ಬೆಂಗಳೂರಲ್ಲಿ ಮಿಡಿದ ಮತ್ತೊಂದು ಜೀವಂತ ಹೃದಯ

Posted By: Staff
Subscribe to Oneindia Kannada

ಬೆಂಗಳೂರು, ಜೂನ್ 01 : ಉದ್ಯಾನ ನಗರಿ ಬೆಂಗಳೂರು ಬುಧವಾರ ಮತ್ತೊಂದು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಿದೆ. ಮೆದುಳು ನಿಷ್ಕ್ರೀಯಗೊಂಡಿದ್ದ ಆಟೋ ಚಾಲಕ ಹೃದಯ, ಕಣ್ಣು, ಕಿಡ್ನಿಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ವಿಕ್ಟೋರಿಯಾ ಆಸ್ಪತ್ರೆಯಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಜೀವಂತ ಹೃದಯ ಸಾಗಣೆ ಮಾಡಲು ಬೆಂಗಳೂರು ಸಂಚಾರಿ ಪೊಲೀಸ್ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು. 11 ನಿಮಿಷಗಳಲ್ಲಿ ಜೀವಂತ ಹೃದಯವನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಣೆ ಮಾಡಲಾಗಿದೆ. [8 ಜನರ ಬದುಕಿಗೆ ಆಶಾಕಿರಣವಾದ ಬೆಂಗಳೂರು ಯುವಕ]

abhishek

4 ದಿನಗಳ ಹಿಂದೆ ರಾಮನಗರದಲ್ಲಿ ನಡೆದಿದ್ದ ಅಪಘಾತದಲ್ಲಿ ಅಭಿಷೇಕ್ (23) ಗಂಭೀರವಾಗಿ ಗಾಯಗೊಂಡಿದ್ದರು. ಮೂಲತಃ ಮೈಸೂರಿನವರಾದ ಅಭಿಷೇಕ್ ಬೆಂಗಳೂರಿನ ಕಸ್ತೂರಿ ನಗರದಲ್ಲಿ ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದರು.[ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]

ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಅಭಿಷೇಕ್ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ಒಪ್ಪಿಗೆ ನೀಡಿದ್ದರು. ಇಂದು ಬೆಳಗ್ಗೆ ಶಸ್ತ್ರ ಚಿಕಿತ್ಸೆ ನಡೆಸಿ, ಸಂಚಾರಿ ಪೊಲೀಸರ ಸಹಕಾರದಿಂದ ಜೀವಂತ ಹೃದಯವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಣೆ ಮಾಡಲಾಯಿತು. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

ಅಭಿಷೇಕ್‌ ಅವರ ಹೃದಯವನ್ನು 47 ವರ್ಷದ ಛಾಯಾ ಎಂಬುವರಿಗೆ ಕಸಿ ಮಾಡುವಲ್ಲಿ ಎಂ.ಎಸ್. ರಾಮಯ್ಯ, ನಾರಾಯಣ ಹೃದಯಾಲಯದ ವೈದ್ಯರು ಯಶಸ್ವಿ ಯಾಗಿದ್ದಾರೆ.

ಹೃದಯ ಹೊತ್ತ ಆಂಬ್ಯುಲೆನ್ಸ್ ಸಾಗಿದ ವಿಡಿಯೋ

ಹೃದಯ ದಾನ ಪ್ರಕರಣಗಳು
* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಹೃದಯ ಸಾಗಣೆ ಮಾಡಲಾಗಿತ್ತು
* 2015ರ ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್‌ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಏ.13ರಂದು ಮಂಗಳೂರಿನಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು
* 2015ರ ಜುಲೈ 23ರಂದು ಚೇತನ್ ಹೃದಯವನ್ನು ದಾನ ಮಾಡಿದ್ದರು
* 2015ರ ಜುಲೈ 26ರಂದು ಇಳವರಸನ್ ಹೃದಯ ದಾನ ಮಾಡಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The heart of a brain dead auto driver Abhishek was donated by his family to a patient at MS Ramaiah hospital on Wednesday, June 1, 2016. Heart transferred to Victoria Hospital to MS Ramaiah. Bengaluru traffic police created green corridor to heart transportation.
Please Wait while comments are loading...