'ಬೆಂಗಳೂರು ನನಗೆ ಮನೆಯಾಗಿತ್ತು, ಈಗ ತತ್ತರಿಸಿದ್ದೇನೆ!'

Subscribe to Oneindia Kannada

ಬೆಂಗಳೂರು, ಫೆಬ್ರವರಿ 05 : ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣ ಇಡೀ ದೇಶದಲ್ಲಿ ಸುದ್ದಿ ಎಬ್ಬಿಸಿದೆ. ಇಷ್ಟಕ್ಕೂ ಸಂತ್ರಸ್ತ ಯುವತಿಯ ಮಾತುಗಳು ಏನು ಎಂಬುದನ್ನು ಮಾಧ್ಯಮಗಳು ಮತ್ತು ಪೊಲೀಸರು ಆಲಿಸಬೇಕಾಗುತ್ತದೆ. ಕರಾಳ ಘಟನೆಯ ಬಗ್ಗೆ ಯುವತಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಆಕೆಯ ಮಾತಿನಲ್ಲೇ ಕೇಳಿ...

"ಅದು ಭಾನುವಾರ, ನನ್ನ ಮನೆಯಿತುವ ಸಪ್ತಗಿರಿ ಪ್ರದೇಶದಲ್ಲಿ ಕೆಲವೊಂಧು ರೆಸ್ಟೋರೆಂಟ್ ಗಳು ಮಾತ್ರ ತೆರೆದುಕೊಂಡಿದ್ದವು. ನಾವು ನಮ್ಮ ಸ್ನೇಹಿತರೊಬ್ಬರ ವ್ಯಾಗನಾರ್ ಏರಿ ಹೊರಗಡೆ ಸುತ್ತಾಡಿಕೊಂಡು ಬರಲು ರಾತ್ರಿ 7.30 ರ ವೇಳೆಗೆ ಹೊರಟೆವು.[ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು]

bengaluru

ನಮ್ಮ ಸ್ನೇಹಿತರ ಜತೆಗೂಡಿ ತೆರಳುತ್ತಿದ್ದಾಗ ಜನರ ಗುಂಪೊಂದು ಆಫ್ರಿಕಾ ಮೂಲದ ಯುವಕನನ್ನು ಥಳಿಸುತ್ತಿರುವುದು ಕಂಡುಬಂತು. ನಾವು ಕೆಳಕ್ಕೆ ಇಳಿದು ಏನಾಗಿದೆ ಎಂದು ವಿಚಾರಿಸಲು ಮುಂದಾದೆವು.

ನಾವು ಮಾಡಿದ ದೊಡ್ಡ ತಪ್ಪು ಅದೇ. ವಿಚಾರಣೆ ಮಾಡಲು ಕೆಳಕ್ಕೆ ಇಳಿದರೆ ಜನರ ಸಿಟ್ಟು ನಮ್ಮ ಮೇಲೆ ತಿರುಗಿತು. ಕೆಲವರು ಕೂಗಾಡಿ ನಮ್ಮ ಮೇಲೆ ಏರಗಲು ಮುಂದಾದರು. ನಾವು ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದು ಅರಿವಾಯಿತು. ಅಲ್ಲಿಂದ ಜಾಗ ಖಾಲಿ ಮಾಡಲು ನಿರ್ಧಾರ ಮಾಡಿದೆವು. ಆದರೆ ನಮ್ಮನ್ನು ಅಡ್ಡ ಹಾಕಿದ ಜನರ ಗುಂಪು ಮುಂದಕ್ಕೆ ಹೋಗಲು ಬಿಡಲಿಲ್ಲ.[ವಿದ್ಯಾರ್ಥಿನಿ ಮೇಲೆ ಹಲ್ಲೆ: ಪರಂ ವಿರುದ್ಧ ಟ್ವಿಟ್ಟರ್ ಮಂದಿ ಗರಂ]

ಇಂಥ ಘಟನೆಯನ್ನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಸಪ್ತಗಿರಿ ಆಸ್ಪತ್ರೆ ಬಳಿ ನಮ್ಮ ಕಾರನ್ನು ತಡೆದಿದ್ದರು. ವಿರುದ್ಧ ದಿಕ್ಕಿನಲ್ಲಿ ಬರಬೇಕು ಎಂದು ಅಂದುಕೊಂಡರೂ ಗುಂಪು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇದಾದ ಮೇಲೆ ನಾವು ಕಾರಿಂದ ಕೆಳಕ್ಕೆ ಇಳಿದೆವು. ಕಾರಿನಿಂದ ಇಳಿದ ನನ್ನ ಸ್ನೇಹಿತನ್ನನ್ನು ಹಿಡಿದುಕೊಂಡು ಥಳಿಸಲು ಆರಂಭಿಸಿದ್ದರು.

ಅಷ್ಟರಲ್ಲೇ ನಮ್ಮ ಕಾರಿಗೆ ಬೆಂಕಿಯನ್ನು ಇಡಲಾಗಿತ್ತು. ಹತ್ತಿರದಲ್ಲೇ ಇದ್ದ ಪೊಲೀಸರ ಬಳಿ ಸಹಾಯ ಕೋರಿದರೂ ಯಾವ ಸ್ಪಂದನೆ ಸಿಗಲಿಲ್ಲ. ಬೆಂಕಿ ನಂದಿಸಲು ಮರಳು ಮತ್ತು ಮಣ್ಣನ್ನು ಕಾರಿನ ಕಡೆ ಎರಚಿದ ಪೊಲೀಸಪ್ಪ ಮೊಬೈಲನ್ ನಲ್ಲಿ ಮಾತನಾಡುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ.

ನಮ್ಮ ಮತ್ತೊಬ್ಬ ಸ್ನೇಹಿತನಿಗೆ ಸ್ಥಳಕ್ಕೆ ಬರಲು ಹೇಳಿದವು. ಆತ ಅವನ ಭಾರತದ ಸ್ನೇಹಿತನನ್ನು ಕರೆದುಕೊಂಡು ಬಂದ. ಆದರೆ ಅವರ ಮೇಲೆಯೂ ಗುಂಪು ಹಲ್ಲೆ ನಡೆಸಲು ಆರಂಭಿಸಿತ್ತು. ನನ್ನನ್ನು ಹಿಡಿದು ಎಳೆದರು. ನನ್ನ ಬಟ್ಟೆಯನ್ನು ಹರಿದು ಹಾಕಿ ಕೆಳಕ್ಕೆ ಬೀಳಿಸಿದರು.

ಇದಾದ ಮೇಲೆ ಹತ್ತಿರದಲ್ಲೇ ಹೋಗುತ್ತಿದ್ದ ಬಸ್ ಏರಲು ತೆರಳಿದರೆ ಅಲ್ಲಿಂದಲೂ ನಮ್ಮನ್ನು ಕೆಳಕ್ಕೆ ನೂಕಲಾಯಿತು. ಅಲ್ಲಿಗೂ ಆಗಮಿಸಿದ ಗುಂಪು ನಮ್ಮನ್ನು ಮತ್ತೆ ಎಳೆದುಕೊಂಡು ಬಂದಿತು. ಈ ವೇಳೆಗೆ ನಾನು ಧರಿಸಿದ್ದ ಟೀ ಶರ್ಟ್ ಹರಿದಿತ್ತು. ನನ್ನ ಒಳಉಡುಪುಗಳು ಹೊರಕ್ಕೆ ಕಾಣಿಸುತ್ತಿದ್ದವು. ಆದರೆ ಗುಂಪು ಮತ್ತೆ ನನ್ನನ್ನು ಸುತ್ತುವರಿದಿತ್ತು.

ಈ ವೇಳೆ ಭಾರತೀಯರೊಬ್ಬರು ನನಗೆ ಅವರು ಧರಿಸಿದ್ದ ಟೀ ಶರ್ಟ್ ಬಿಚ್ಚಿಕೊಟ್ಟರು. ಇದಾದ ಮೇಲೆ ಸ್ಥಳಕ್ಕೆ ಬಂದ ಕೆಲವರು ನೀವು ಇಲ್ಲಿಂದ ಹೊರಡಿ ಎಂದು ತಿಳಿಸಿದರು. ಇರಾನ್ ಮೂಲದ ವ್ಯಕ್ತಿಯೊಬ್ಬರು ನಮ್ಮನ್ನು ಗುಂಪಿನ ಕೈಯಿಂದ ಬಿಡಿಸಿದ್ದರು.

ಅಲ್ಲಿಂದ ತಪ್ಪಿಸಿಕೊಂಡು ಸ್ನೇಹಿತರ ಮನೆ ಸೇರಿದಾಗ ಸಮಯ 9 ಗಂಟೆ. ನಾನು ಗಾಯಗಳಿಂದ ಜರ್ಜರಿತನಾಗಿ ಹೋಗಿದ್ದೆ, ನನ್ನ ಪಾಲಕರೊಂದಿಗೆ ಮಾತನಾಡುವ ಯತ್ನ ಮಾಡಿದರೂ ಸಫಲವಾಗಲಿಲ್ಲ.

ಬೆಂಗಳೂರು ನನ್ನ ಮನೆ, ಇಲ್ಲಿ ನಾನು ಶಾಂತಿಯುತ ಜೀವನವನ್ನು ಕಂಡಿದ್ದೇನೆ , ಅನುಭವಿಸಿದ್ದೇನೆ. ನಾನು ನನ್ನ ವಿದ್ಯಾಭ್ಯಾಸವನ್ನು ಮುಗಿಸಿಯೇ ಇಲ್ಲಿಂದ ತೆರಳುತ್ತೇನೆ".

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 21-year-old girl, who hailed from Tanzania, Africa, has been stripped off, beaten up and paraded naked by a mob. Here is the Statement of Tanzania women.
Please Wait while comments are loading...