ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಇನ್ನು 3 ತಿಂಗಳಲ್ಲಿ ಬೆಂಗಳೂರು ವೈ ಫೈಮಯ"

By Mahesh
|
Google Oneindia Kannada News

ಬೆಂಗಳೂರು, ಜ.1: ಬೆಂಗಳೂರಿನ ಸುಮಾರು 110 ತಾಣಗಳಲ್ಲಿ ಉಚಿತ ವೈ-ಫೈ ಸೇವೆ ಯೋಜನೆಯನ್ನು ಅನುಷ್ಠಾನಗೊಳಿಸಲು ಇನ್ನೆರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ. ಫೆಬ್ರವರಿ ಅಂತ್ಯದೊಳಗೆ ಉಚಿತ ವೈ-ಫೈ ಸೇವೆ ಸಾರ್ವಜನಿಕರಿಗೆ ಲಭಿಸಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಆರ್ ಪಾಟೀಲ್ ಅವರು, ವೈ-ಫೈ ಸೇವೆಯನ್ನು ಒಬ್ಬರಿಗೆ ಮೂರು ತಾಸು ಸೀಮಿತಗೊಳಿಸಲಾಗಿದೆ. ಹಾಗೂ ಎಲ್ಲೆಡೆ ಪಾಸ್ ವರ್ಡ್ ಬಳಕೆ ಅಗತ್ಯವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಮೂರು ಕಡೆಗಳಂತೆ 90 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಸಿಗಲಿದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಚೇರಿ, ವಾಣಿಜ್ಯ ಕೇಂದ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. [ಎಲ್ಲ ಜಿಲ್ಲಾ ಕೇಂದ್ರದಲ್ಲೂ ಉಚಿತ ವೈ ಫೈ]

Bengaluru Wi Fi spots comes to reality by Feb 2015 : SR Patil

ಈಗಾಗಲೇ ಬೆಂಗಳೂರಿನ 14 ಕಡೆ ವೈ-ಫೈ ಸೇವೆ ಲಭ್ಯವಿದೆ. ಎಂಜಿ ರಸ್ತೆ, ಶಾಂತಿನಗರ ಬಸ್ ನಿಲ್ದಾಣ, ಕೋರಮಂಗಲ, ಯಶವಂತಪುರ, ಸಿಎಂಎಚ್ ರಸ್ತೆ, ಇಂದಿರಾನಗರ 100 ಅಡಿ ರಸ್ತೆ ಮುಂತಾದೆಡೆ ಫ್ರೀ ಹಾಟ್ ಸ್ಪಾಟ್ ಗಳನ್ನು ಅಳವಡಿಸಲಾಗಿದೆ. [ಮಂಗಳೂರಿನಲ್ಲಿ ಪ್ರಪ್ರಥಮ ವೈಫೈ ಮಾಲ್ ]

ಅದರೆ, ಬಹುತೇಕ ಕಡೆ ಇಂಟರ್‌ನೆಟ್ ನಿಧಾನವಾಗುತ್ತಿದೆ. ಬಳಕೆಗೆ ಯೋಗ್ಯವಾಗಿಲ್ಲ ಎಂದು ದೂರುಗಳು ಕೇಳಿ ಬಂದಿವೆ. ಅದನ್ನು ಸುಧಾರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ವೈ-ಫೈ ಸೇವೆಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಪಾಟೀಲ್ ತಿಳಿಸಿದರು.

ಐಟಿಬಿಟಿ ಕಂಪನಿಗಳಿಗೆ ರಕ್ಷಣೆ ಒದಗಿಸುವುದು ಗೃಹ ಇಲಾಖೆಯ ಜವಾಬ್ದಾರಿ. ಅದನ್ನು ಇಲಾಖೆ ನಿರ್ವಹಿಸಲಿದೆ. ಸಮನ್ವಯ ಸಾಧಿಸಿ ಭಯದ ವಾತಾವರಣ ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಎಸ್.ಆರ್.ಪಾಟೀಲ್ ತಿಳಿಸಿದರು.

English summary
Come Feb 2015, Bengaluru city will get 110 free Wi-Fi spots and two each in all district headquarters. IT Minister S R Patil said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X