• search

ಬೆಸ್ಕಾಂನಿಂದ 317 ರುಪಾಯಿ ವಾಪಸ್ ಪಡೆಯಲು 16 ಸಾವಿರ ಕಳ್ಕೊಂಡ ಮಹಿಳೆ

By Srinivasa Mata
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಜುಲೈ 26 : ನಲವತ್ತು ವರ್ಷದ ಮಹಿಳೆಯೊಬ್ಬರು ಬೆಸ್ಕಾಂಗೆ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಹಿಂದಿನ ತಿಂಗಳ ಬಿಲ್ ಗೆ ಫೋನ್ ಅಪ್ಲಿಕೇಷನ್ ಮೂಲಕ 317 ರುಪಾಯಿ ಕಟ್ಟಿದ್ದರು. ಅದನ್ನು ವಾಪಸ್ ಪಡೆಯುವ ಪ್ರಯತ್ನದಲ್ಲಿ 16 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ.

    ಆಕೆ ಹೆಸರು ವಿದಿತಾ ಚೌಧರಿ. ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದ ನಿವಾಸಿ. ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಇಪ್ಪತ್ತನೇ ತಾರೀಕು 'ಪೇ ಯು ಮನಿ' ಮೊಬೈಲ್ ಅಪ್ಲಿಕೇಷನ್ ಬಳಸಿ ಪಾವತಿಸಲು ಪ್ರಯತ್ನಿಸಿದ್ದಾರೆ. ಆದರೆ ಅದರಲ್ಲಿ ತಪ್ಪಾಗಿ ಜೂನ್ ತಿಂಗಳ ಬಿಲ್ ಗೆ 317 ರುಪಾಯಿ ಅಂತ ಪಾವತಿ ಆಗಿದೆ.

    Cyber crime

    ವಿದಿತಾ ಅವರು ತಕ್ಷಣವೇ ಬೆಸ್ಕಾಂಗೆ ಆನ್ ಲೈನ್ ದೂರು ದಾಖಲಿಸಿ, ಹೆಚ್ಚುವರಿಯಾಗಿ ಪಾವತಿಸಿದ ಹಣ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. consumercomplaintsboardfast@gmail.com ಅವರಿಗೊಂದು ಇಮೇಲ್ ಬಂದಿದೆ. ಅದಾಗಿ ಎರಡು ನಿಮಿಷಕ್ಕೆ ತಾವು ಬೆಸ್ಕಾಂನಿದ ಕರೆ ಮಾಡುತ್ತಿದ್ದೇವೆ ಅಂತ ಹೇಳಿಕೊಂಡು, ವಿದಿತಾ ಅವರ ಐಸಿಐಸಿಐ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಿದ್ದಾರೆ.

    ಸೈಬರ್ ಕ್ರೈಂನಲ್ಲಿ ಬೆಂಗಳೂರು ದೇಶಕ್ಕೇ ನಂಬರ್ ಒನ್

    ಆ ತಕ್ಷಣವೇ ಅವರ ಖಾತೆಯಿಂದ ಹದಿನಾರು ಸಾವಿರ ರುಪಾಯಿ ವರ್ಗಾವಣೆ ಆಗಿದೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    A 40- year old woman, who paid Rs 317 by mistake to BESCOM, lost 16,000 to tech savvy criminals while trying to get back.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more