ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನೀಗ 483 ಮರಗಳ ತಾಯಿ ಎಂದವರು ಯಾರು?

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್, 08: ನಿಮ್ಮ ಮನೆಯಲ್ಲಿ ಮಗುವೊಂದು ಜನಿಸಿದರೆ ಕೂಡಲೇ ಸಸಿಯೊಂದನ್ನು ನೆಡಿ. ತನ್ಮೂಲಕ ಪರಿಸರ ಸಂರಕ್ಷಣೆ ನಿಮ್ಮ ಕೊಡುಗೆ ನೀಡಿ. ಹೀಗಂತ ಕರೆ ನೀಡಿದವರು ಖ್ಯಾತ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ.

ನಗರದ ಪ್ರತಿಷ್ಠಿತ ಆಸ್ಪತ್ರೆ ವಾಸವಿ ಹಾಸ್ಪಿಟಲ್ಸ್ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನನಗೆ ಮದುವೆಯಾದ ನಂತರ 25 ವರ್ಷ ಮಗುವಾಗಿರಲಿಲ್ಲ. ಈ ಕೊರಗಿನಲ್ಲೇ ಕಾಲ ಕಳೆಯುವುದನ್ನು ಬಿಟ್ಟು ನಾನು ಸಸಿ ನೆಟ್ಟು, ಬೆಳೆಸುವ ಮೂಲಕ ನನ್ನ ಪ್ರೀತಿ ತೋರಿಸಲು ನಿರ್ಧರಿಸಿದೆ. ಶೀಘ್ರವೇ 10 ಸಸಿಗಳು ನನ್ನ ಮಕ್ಕಳಾಗಿ ಬೆಳೆಯತೊಡಗಿದರು. ಕ್ರಮೇಣ ಈ ಸಂಖ್ಯೆ 483ಕ್ಕೆ ಮುಟ್ಟಿತು. ನಾನೀಗ 483 ಮರಗಳ ತಾಯಿ ಎಂದು ಹೇಳಿದರು.[ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ]

women

ಮಹಿಳಾ ಆರೋಗ್ಯ ಸಪ್ತಾಹಕ್ಕೆ ಮಂಗಳವಾರ ಚಾಲನೆ ನೀಡಿದರು. ಸಪ್ತಾಹ ಮಾರ್ಚ್ 14 ರವರೆಗೆ ನಡೆಯಲಿದೆ. ಈ ಸಪ್ತಾಹದಲ್ಲಿ ಮಹಿಳೆಯರ ಆರೋಗ್ಯ ಸಂಬಂಧಿಸಿದ ವಿಚಾರಗಳಿಗೆ ಅದರಲ್ಲೂ ವಿಶೇಷವಾಗಿ ಮಾರಕ ಕ್ಯಾನ್ಸರ್ ಜಾಗೃತಿ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ವಾಸವಿ
ಹಾಸ್ಪೀಟಲ್ಸ್ ಆಯೋಜಿಸಿದೆ.

ಜಾಗೃತಿ ಮೂಡಿಸುವುದು, 100 ಉಚಿತ ಮ್ಯಾಮೋಗ್ರಾಮ್ ಪರೀಕ್ಷೆಗಳನ್ನು ನಡೆಸುವುದು, ಕ್ಯಾನ್ಸರ್ ಸ್ಕ್ರೀನಿಂಗ್ ಸಂಬಂಧಿಸಿದ ಜಾಗತಿ ಕಾರ್ಯಕ್ರಮ ನಡೆಸುವುದು ಮತ್ತು ಒಂದು ತಿಂಗಳ ಅವಧಿವರೆಗೂ ಎಲ್ಲಾ ಮಹಿಳೆಯರಿಗೂ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.[ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ: ಸಮಗ್ರ ನೋಟ]

ಹೀಗಾಗಿ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕೇವಲ ಜಾಗೃತಿ ಸಮಾರಂಭಗಳನ್ನು ನಡೆಸಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದಕ್ಕೆ ಬದಲಾಗಿ ಮಹಿಳೆಯರು ನಿತ್ಯದ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡುವ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಾಸವಿ ಹಾಸ್ಪೀಟಲ್ಸ್ ಬೆಂಗಳೂರಿನ ಮಹಿಳೆಯರಿಗೆ ನಿತ್ಯ ಬದುಕಿನಲ್ಲಿ ನೆರವಾಗುವಂತಹ ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

women

ನಟಿ ಹಾರ್ದಿಕಾ ಶೆಟ್ಟಿ ಮಹಿಳೆಯರಿಗಾಗಿ ಹಲವು ಜಾಗೃತಿ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮ ನಡೆಸುತ್ತಿರುವ ವಾಸವಿ ಹಾಸ್ಪೀಟಲ್ ಕೆಲಸವನ್ನು ಶ್ಲಾಘಿಸಿದರು. ವಾಸವಿ ಹಾಸ್ಪೀಟಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ್ ಮಾಕಂ ಮಾತನಾಡಿ, ಅಧ್ಯಯನವೊಂದರ ಪ್ರಕಾರ ಬೆಂಗಳೂರು ಈ ದೇಶದ ಸ್ತನ ಕ್ಯಾನ್ಸರ್ ರಾಜಧಾನಿಯಾಗಿ ಪರಿವರ್ತಿತವಾಗುತ್ತಿದೆ. ಮಹಿಳೆಯರು ತಮಗೆ ಸ್ತನ ಕ್ಯಾನ್ಸರ್ ಸಾಧ್ಯತೆಯಿದೆಯೇ ಎಂಬುದನ್ನು ಅರಿತುಕೊಳ್ಳಲು ಮ್ಯಾಮೋಗ್ರಾಮ್ ಪರೀಕ್ಷೆ ಮಾಡಿಸಿಕೊಳ್ಳಬೇಕು.[ಆಸಿಡ್ ದಾಳಿಗೆ ಸಿಕ್ಕವರ ಯಶೋಗಾಥೆ "ಶೀರೋಸ್"]

ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಮಾರ್ಗಸೂಚಿ ಪ್ರಕಾರ 40 ರಿಂದ 45ರ ವಯೋಮಾನದ ಮಹಿಳೆಯರು ಮ್ಯಾಮೋಗ್ರಾಮ್ ಪರೀಕ್ಷೆಯನ್ನು ಮಾಡಿಸಬೇಕು ಮತ್ತು 55 ರಿಂದ 74 ವಯೋಮಾನದ ಮಹಿಳೆಯರು ಪ್ರತಿ ಎರಡು ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್ ಪರೀಕ್ಷೆಗೆ ಒಳಗಾಗಬೇಕು. ಆದರೆ, ಜಾಗೃತಿಯ ಕೊರತೆ ಅಥವಾ ದುಬಾರಿ ಶುಲ್ಕದ ಕಾರಣಕ್ಕಾಗಿ ಮಹಿಳೆಯರು ಮ್ಯಾಮೋಗ್ರಾಮ್ ಪರೀಕ್ಷೆ ಮಾಡಿಸುವುದಿಲ್ಲ.

ಹೀಗಾಗಿ ನಾವು ಅರ್ಹ ರೋಗಿಗಳಿಗಾಗಿ 100 ಉಚಿತ ಮ್ಯಾಮೋಗ್ರಾಮ್ ತಪಾಸಣೆಯನ್ನು ಆಯೋಜಿಸಿದ್ದೇವೆ. ತಾವು ಯಾವ ಮಟ್ಟಿಗೆ ಸ್ತನ ಕ್ಯಾನ್ಸರ್ ಪೀಡಿತರಾಗುವ ಸಾಧ್ಯತೆ ಹೊಂದಿದ್ದೇವೆ ಎಂಬ ಬಗ್ಗೆ ಮಹಿಳೆಯರಿಗೆ ನಿಖರ ಮಾಹಿತಿಯನ್ನು ನೀಡುವುದು ನಮ್ಮ ಗುರಿ. ತನ್ಮೂಲಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ರೋಗಿಗಳು ಹಾಗೂ ಅವರ ಹಿತಚಿಂತಕರಿಗೆ ನೆರವಾಗುವುದು ನಮ್ಮ ಉದ್ದೇಶ ಎಂದರು.[ಮಹಿಳಾ ದಿನಾಚರಣೆ ವಿಶೇಷ ವಿಡಿಯೋ]

ಉಚಿತ ಯೋಗ ತರಗತಿ : ಈ ಸಂದರ್ಭದಲ್ಲಿ ವಾಸವಿ ಹಾಸ್ಪೀಟಲ್ಸ್ ಮಹಿಳೆಯರಿಗಾಗಿ ಉಚಿತ ಯೋಗ ತರಗತಿಗಳಿಗೂ ಚಾಲನೆ ನೀಡಲಾಯಿತು. ಮಾ. 14 ರಿಂದ ಈ ತರಗತಿಗಳು ಆರಂಭವಾಗಲಿವೆ. ಗರ್ಭಿಣಿಯರು ಯೋಗ ಮಾಡುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದೆ ಜತೆಗೆ ದೈಹಿಕ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ.

English summary
Bengaluru: Environmentalist Saalumarada Thimmakka inaugurated the International Women's day event at Vasavi Hospitals Bengaluru on 8 march. Vasavi Hospitals has took a initiative to giving medical fecility to women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X