವುದು, ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುವುದು ಎಲ್ಲ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ನಿಮಗೆ ಏಟು ಸಹ ಬೀಳಲಿದೆ!

ಹೌದು ಅಂಥದ್ದೊಂದು ಘಟನೆಗೆ ಕೋರಮಂಗಲ ಸೋಮವಾರ ಸಾಕ್ಷಿಯಾಗಿದೆ. ಪಾದಚಾರಿ ದಾರಿಯಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಫೋಟೋ ತೆಗೆಯಲು ಮುಂದಾದ ಇಂಜಿನಿಯರ್ ಅಂಕಿತ್ ಚತುರ್ವೇದಿ ಎಂಬುವರ ಮೇಲೆ ಕಾನೂನು ಮುರಿದ ಬೈಕ್ ಸವಾರ ಹಲ್ಲೆ ಮಾಡಿದ್ದಾನೆ.[ಮಳೆಗೆ ಜಗ್ಗದ ಮಂಗಳೂರು ಟ್ರಾಫಿಕ್ ಪೊಲೀಸ್‌ ಬೋಪಯ್ಯ]

bengaluru

ದೃಶ್ಯಗಳನ್ನು ಚಿತ್ರಿಕರಣ ಮಾಡಿಕೊಂಡಿರುವ ಅಂಕಿತ್ ಚತುರ್ವೇದಿ ತಮ್ಮ ಫೆಸ್ ಬುಕ್ ಪೇಜ್ ನಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ಬರೆದುಕೊಂಡಿದ್ದಾರೆ.

ವಿಪ್ರೋ ಆಫೀಸ್ ಸರ್ಕಲ್ ಬಳಿಯ ಫ್ಲಿಪ್ ಕಾರ್ಟ್ ಕಚೇರಿ ಹತ್ತಿರ ಬೆಳಗ್ಗೆ 10.40ಕ್ಕೆ ಘಟನೆ ನಡೆದಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯ ಚಿತ್ರ ತೆಗೆಯಲು ಅಂಕಿತ್ ಮುಂದಾಗಿದ್ದಾರೆ. ಆದರೆ ಕೆಳಕ್ಕೆ ಇಳಿದು ಬಂದ ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿ ಅಂಕಿತ್ ಮೇಲೆ ತನ್ನ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾನೆ.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

bengaluru

ಹಲ್ಲೆಕೋರ ಅಂಕಿತ್ ಮೊಬೈಲ್ ಧ್ವಂಸ ಮಾಡಲು ಪ್ರಯತ್ನ ಪಟ್ಟಿದ್ದಾನೆ. ಮೊಬೈಲ್ ಸಹ ಡ್ಯಾಮೇಜ್ ಆಗಿದೆ. ನಂತರ ಅಂಕಿತ್ ಕೋರಮಂಗಲ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅಂಕಿತ್ ಹಾಕಿರುವ ಫೆಸ್ ಬುಕ್ ಪೋಸ್ಟ್ 650 ಶೇರ್ ಕಂಡಿದ್ದು ವೈರಲ್ ಆಗುತ್ತಿದೆ.[ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು: ಶಾರ್ಟ್‌ಕಟ್‌ಗೆ ಮುಕ್ತಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Stopping a man from riding on footpath in Koramangala on Monday morning proved costly for a youngster. Software engineer Ankit Chowdhary, was slapped many times by the aggressive traffic offender for trying to videograph the offence. Ankit's Facebook post with a video of the episode became viral. The incident happened at Wipro Park Circle near Flipkart office.
Please Wait while comments are loading...