ಅಬುಧಾಬಿಯಲ್ಲಿ ಜೀತದ ಚಿತೆಯಿಂದ ಪಾರಾದ ಬೆಂಗಳೂರು ಮಹಿಳೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 9: ಅಬುಧಾಬಿಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ಬೆಂಗಳೂರಿನ ಸಮೀರಾ ಎಂಬ ಮಹಿಳೆಯೊಬ್ಬರು ಇದೀಗ ಬಂಧಮುಕ್ತವಾಗಿರುವುದಾಗಿ ಖ್ಯಾತ ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

ಹೆಚ್ಚು ಸಂಪಾದಿಸುವ ಆಸೆಯಿಂದ ಒಬ್ಬ ದೊಡ್ಡ ಸಾಹುಕಾರನ ಮನೆಯಲ್ಲಿ ಕೆಲಸಕ್ಕೆ ನೇಮಿಸಿತ್ತು. ಮೊದಮೊದಲು ಎಲ್ಲವೂ ಸುಗಮವಾದಂತೆ ತೋರಿದರೂ, ಆನಂತರದ ದಿನಗಳಲ್ಲಿ ಮನೆಗೆಲಸ ಹೆಚ್ಚಾಗಿ ಹೋಗಿ, ಆಕೆ ಜೀತದಾಳಿನಂತೆ ಕೆಲಸ ಮಾಡಬೇಕಾಗಿತ್ತು.

ನರಕದಿಂದ ತಪ್ಪಿಸಿಕೊಂಡು ತವರಿಗೆ ಬಂದ ತಂಗಿ

ಇದೆಲ್ಲವನ್ನೂ ಅವರು, ತನ್ನೊಂದಿಗೆ ನಿರಂತರ ಸಂಪರ್ಕದಲ್ಲಿರುವ ಭಾರತದಲ್ಲಿನ ತನ್ನ ಸ್ನೇಹಿತೆಗೆ ತಿಳಿಸಿದ್ದು, ಅವರ ಸ್ನೇಹಿತೆ ಅದನ್ನು ದರ್ಶನಾ ಎಂಬ ವಕೀಲರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ದರ್ಶನಾ ಅವರು, ಸಮೀರಾ ಅವರನ್ನು ಸಂಪರ್ಕಿಸಿದ್ದು, ಅಬುಧಾಬಿಯಲ್ಲಿರುವ ಆಲ್ಟರ್ನೇಟಿವ್ ಲಾ ಫಾರ್ಮ್ ಗೆ ತಿಳಿಸಲು ಸೂಚಿಸಿದ್ದರು.

ಆದರೆ, ತನ್ನ ಮಾಲೀಕನ ಮನೆ ಬಿಟ್ಟು ಅಬುಧಾಬಿಯಲ್ಲಿ ಮತ್ತೇನೂ ಗೊತ್ತಿಲ್ಲದ ಈಕೆ ಆ ಮನೆಯಿಂದ ಹೊರಹೋಗಿ ಕಾನೂನಿನ ಮೊರೆ ಪಡೆಯಲು ಯತ್ನಿಸಿದಾಗ ಆಕೆಯನ್ನು ತನ್ನಲ್ಲಿಗೆ ಕಳುಹಿಸಿದ್ದ ಏಜೆನ್ಸಿಗೆ ಮನೆ ಮಾಲೀಕ ದೂರು ನೀಡಿದ.

ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ

ಮುಂದೇನಾಯ್ತು, ಸಮೀರಾ ಸೇಫ್ ಆಗಿ ಭಾರತಕ್ಕೆ ಬಂದರಾ ಎಂಬಿತ್ಯಾದಿ ಮಾಹಿತಿಗಳಿಗೆ ಮುಂದೆ ಓದಿ.

ಆಕೆಯನ್ನು ಕಿಡ್ನಾಪ್ ಮಾಡಿದರು!

ಆಕೆಯನ್ನು ಕಿಡ್ನಾಪ್ ಮಾಡಿದರು!

ಏಜೆನ್ಸಿಯ ಕೆಲ ಗೂಂಡಾಗಳು ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದ ಸಮೀರಾಳನ್ನು ಪತ್ತೆ ಮಾಡಿ, ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಅಬುಧಾಬಿಯ ಕಟ್ಟಡವೊಂದರಲ್ಲಿ ಕೂಡಿಹಾಕಿದ್ದರು.

ವಿದೇಶಾಂಗ ಇಲಾಖೆಗೆ ವಿಷಯ ಹಸ್ತಾಂತರ

ವಿದೇಶಾಂಗ ಇಲಾಖೆಗೆ ವಿಷಯ ಹಸ್ತಾಂತರ

ಆಕೆ ನಾಪತ್ತೆಯಾದ ವಿಚಾರವನ್ನು ಅಬುಧಾಬಿಯಲ್ಲಿರುವ 'ಇಂಡಿಯನ್ ವರ್ಕರ್ಸ್ ರಿಸೋರ್ಸ್ ಸೆಂಟರ್ (ಐಡಬ್ಲ್ಯೂಆರ್ ಸಿ)' ಗೆ ತಿಳಿಸಿದರು. ಐಡಬ್ಲ್ಯೂಆರ್ ಸಿಯು ಅಬುಧಾಬಿಯಲ್ಲಿರುವ ಭಾರತದ ಧೂತಾವಾಸವನ್ನು ಸಂಪರ್ಕಿಸಿತು. ಆ ಮೂಲಕ ಭಾರತದ ವಿದೇಶಾಂಗ ಇಲಾಖೆಗೆ ವಿಷಯ ಮುಟ್ಟಿಸಲಾಯಿತು.

ಕಟ್ಟಡ ಪತ್ತೆ ಹಚ್ಚಿದ ಅಧಿಕಾರಿಗಳು

ಕಟ್ಟಡ ಪತ್ತೆ ಹಚ್ಚಿದ ಅಧಿಕಾರಿಗಳು

ಕೊನೆಗೆ, ವಿದೇಶಾಂಗ ಇಲಾಖೆಯ ಸೂಚನೆಯ ಮೇರೆಗೆ ಕಾರ್ಯೋನ್ಮುಖರಾದ ಧೂತಾವಾಸ ಕಚೇರಿ ಬೇಗನೇ ಅಲ್ಲಿನ ಸಮೀರಾಳನ್ನು ಕೂಡಿಹಾಕಲಾಗಿದ್ದ ಕಟ್ಟಡವನ್ನು ಪತ್ತೆ ಮಾಡಿದರು.

ಆಗಸ್ಟ್ ನಲ್ಲೇ ಸಿಕ್ಕಿತು ಸ್ವತಂತ್ರ!

ಆಗಸ್ಟ್ ನಲ್ಲೇ ಸಿಕ್ಕಿತು ಸ್ವತಂತ್ರ!

ಆನಂತರ, ಅಬುಧಾಬಿಯಲ್ಲಿರುವ ಬಾಲಚಂದರ್, ಡಾನ್ ಬಾಸ್ಕೋ ಎಂಬಿಬ್ಬರ ಸ್ವಯಂ ಸೇವಕರ ಸತತ ಪ್ರಯತ್ನದಿಂದಾಗಿ ಆಕೆಯನ್ನು ಪತ್ತೆ ಮಾಡಿದ್ದಲ್ಲದೆ, ಸ್ಥಳೀಯ ಪೊಲೀಸರ ನೆರವು ಪಡೆದು ಆಕೆಯನ್ನು ಬಚಾವ್ ಮಾಡಲಾಯಿತು. ಇವೆಲ್ಲರ ಅವಿರತ ಪ್ರಯತ್ನದಿಂದಾಗಿ, ಇದೇ ತಿಂಗಳ ಎರಡನೇ ವಾರದಲ್ಲಿ (ಆಗಸ್ಟ್ 7) ಸಮೀರಾ ಸ್ವತಂತ್ರಳಾದಳೆಂದು ವರದಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Woman from Bengaluru who was trapped in Abudhabi, has been rescued after many obstacles. Indian Embassy and Indian Workers Resource Centre helped this rescue operations.
Please Wait while comments are loading...