ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನ

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 14 : ಬೆಂಗಳೂರಿನಲ್ಲಿ ತಾಪಮಾನ ಬೇಸಿಗೆಯಲ್ಲಿ ಬಟ್ಟೆ ಕಳಚಿದ ಹಾಗೆ ಕಳಚಿಬಿದ್ದಿದೆ. ದಟ್ಟ ಬಿಳಿ ಮೋಡಗಳು ಸೂರ್ಯನನ್ನು ಸೆನ್ಸಾರ್ ಮಾಡಿವೆ. ಅಪ್ಪಿ ಮುದ್ದಾಡುವ ಮುದ್ದು ಮನಸ್ಸುಗಳಿಗೆ ಇದಕ್ಕಿಂತ ಬೇರೆ ವಾತಾವರಣ ಬೇಕೆ? ಪ್ರೇಮಿಗಳ ದಿನದ ಶುಭಾಶಯಗಳು.

ಭರ್ರನೆ ಬೈಕಿನಲ್ಲಿ ಬರುತ್ತಿದ್ದರೆ ಹಾಕಿಕೊಂಡಿರುವ ಜರ್ಕಿನ್ ಕೂಡ ಸಾಲದೆಂಬಂಥ ಕುಳಿರ್ಗಾಳಿ. ಇನ್ನೇನು ಬೇಸಿಗೆ ಶುರುವಾಯಿತು ಇನ್ನೇಕೆ ಬೇಕು ಸ್ವೆಟರ್ ಎಂದು ಉಡಾಫೆಯಿಂದ ಬಂದವರಿಗೆ, ಥತ್ತೇರಿಕೆ ಸ್ವೆಟರ್ ಹಾಕಿಕೊಳ್ಳದೆ ತಪ್ಪು ಮಾಡಿದೆ ಎಂದು ಚಟಪಡಿಸುವಂತೆ ಮಾಡಿದೆ ಅಸಾಧ್ಯ ಚಳಿ.[ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?]

Bengaluru weather report : Temperature dips on Valentines Day

ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ 15ಕ್ಕಿಳಿದಿದ್ದರೆ. ಇನ್ನೆರಡು ದಿನಗಳಲ್ಲಿ 12 ಡಿಗ್ರಿ ಸೆಲ್ಶಿಯಸ್ ಮುಟ್ಟಿದರೂ ಅಚ್ಚರಿಯಿಲ್ಲ ಎಂದು ಹವಾಮಾನ ವರದಿಯನ್ನು ನೀಡುವ ವೆಬ್ ಸೈಟುಗಳು ಹೇಳುತ್ತಿವೆ.

ಮಾಘ ಮಾಸದ ಮಾಗಿಯ ಚಳಿಗೆ ರಸ್ತೆಯಲ್ಲಿ ಅಡ್ಡಾಡುತ್ತಿರುವ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಆದರೆ, ಕಬ್ಬನ್ ಪಾರ್ಕು, ಲಾಲ್ ಬಾಗು, ಸ್ಯಾಂಕಿ ಟ್ಯಾಂಕಿನ ದಂಡೆಯ ಮೇಲೆ ಪ್ರೇಮಲೋಕದ ಪ್ರೇಮದ ಸಂದೇಶವನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಿರುವ ಪ್ರಣಯಪಕ್ಷಿಗಳು ಥ್ಯಾಂಕ್ಸ್ ಎಂದು ಹೇಳಿದ್ದಾರೆ.

ಪ್ರೇಮಿಗಳ ಹಬ್ಬ ಎಂಬ ಪಾಶ್ಚಿಮಾತ್ಯರ ಆಚರಣೆ ನಗೆದುಬಿದ್ದುಹೋಗಲಿ, ಶಿವರಾತ್ರಿ ಇನ್ನೇನು ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಸೂರ್ಯ ತನ್ನ ಪ್ರತಾಪವನ್ನು ತೋರಿಸುವ ಮುನ್ನ ಬೆಚ್ಚಗಿನ ಅನುಭೂತಿಯಲ್ಲಿ ಪ್ರೇಮಿಗಳು ಜಗತ್ತನ್ನೇ ಮರೆತುಬಿಡಲಿ. ಪ್ರೇಮ ಗೆಲ್ಲಲಿ, ಪ್ರೇಮಿಗಳನ್ನು ದ್ವೇಷಿಸುವವರು ಸೋಲಲಿ.

English summary
Bengaluru weather report : Temperature has dipped drastically on Valentines Day. Minimum temperature recorded as 15 degree celcius. Meteorological department has predicted the minimum temperature may dip further in coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X