ಮಹಿಳೆ ಮುತ್ತಿಡುತ್ತಿದ್ದಳೋ ಗಾಳಿ ಊದುತ್ತಿದ್ದಳೋ ಅಪಘಾತವಂತೂ ಆಗಿದೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 20: ಬೇಕಾಬಿಟ್ಟಿ ಕಾರು ಚಲಾಯಿಸಿದ ಕಾರಣಕ್ಕೆ ಮೂವತ್ತು ವರ್ಷದ ಮಹಿಳೆ ವಿರುದ್ಧ ಬೆಂಗಳೂರು ಪೊಲೀಸರು ದೂರು ದಾಖಲಿಸಿದ್ದಾರೆ. ಹೇಗೆಂದರೆ ಹಾಗೆ ಚಲಾಯಿಸಿದ್ದರಿಂದ ಆಕೆಯ ಕಾರು ಕ್ಯಾಬ್ ಹಾಗೂ ಸ್ಕೂಟರ್ ವೊಂದಕ್ಕೆ ಡಿಕ್ಕಿ ಹೊಡೆದಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಆ ಮಹಿಳೆ, ಹೋಂಡಾ ಸಿಟಿ ಕಾರು ಚಲಾಯಿಸುತ್ತಿದ್ದಳು. ಅದು ಕ್ಯಾಬ್ ಗೆ ಆನಂತರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಕ್ಯಾಬ್ ಚಾಲಕ ಹೇಳುವ ಪ್ರಕಾರ: ಆ ಮಹಿಳೆ ಜತೆಗಿದ್ದ ಮತ್ತೊಬ್ಬರಿಗೆ ಮುತ್ತಿಡುತ್ತಿದ್ದಳು. ಅಪಘಾತದ ನಂತರ ಕಾರಿನಿಂದ ಇಳಿದುಬರುವುದಕ್ಕೆ ಆಕೆ ನಿರಾಕರಿಸಿದ್ದಾಳೆ.[ಅಪಘಾತ ಪ್ರಕರಣ: ಶ್ರೀಲಂಕಾದ ಕ್ರಿಕೆಟರ್ ಗೆ ಜಾಮೀನು ಮಂಜೂರು]

Bengaluru Woman Allegedly Kissing Another Woman, car hits cab

ಕ್ಯಾಬ್ ಚಾಲಕ ಶೇಖರ್ ರಾಮಚಂದ್ರ ಅವರನ್ನೇ ಮಹಿಳೆ ಬೈದಿದ್ದಾಳೆ. ತುಂಬ ನಿಧನವಾಗಿ ಕಾರು ಓಡಿಸ್ತಿದ್ದೆ ಎಂದು ದಬಾಯಿಸಿದ್ದಾಳೆ. ಇನ್ನು ಸ್ಕೂಟರ್ ಚಾಲಕ ಫರ್ಹಾನ್ ಅಹ್ಮದ್ ಹೇಳುವಂತೆ, ಆಕೆ ಮತ್ತೊಬ್ಬ ಮಹಿಳೆಗೆ ಮುತ್ತಿಡುತ್ತಿದ್ದಳು. ಸ್ಕೂಟರ್ ಗೆ ಡಿಕ್ಕಿ ಹೊಡೆದ ಮೇಲೆ ಕಾರನ್ನು ನಿಲ್ಲಿಸದೆ, ಕ್ಷಮೆಯನ್ನೂ ಕೇಳದೆ ಹೋದಳು ಎಂದಿದ್ದಾರೆ. ಇಬ್ಬರೂ ಕಾರನ್ನು ಬೆನ್ನಟ್ಟಿ ಹೋಗಿದ್ದಾರೆ. ಶೇಖರ್ ದೂರು ದಾಖಲಿಸಿದ್ದಾರೆ.[ಪತಿ ಕಳೆದುಕೊಂಡ ಮಹಿಳೆಗೆ ಮಗಳ ಸಾವಿನ ಆಘಾತ]

"ನಾನು ಆಕೆ ಕಣ್ಣಿನಲ್ಲಿದ್ದ ದೂಳು ಊದುತ್ತಿದ್ದೆ, ಮುತ್ತಿಡುತ್ತಿರಲಿಲ್ಲ" ಎಂದು ಅ ಮಹಿಳೆ ಪೊಲೀಸರಿಗೆ ತಿಳಿಸಿದ್ದು, ನನಗೆ ಇದರಿಂದ ಮುಜುಗರವಾಗಿದೆ ಎಂದೂ ಹೇಳಿದ್ದಾಳೆ. ಮಹಿಳೆ ಮದ್ಯಪಾನ ಮಾಡಿದ್ದಳೆ ಎಂದು ಪರೀಕ್ಷೆ ನಡೆಸಿದ್ದಾರೆ, ಇಲ್ಲ ಎಂದು ಖಾತ್ರಿ ಆಗಿದೆ. ಆದರೆ ಸದ್ಯಕ್ಕೆ ಮೂರೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
a 30-year-old woman in Bengaluru, case of rash and negligent driving was registered against her. Her car hit a cab and a scooter. The cab driver claimed she was kissing her fellow passenger.
Please Wait while comments are loading...