ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಯಕ್ಷ ರಸದೌತಣ ತಪ್ಪಿಸಿಕೊಳ್ಳಲೇಬೇಡಿ

By Madhusoodhan
|
Google Oneindia Kannada News

ಬೆಂಗಳೂರು, ಜೂನ್ 1: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ . ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಊರಿನಲ್ಲಿ ದಿನನಿತ್ಯ ಸುಮಾರು 30ಕ್ಕೂ ಹೆಚ್ಚು ಮೇಳಗಳು ಕಲಾ ತಿರುಗಾಟ ಮಾಡುತ್ತಿರುತ್ತವೆ.

ಮಳೆಗಾಲದ ಶುರು ಆಗುತ್ತಿದಂತೆ ಅವುಗಳಲ್ಲಿ ಆಯ್ದ ಕೆಲವರು ತಮ್ಮಲ್ಲಿಯೆ ಒಂದು ತಂಡಕಟ್ಟಿಕೊಂಡು ಮುಂಬೈ, ಬೆಂಗಳೂರು, ಹೈದರಾಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ ,ಈ ಮೂಲಕ ತಮ್ಮ ಮಳೆಗಾಲದ ಜೀವನವನ್ನು ಸರಿದೂಗಿಸಿಕೊಳ್ಳುತ್ತಾರೆ.[ಸಿಂಗಪುರದಲ್ಲಿ ಕೃಷ್ಣ ಸಂಧಾನ ಮತ್ತು ಗದಾಯುದ್ಧ]

yakshagana

ಜೂನ್ ಪ್ರಾರಂಭವಾಗುತ್ತಿದ್ದಂತೆ ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಒಂದು ಸಂಭ್ರಮ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಯಕ್ಷಗಾನ ಆಗುತ್ತಲೆ ಇರುತ್ತದೆ. 'ಆತ ಎಲ್ಲಿ ಸಿಗದೆ ಇದ್ರೂ ಕಲಾಕ್ಷೇತ್ರದಲ್ಲಿ ಖಂಡಿತ ಸಿಗುತ್ತಾನೆ' ಕಲಾಪ್ರೇಮಿಯ ಕುರಿತು ನಮ್ಮಲ್ಲಿ ಇಂತಹದೊಂದು ಮಾತಿದೆ.

ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ . ಇಲ್ಲಿ ಪೌರಾಣಿಕ ,ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು ಜನರು ಇಷ್ಟಪಡುತ್ತಾರೆ.[ಯಕ್ಷಗಾನದ 'ಕೃಷ್ಣ' ಕಣ್ಣಿಮನೆ ಗಣಪತಿ ಭಟ್ ಕಣ್ಮರೆ]

ಈ ಬಾರಿ ಜೂನ್ ತಿಂಗಳ ಮೊದಲಿನಿಂದಲೇ ಚಂಡೆಯ ಸದ್ದು ಪ್ರಾರಂಭವಾಗಿದೆ. ಇದೇ ಶನಿವಾರ ಜೂನ್ 4 ರಂದು ಅದ್ದೂರಿ ತ್ರಿವಳಿ ಪೌರಾಣಿಕ "ಯಕ್ಷ ಸಂಕ್ರಾಂತಿ"ಯೊಂದಿಗೆ ಚಾಲನೆಯೂ ದೊರೆಯಲಿದೆ.

ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ "ಕೃಷ್ಣ ಸಂಧಾನ - ಕೃಷ್ಣ ಪಾರಿಜಾತ - ದ್ರೌಪದಿ ಪ್ರತಾಪ" ಆಖ್ಯಾನಗಳು ಯಕ್ಷ ಪ್ರೇಮಿಗಳನ್ನು ರಂಜಿಸಲಿವೆ.[ಯಕ್ಷಗಾನಕ್ಕೆ ರಾಜಮೌಳಿ ಬಾಹುಬಲಿ, ಸರಿಯೋ? ತಪ್ಪೋ?]

ಕೊಳಗಿ ಕೇಶವ ಹೆಗಡೆ ,ವಿದ್ವಾನ್ ಗಣಪತಿ ಭಟ್ , ಸುರೇಶ ಶೆಟ್ಟಿ ,ಗಣೇಶ ಹೆಬ್ರಿ ಭಾಗವತಿಕೆ ರಸಧಾರೆ ಹರಿಸಲಿದೆ. ಬೆಂಗಳೂರಿಗೆ ನವಪರಿಚಯ ಕೃಷ್ಣ ದಾಸ ಮರವಂತೆ ಶ್ರೀ ಮಾರಣಕಟ್ಟೆ ಮೇಳ , ಪ್ರಭು, ಗಾಂವ್ಕರ್, ಎನ್ ಜಿ ಹೆಗಡೆ , ರಾಘವೇಂದ್ರ ಭಟ್ , ಕೃಷ್ಣಯಾಜಿ ಬಳ್ಕೂರು, ಜಲವಳ್ಳಿ ವಿಧ್ಯಾಧರ್ ರಾವ್ ,ಐರಬೈಲ್ ಆನಂದ ಶೆಟ್ಟಿ , ಸುಬ್ರಮಣ್ಯ ಹೆಗಡೆ ಯಲಗುಪ್ಪ, ಸುಬ್ರಮಣ್ಯ ಚಿಟ್ಟಾಣಿ, ಕೋಟ ಸುರೇಶ ಬಂಗೇರಾ, ಪ್ರದೀಪ್ ಸಾಮಗ, ಹಳ್ಳಾಡಿ ಜಯರಾಮ ಶೆಟ್ಟಿ , ಕಾಸರಕೋಡ್, ಉಪ್ಪುಂದ ನಾಗೇಂದ್ರ ರಾವ್, ಮಾಧವ ನಾಗುರ್, ಕಾರ್ತಿಕ ಚಿಟ್ಟಾಣಿ, ಹೆನ್ನಾಬೈಲ್, ಬೆರೊಳ್ಳಿ, ಕುಳಿಮನೆ, ಹಾರೆಕೊಪ್ಪ, ಉಪ್ಪೂರ್, ಯಡಮೊಗೆ, ಇನ್ನಿತರು ರಂಗದಲ್ಲಿ ರಂಜಿಸಲಿದ್ದಾರೆ.

ಯಕ್ಷ ರಸ ಸವಿಯಲು ಪ್ರವೇಶ ದರ ಇರುತ್ತದೆ. ಹೆಚ್ಚಿನ ಮಾಹಿತಿಗೆ ನಾಗರಾಜ ಶೆಟ್ಟಿ ನೈಕಂಬ್ಳಿ 9741474255. ಸಂಪರ್ಕಿಸಬಹುದು. ಶನಿವಾರ ಕಲಾಕ್ಷೇತ್ರಕ್ಕೆ ಆಗಮಿಸುವ ಯಕ್ಷಾಭಿಮಾನಿಗಳಿಗೆ ಬಿಲಿಂಡರ್ ಚಿತ್ರ ತಂಡವನ್ನು ಭೇಟಿಯಾಗುವ ಅವಿಸ್ಮರಣೀಯ ಅವಕಾಶ ಸಹ ಇದೆ. ಶನಿವಾರದ ಆಟಕ್ಕೆ ಮುದ್ದಾಂ ಬನ್ನಿ..!

English summary
Bengaluru: Bengaluru Ravindra Kalakshetra will witness series of Yakshagana events on June 4. Don't miss this entertaining event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X