ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು 'ಜಯಾ' ಮಗಳು, ಡಿಎನ್ ಎ ಪರೀಕ್ಷೆ ಮಾಡಿ ಎಂದ ಬೆಂಗಳೂರಿನ ಅಮೃತಾ

|
Google Oneindia Kannada News

ಬೆಂಗಳೂರು, ನವೆಂಬರ್ 27: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಾರಸುದಾರಿಕೆಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆಯೊಂದು ಉದ್ಭವಿಸಿದೆ. ಬೆಂಗಳೂರಿನಲ್ಲಿರುವ ಅಮೃತಾ ಎಂಬುವವರು ತಾವು ಜಯಾರ ಉತ್ತರಾಧಿಕಾರಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಜಯಾ ಸಾವು: ತನಿಖಾ ಆಯೋಗ ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂಜಯಾ ಸಾವು: ತನಿಖಾ ಆಯೋಗ ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

ಈ ವಿಚಾರವಾಗಿ ಡಿಎನ್ ಎ ಪರೀಕ್ಷೆಗೆ ಒಳಪಡಲು ಸಹ ತಾನು ಸಿದ್ಧ ಎಂದು ಕೂಡ ಹೇಳಿಕೊಂಡಿದ್ದಾರೆ. ಇದರ ಜತೆಗೆ ಜಯಲಲಿತಾರ ದೇಹದ ಅಂತ್ಯಸಂಸ್ಕಾರ ಹಿಂದೂ ಅಯ್ಯಂಗಾರ್ ವಿಧಿ ವಿಧಾನದ ಪ್ರಕಾರ ನಡೆಯಬೇಕು ಎಂದು ಕೂಡ ಮನವಿ ಮಾಡಿಕೊಂಡಿದ್ದಾರೆ.

Bengaluru woman claims to be Jayalalithaa's daughter

ಆದರೆ, ಅಮೃತಾರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜಯಲಲಿತಾರ ಆಸ್ತಿ ವಿಚಾರವಾಗಿ ಅವರ ಸೋದರರ ಮಕ್ಕಳಾದ ದೀಪಕ್ ಹಾಗೂ ದೀಪಾ, ಅದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದರು. ಪೋಯಸ್ ಗಾರ್ಡನ್ ಬಂಗಲೆಯ ಹಕ್ಕು ತಮ್ಮದೇ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಇದೀಗ ಅಮೃತಾ ತಾವು ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ.

ವೈದ್ಯಕೀಯ ವರದಿ: ಆಸ್ಪತ್ರೆಗೆ ಕರೆ ತಂದಾಗ ಜಯಾಗೆ ಪ್ರಜ್ಞೆಯೇ ಇರಲಿಲ್ಲವೈದ್ಯಕೀಯ ವರದಿ: ಆಸ್ಪತ್ರೆಗೆ ಕರೆ ತಂದಾಗ ಜಯಾಗೆ ಪ್ರಜ್ಞೆಯೇ ಇರಲಿಲ್ಲ

ಅಮೃತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅವರು ಮುಂದೆ ಏನು ಮಾಡಬಹುದು ಎಂದು ಕಾದುನೋಡಬೇಕಿದೆ.

English summary
In a new twist to former Tamil Nadu Chief Minister J Jayalalithaa's legacy war, a woman from Bengaluru has turned up- claiming to be Amma's daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X