ಬೆಂಗಳೂರಲ್ಲಿ ವಿಶಿಷ್ಟ ಮದ್ವೆ, ವಧು ಸುರಭಿಯಿಂದ ವಿಡಿಯೋ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಯ ದೊಡ್ಡ ಮದುವೆ ಸಮಾರಂಭಕ್ಕೂ ಮುನ್ನ ಬೆಂಗಳೂರು ಒಂದು ವಿಶಿಷ್ಟ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಸುರಭಿ ಹಾಗೂ ಹೇಮಂತ್ ಅವರ ಮದುವೆ ವಿಶಿಷ್ಟ ಹಾಗೂ ವಿನೂತನವಾಗಿದ್ದು ಸಮಾಜಕ್ಕೆ ಮಾದರಿಯಾಗಲಿದೆ.

ಪಾಲಿಟಿಕಲ್ ಕೋಶೆಂಟ್ ಕನ್ಸಲ್ಟಂಟ್ಸ್ ಪ್ರೈ ಲಿಮಿಟೆಡ್ ನ ಸ್ಥಾಪಕಿ ಹಾಗೂ ಸಿಇಒ ಆಗಿರುವ ಸುರಭಿ ಎಚ್ ಆರ್ ಅವರು ಹೇಮಂತ್ ಎಂಬುವವರನ್ನು ನವೆಂಬರ್ 6ರಂದು ಮದುವೆಯಾಗುತ್ತಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ವೃತ್ತದ ಬಳಿ ಇರುವ ಸಂಸ್ಕೃತಿ ಸೇವಾ ಕನ್ವೇನ್ಶನ್ ಹಾಲ್ ನಲ್ಲಿ ನಡೆಯಲಿರುವ ಈ ಮದುವೆಗೆ ಸಾರ್ವಜನಿಕವಾಗಿ ಆಹ್ವಾನ ನೀಡಲಾಗಿದೆ.

ಸುರಭಿ ಅವರು ಫೇಸ್ ಬುಕ್ ಮೂಲಕ ಲೈವ್ ವಿಡಿಯೋ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಆದರೆ, ಇದರಲ್ಲಿ ವಿಶೇಷತೆ ಇದೆ. ಸುರಭಿ ಅವರು ತಮ್ಮ ಮದುವೆಗೆ 500ಕ್ಕೂ ಅಧಿಕ ನಿರ್ಗತಿಕ ಮಕ್ಕಳು, ಅನಾಥರು, ವಿಕಲ ಚೇತನರು, ವೃದ್ಧಾಶ್ರಮದ ನಿವಾಸಿಗಳನ್ನು ಮುಖ್ಯ ಅತಿಥಿಗಳಾಗಿ ಕರೆಸಿಕೊಳ್ಳುತ್ತಿದ್ದಾರೆ.

Bengaluru to witness Surabhi and Hemant unique wedding

ಈ ಮುಖ್ಯ ಅತಿಥಿಗಳಿಗೆ ನೆರವಾಗಲು ಬಯಸುವ ಸಾರ್ವಜನಿಕರು ಹಾಗೂ ಸ್ನೇಹಿತರು ಸ್ವಯಂ ಸೇವಕರಾಗಿ ತಮ್ಮ ಕೈಲಾದ ಸಹಾಯ ಮಾಡಿ, ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು. ಮದುವೆ, ಪಾರ್ಟಿ ಎಂದರೆ ಏನೂ ಎಂದು ತಿಳಿಯದ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಮುಖ್ಯ ಅತಿಥಿಗಳನ್ನು ಸತ್ಕರಿಸಬಹುದು. ಮೋದಿ ಅವರ ಆಶಯದಂತೆ ಅತಿಥಿ ಸತ್ಕಾರ, ಸೇವಾ ಮನೋಭಾವಕ್ಕೆ ಬೆಲೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುರಭಿ ಅವರು ಹೇಳಿಕೊಂಡಿದ್ದಾರೆ.

ಸುರಭಿ ಅವರ ಮದುವೆಯಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಲು ಅರ್ಜಿ ಇಲ್ಲಿದೆ ಕ್ಲಿಕ್ ಮಾಡಿ

ಸುರಭಿ ಅವರ ವಿಡಿಯೋ ಆಹ್ವಾನ ಇಲ್ಲಿದೆ:

ಹೆಚ್ಚಿನ ಮಾಹಿತಿಯನ್ನು ಸೇವಾಸೇಶಾದಿ ಇವೆಂಟ್ ಪುಟದಿಂದ ಪಡೆಯಬಹುದು.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Surabhi and Hemant are celebrating thier wedding in a unique way on the 6th of November in Bengaluru.A reception dinner for folks who never get invited to such parties. So, on thier wedding day they will have guests from different orphanages, disablity homes and old age homes.
Please Wait while comments are loading...