ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲಿಂಗಿಯನ್ನು ಕೆಲಸದಿಂದ ಕಿತ್ತುಹಾಕಿದ ಬೆಂಗಳೂರು ಕಂಪನಿ

ಸಲಿಂಗಿಯಾಗಿದ್ದ ಯುವತಿಯನ್ನು ಕೆಲಸದಿಂದ ಕಿತ್ತುಹಾಕಿದ ಕಂಪನಿ. ಬೆಂಗಳೂರು ಯುವತಿಯರ ಸಲಿಂಗ ಸಂಬಂಧದ ಬಗ್ಗೆ ವರದಿ ಮಾಡಿದ್ದ ಟಿವಿ ವಾಹಿನಿ. ವರದಿ ನೋಡಿ, ಯುವತಿಯನ್ನು ಕೆಲಸದಿಂದ ಕಿತ್ತು ಹಾಕಿದ ಕಂಪನಿ.

|
Google Oneindia Kannada News

ಬೆಂಗಳೂರು, ಜುಲೈ 7: ಎರಡು ದಿನಗಳ ಹಿಂದಷ್ಟೇ, ಇಬ್ಬರು ಯುವತಿಯರು ಪರಸ್ಪರ ಸಲಿಂಗಿಗಾಳಾಗಿದ್ದು ಮುದುವೆಯಾಗಲು ಸಿದ್ಧವಾಗಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಆ ಇಬ್ಬರಲ್ಲಿ ಒಬ್ಬ ಯುವತಿಯನ್ನು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯು ಕೆಲಸದಿಂದ ವಜಾಗೊಳಿಸಿದೆ.

ಈ ಇಬ್ಬರೂ ಯುವತಿಯರು ಕ್ರಮವಾಗಿ 21 ಹಾಗೂ 25 ವರ್ಷದವರು. ಇವರಿಬ್ಬರ ಸಂಬಂಧವು ಇದೀಗ ವಿವಾಹದ ಹಂತಕ್ಕೆ ಬಂದಿರುವುದಾಗಿ ಕನ್ನಡದ ವಾಹಿನಿಯೊಂದು ಎರಡು ದಿನಗಳ ಹಿಂದಷ್ಟೇ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು.

Bengaluru woman fired from the job on the basis of the reports about her lesbian wedding

ವಾಹಿನಿಯಲ್ಲಿ ಯುವತಿಯರ ಮುಖವನ್ನು ಮಬ್ಬುಗೊಳಿಸಿ ವರದಿ ಮಾಡಲಾಗಿದ್ದರೂ, 25 ವರ್ಷದ ಯುವತಿಯನ್ನು ಗುರುತಿಸುವಲ್ಲಿ ಆಕೆಗೆ ಕೆಲಸ ಕೊಟ್ಟಿದ್ದ ಸಂಸ್ಥೆಯು ಜೊಗೆಫೋ ಡಾಟ್ ಕಾಂ ಸಂಸ್ಥೆಯು ಯಶಸ್ವಿಯಾಗಿದ್ದು, ಸಲಿಂಗಿ ವಿವಾಹಕ್ಕೆ ಸಿದ್ಧರಾಗಿರುವ ಹಿನ್ನೆಲೆಯಲ್ಲಿ, ಆ ಯುವತಿಯನ್ನು ಕೆಲಸದಿಂದ ಕಿತ್ತುಹಾಕಿದೆ ಎಂದು ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

English summary
A day after sections of the media in Karnataka did a story on two young women from Bengaluru who were in a lesbian relationship, one of the women was sacked by the company she was employed in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X