ಜನವರಿಯಿಂದ ಮಹಿಳೆಯರಿಗಾಗಿಯೇ ಪಿಂಕ್ ಆಟೋ!

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್‌ 09 : ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ ಪಿಂಕ್ ಆಟೋ ಜನವರಿಯಿಂದ ಪ್ರಾರಂಭವಾಗಲಿದೆ.

ಬೆಂಗಳೂರಿನ ಪ್ರತಿ ಠಾಣೆಗೂ ಪಿಂಕ್ ಹೊಯ್ಸಳ ವಾಹನ: ಸಿದ್ದರಾಮಯ್ಯ

ಈ ಮೊದಲು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪಿಂಕ್ ಹೊಯ್ಸಳ ವಾಹನಗಳನ್ನು ಪ್ರಾರಂಭಿಸಿತ್ತು. ಇದೀಗ ಪಿಂಕ್ ಆಟೋವನ್ನು ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ಸಿದ್ಧಡಿಸಲಾಗಿದೆ. ಮಹಿಳೆ ಹಾಗೂ ಪುರುಷರು ಯಾರು ಬೇಕಾದರೂ ಆಟೋ ಚಲಾಯಿಸಬಹುದಾಗಿದೆ.

Bengaluru women can hire Pink autos from new year!

ಸುರಕ್ಷತೆ ಜತೆಗೆ ಮಹಿಳಾ ಸಬಲೀಕರಣದ ಗುರಿ ಇಟ್ಟುಕೊಂಡು ಪಿಂಕ್ ಆಟೊವನ್ನು ಆರಂಭಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾಮಾಜಿಕ ಸುಧಾರಣೆ ಯೋಜನೆ ಅಡಿಯಲ್ಲಿ300ರಿಂದ 400 ಆಟೋಗಳನ್ನು ವಿತರಸಲಾಗುತ್ತದೆ. ಅದರಲ್ಲಿ. ಶೇ 20ರಷ್ಟು ಆಟೋಗಳನ್ನು ಪಿಂಕ್ ಆಟೋಗಳನ್ನಾಗಿ ಪರಿವರ್ತಿಸಲಾಗುವುದು.

ಈಗ ನಗರದಲ್ಲಿ ಚಾಲನೆಯಲ್ಲಿರುವ ಆಟೋದ ರೀತಿಯಲ್ಲಿ ಪಿಂಕ್ ಆಟೋ ಕೂಡ ವಿನ್ಯಾಸ ಹೊಂದಿದ್ದು, ಸಾಮಾನ್ಯ ಆಟೋ ಹಾಗೂ ಪಿಂಕ್ ಆಟೋ ವ್ಯತ್ಯಾಸ ತಿಳಿಸಲು ಅದಕ್ಕೆ ಗುಲಾಬಿ ಬಣ್ಣ ಬಳಿಯಲಾಗುವುದು. ಬ್ರಿಗೇಡ್ ರಸ್ತೆಯ ಪಾರ್ಕಿಂಗ್ ನಲ್ಲಿ ಮಹಿಳೆಯರಿಗೆ ಮೀಸಲಾತಿ ದೊರೆತ ಒಂದು ವಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೂ.25 ಸಾವಿರದವೆರೆಗೆ ಸಬ್ಸಿಡಿ ಒದಗಿಸಲಾಗುತ್ತಿದೆ.

ಬಿಬಿಎಂಪಿ ಇತರೆ ಕಂಪನಿಗಳಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಸಹಭಾಗಿತ್ವ ನೀಡುವಂತೆ ಮನವಿ ಮಾಡಿದೆ. ಪಿಂಕ್ ಆಟೋದಲ್ಲಿ ಸಿಸಿಟಿವಿ ಹಾಗೂ ಜಿಪಿಆರ್ಎಸ್ ಅಳವಡಿಸಲಾಗಿರುತ್ತದೆ. ಈಗಾಗಲೇ ಸೂರತ್ನಲ್ಲಿ ಪಿಂಕ್ ಆಟೋ ಚಾಲನೆ ಪ್ರಾರಂಭವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From January onwoards, Pink auto rickshaws will be seen on the roads of Bengaluru, and they will be reserved for women and children only. Pink autos are already introduced in Sura, Gujarat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ