ನೇತಾಜಿ ಬಗ್ಗೆ ಬೆಂಗಳೂರಲ್ಲಿ ಸುಬ್ರಮಣಿಯನ್ ಸ್ವಾಮಿ ಮಾತಾಡಲಿದ್ದಾರೆ

Subscribe to Oneindia Kannada

ಬೆಂಗಳೂರು,ಜನವರಿ, 22: ಉತ್ತಿಷ್ಠ ಭಾರತ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನಾಚರಣೆಯ ಅಂಗವಾಗಿ "ಯುವಸಂಕ್ರಮಣ" ಎಂಬ ಕಾರ್ಯಕ್ರಮವನ್ನು ಜನವರಿ 23 ಮತ್ತು 24 ರಂದು ವಿಜಯನಗರದಲ್ಲಿ ಹಮ್ಮಿಕೊಂಡಿದೆ, ಬೃಹತ್ ಉದ್ಯೋಗಮೇಳ ಮತ್ತು ರಾಷ್ಟ್ರದೇವೋಭವ ಎಂಬ ನೃತ್ಯರೂಪಕ ಕಾರ್ಯಕ್ರಮದ ಹೈಲೈಟ್.

ವಿಜಯನಗರದಲ್ಲಿನ ಎಮ್​ಸಿ.ಲೇಔಟ್​ನ ನ್ಯೂ ಪಬ್ಲಿಕ್ ಶಾಲೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವಜನತೆ ತಮ್ಮ ದಿಕ್ಕನ್ನು ಬದಲಿಸಿ ದೇಶ ಸೇವೆಯ ಸಂಕಲ್ಪವನ್ನು ಮಾಡುವುದು ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರಿಗೆ ಅರ್ಪಿಸುತ್ತಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.[ಮುಸ್ಲಿಮರಿಗೆ ಸ್ವಾಮಿ ನೀಡಿದ ಸಂಡೇ ಪ್ಯಾಕೇಜ್: 'ಲಾರ್ಡ್ ಕೃಷ್ಣ]

ದೇಶಭಕ್ತಿಯನ್ನು ಪ್ರಚುರಪಡಿಸುವುದರೊಂದಿಗೆ, ಯುವ ಜನತೆಗೆ ಉದ್ಯೋಗ ಕಲ್ಪಿಸಿಕೊಡುವುದಕ್ಕೂ ಮೇಳ ಶ್ರಮಿಸಲಿದೆ. ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾಗಲಿದ್ದಾರೆ. ಚಿಂತಕ ಡಾ. ಸುಬ್ರಮಣಿಯನ್ ಸ್ವಾಮಿ ಉಪನ್ಯಾಸ ನೀಡಲಿದ್ದಾರೆ.

ಉಪನ್ಯಾಸ

ಉಪನ್ಯಾಸ

ಜನವರಿ 23ರ ಉದ್ಯೋಗ ಮೇಳದಲ್ಲಿ ಸುಮಾರು 30 ವಿವಿಧ ಕ್ಷೇತ್ರದ ಕಂಪನಿಗಳು ಭಾಗವಹಿಸಲಿವೆ. ಜನವರಿ 24ರ ಸಭಾ ಕಾರ್ಯಕ್ರಮದಲ್ಲಿ ಚಿಂತಕ ಡಾ. ಸುಬ್ರಮಣಿಯನ್ ಸ್ವಾಮಿ ನೇತಾಜಿಯ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಲಿದ್ದಾರೆ. ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪೂರ್ಣಾನಂದರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ತನ್ನ ಸುಮಧುರ ಕಂಠದಿಂದ ಪ್ರಸಿದ್ಧವಾಗಿರುವ ಪುಟ್ಟ ಸೂರ್ಯಗಾಯತ್ರಿ ಮತ್ತು ಸೂರ್ಯಗಾಯತ್ರಿಯ ಸಂಗೀತ ಗುರು ಕುಲದೀಪ್ ಪೈ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತಮೇಳ ನಡೆಯಲಿದೆ.

ರಾಷ್ಟ್ರದೇವೋಭವ

ರಾಷ್ಟ್ರದೇವೋಭವ

ನೃತ್ಯ, ಹಾಡು ಮತ್ತು ಮಾತು ಮಾತುಗಳಿಂದ ದೇಶಭಕ್ತಿಯನ್ನು ಬಡಿದೆಬ್ಬಿಸುವ ವಿನೂತನ ಮತ್ತು ವಿಶಿಷ್ಟ ಕಾರ್ಯಕ್ರಮ ' ರಾಷ್ಟ್ರದೇವೋಭವ ' ಎಂಬ ನೃತ್ಯರೂಪಕವನ್ನು ಸನಾತನ ನಾಟ್ಯಾಲಯ ಮತ್ತು ಆದರ್ಶ ಗೋಖಲೆ ತಂಡದವರು ಪ್ರದರ್ಶಿಸಲಿದ್ದಾರೆ.

 ಹೆಚ್ಚಿನ ಮಾಹಿತಿಗೆ

ಹೆಚ್ಚಿನ ಮಾಹಿತಿಗೆ

ಹೆಚ್ಚಿನ ಮಾಹಿತಿಗಾಗಿ 98806-88133, 99645-78840, 99641-42207 ಸಂಖ್ಯೆ ಸಂರ್ಪಸಬಹುದಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಭಗವದ್ಗೀತೆಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: Uttishta Bharatha conducting "Yuva Sankramana" a job fair and meet on 23, 24 Januvary at Vijayanagara Bengaluru. BJP leader Subramanian Swamy will participate in this event.
Please Wait while comments are loading...